Karnataka Lok Sabha Exit Poll Result 2024 : ಕೈ ಕೊಡ್ತಾ ಕಾಂಗ್ರೆಸ್ ಗ್ಯಾರಂಟಿ ಲೆಕ್ಕಾಚಾರ? ಮತ್ತೆ ಅರಳಲಿದ್ಯಾ ಕಮಲ!?
ನವದೆಹಲಿ, ಜೂನ್. 02: ಜೂನ್ 4 ರಂದು ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶಗಳು ಪ್ರಕಟವಾಗಲಿವೆ. ಅದಕ್ಕೂ ಮುನ್ನ ಕೊನೆಯ ಹಂತದ ಮತದಾನ ಮುಗಿದ ಕೂಡಲೆ ಹಲವು ಮಾಧ್ಯಮ ಸಂಸ್ಥೆಗಳು, ಟಿವಿ ಚಾನೆಲ್‌ಗಳು ಸಂಭವನೀಯ ಫಲಿತಾಂಶಗಳ ಭವಿಷ್ಯ ಹೇಳುವ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ.
ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ದೇಶದಲ್ಲಿ ನಡೆದ ಎರಡನೇ ಹಂತದ ಮತದಾನದ ವೇಳೆ ರಾಜ್ಯದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆದಿತ್ತು. ಬಳಿಕ ಮೇ 7 ರಂದು 3ನೇ ಹಂತದ ಮತದಾನ ನಡೆದಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಪಾರುಪತ್ಯ ಮೆರೆದಿತ್ತು, ಕಾಂಗ್ರೆಸ್, ಜೆಡಿಎಸ್ ಒಂದೊಂದು ಕ್ಷೇತ್ರಗಳಿಗೆ ತೃಪ್ತಿ ಪಟ್ಟಿದ್ದವು. ಈ ಬಾರಿಯ ಲೋಕಸಭಾ ಎಕ್ಸಿಟ್ ಪೋಲ್ ಫಲಿತಾಂಶಗಳು ಕೂಡ ಬಿಜೆಪಿಯ ಗೆಲುವನ್ನೇ ತಿಳಿಸುತ್ತಿದೆ. ಹಾಗಾದ್ರೆ. ಯಾವ ಸಂಸ್ಥೆ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ನೀಡಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿದೆ. ಬಿಜೆಪಿ ಮತ್ತು ಜಾತ್ಯಾತೀತ ಜನತಾದಳ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ 25 ಮತ್ತು ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇದರಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರು ಬಿಜೆಪಿ ಟಿಕೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಸ್ಪರ್ಧಿಸಿದ್ದಾರೆ.
ಎಕ್ಸಿಟ್ ಪೋಲ್‌ಗಳು ಏನು ಭವಿಷ್ಯ ನುಡಿದಿವೆ?
Today's Chanakya ಎಕ್ಸಿಟ್ ಪೋಲ್
ಬಿಜೆಪಿ- ಜೆಡಿಎಸ್: 24
ಕಾಂಗ್ರೆಸ್: 4
News18 ಎಕ್ಸಿಟ್ ಪೋಲ್
ಎನ್‌ಡಿಎ: 23-26
ಕಾಂಗ್ರೆಸ್: 3-7
Times Now-ETG Research ಎಕ್ಸಿಟ್ ಪೋಲ್
ಎನ್‌ಡಿಎ: 23-26
ಕಾಂಗ್ರೆಸ್: 3-7
ಜನ್ ಕಿ ಬಾತ್ (Jan Ki Baat) ಎಕ್ಸಿಟ್ ಪೋಲ್
ಎನ್‌ಡಿಎ: 21-23
ಕಾಂಗ್ರೆಸ್: 5-7

TV9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್ (TV9 Bharatvarsh-Polstrat) ಎಕ್ಸಿಟ್ ಪೋಲ್
ಎನ್‌ಡಿಎ: 20
ಕಾಂಗ್ರೆಸ್: 8
ಆಕ್ಸಿಸ್ ಮೈ ಇಂಡಿಯಾ (Axis My India) ಎಕ್ಸಿಟ್ ಪೋಲ್
ಎನ್‌ಡಿಎ: 23-25
ಕಾಂಗ್ರೆಸ್: 3
Republic PMARQ ಎಕ್ಸಿಟ್ ಪೋಲ್
ಎನ್‌ಡಿಎ: 22
ಕಾಂಗ್ರೆಸ್: 6
ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್
ಬಿಜೆಪಿ ಜೆಡಿಎಸ್ ಮೈತ್ರಿ- 23- 25
ಕಾಂಗ್ರೆಸ್- 3 - 5
ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ (Republic Bharat-Matrize) ಎಕ್ಸಿಟ್ ಪೋಲ್
ಎನ್‌ಡಿಎ: 22
ಕಾಂಗ್ರೆಸ್: 6
ಈ ಎಲ್ಲಾ ಎಕ್ಸಿಟ್ ಪೋಲ್‌ಗಳ ಫಲಿತಾಂಶವನ್ನು ಗಮನಿಸಿದರೆ ಈ ಬಾರಿಯೂ ಕೂಡ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದ ಗದ್ದುಗೆ ಏರುವುದು ಖಚಿತವಾದಂತಿದೆ. ಕಾಂಗ್ರೆಸ್ 7 ರಿಂದ 8 ಸ್ಥಾನಗಳಿಗೆ ಸಮಾಧಾನ ಪಡಬೇಕಾದ ಸ್ಥಿತಿ ಇದೆ. ಆದರೆ, ಇವು ಕೇವಲ ಎಕ್ಸಿಟ್ ಪೋಲ್‌ಗಳಾಗಿದ್ದು, ಅಧಿಕೃತ ಫಲಿತಾಂಶ ಜೂನ್ ನಾಲ್ಕರಂದು ಬರಲಿದೆ.
ಕಾಂಗ್ರೆಸ್ ಈ ಎಕ್ಸಿಟ್ ಪೋಲ್‌ಗಳ ಫಲಿತಾಂಶವನ್ನು ನಿರಾಕರಿಸಿದೆ. ಅಧಿಕೃತವಾಗಿ ಫಲಿತಾಂಶ ಬರುವವರೆಗೂ ಕಾಯಲು ಹೇಳಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಗೆ ಹಲವು ಸಮೀಕ್ಷೆಗಳು ಬಹುಮತ ನೀಡಿದ್ದವು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದೇ ಹೇಳಿದ್ದವು. ಆದರೆ, ಕಾಂಗ್ರೆಸ್ ನಾಯಕರು ಫಲಿತಾಂಶಕ್ಕಾಗಿ ಕಾಯುವಂತೆ ಹೇಳಿದ್ದರು. ಅವರ ನಿರೀಕ್ಷೆಯಂತೆಯೇ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿ ಎಕ್ಸಿಟ್ ಪೋಲ್‌ಗಳ ಭವಿಷ್ಯವನ್ನು ಸುಳ್ಳಾಗಿಸಿತ್ತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications