ಲೋಕಸಭಾ ಚುನಾವಣೆ : ಕರ್ನಾಟಕ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

Recommended Video

      Lok Sabha Elections 2019 : ಕರ್ನಾಟಕ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

      ಬೆಂಗಳೂರು, ಮಾರ್ಚ್ 07 : ಹಾಲಿ ಕಾಂಗ್ರೆಸ್ ಸಂಸದರು ಇರುವ ಲೋಕಸಭಾ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಕಾಂಗ್ರೆಸ್ ತೀರ್ಮಾನಿಸಿದೆ. 2019ರ ಲೋಕಸಭಾ ಚುನಾವಣೆಗೆ ಪಕ್ಷ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

      ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಗುರುವಾರ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮುಂತಾದವರು ಪಾಲ್ಗೊಂಡಿದ್ದರು.

      ಮಂಡ್ಯ ಮತ್ತು ಹಾಸನವನ್ನು ನಾವು ಕೇಳಿಲ್ಲ. ಆದರೆ, ಜೆಡಿಎಸ್ ತುಮಕೂರು, ಚಿಕ್ಕಬಳ್ಳಾಪುರ, ರಾಯಚೂರು ಕೇಳುತ್ತಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಜೆಡಿಎಸ್‌ಗೆ ಹೆಚ್ಚು ಸ್ಥಾನಗಳನ್ನು ಬಿಟ್ಟು ಕೊಡುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

      ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ಗೆ ನಷ್ಟ ಆಗಲಿದೆ ಎಂದು ಚರ್ಚಿಸಲಾಯಿತು. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಯಿತು. ಕಾಂಗ್ರೆಸ್ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಮಾರ್ಚ್ 11ರಂದು ಸಂಭಾವ್ಯ ಪಟ್ಟಿ ಬಗ್ಗೆ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಂಭಾವ್ಯ ಪಟ್ಟಿ ಹೀಗಿದೆ....

      ಸಂಭಾವ್ಯ ಅಭ್ಯರ್ಥಿಗಳು

      ಸಂಭಾವ್ಯ ಅಭ್ಯರ್ಥಿಗಳು

      * ಬೀದರ್ - ಈಶ್ವರ ಖಂಡ್ರೆ, ಸಿ.ಎಂ.ಇಬ್ರಾಹಿಂ, ವಿಜಯ್ ಸಿಂಗ್
      * ಬಾಗಲಕೋಟೆ - ವೀಣಾ ಕಾಶಪ್ಪನವರ್, ಅಜಯ್ ಕುಮಾರ್, ಬಾಯಕ್ಕ ಮೇಟಿ
      * ವಿಜಯಪುರ - ರಾಜು ಅಲಗೂರು, ಪ್ರಕಾಶ್ ರಾಥೋಡ್, ಕಾಂತಾ ನಾಯಕ್
      * ಕೊಪ್ಪಳ - ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರೂಪಾಕ್ಷಪ್ಪ

      ಯಾವ ಕ್ಷೇತ್ರಕ್ಕೆ ಯಾರು?

      ಯಾವ ಕ್ಷೇತ್ರಕ್ಕೆ ಯಾರು?

      * ಬೆಳಗಾವಿ - ಅಂಜಲಿ ನಿಂಬಾಳ್ಕರ್, ಚನ್ನರಾಜ್ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್
      * ಧಾರವಾಡ - ವಿನಯ್ ಕುಲಕರ್ಣಿ, ಶಾಖಿರ್ ಸನದಿ, ವೀರಣ್ಣ ಮತ್ತೀಕಟ್ಟಿ
      * ಹಾವೇರಿ - ಬಸವರಾಜ್ ಶಿವಣ್ಣನವರ್, ಸಲೀಂ ಅಹಮದ್, ಡಿ.ಆರ್.ಪಾಟೀಲ್
      * ದಾವಣಗೆರೆ - ಎಸ್‌.ಎಸ್.ಮಲ್ಲಿಕಾರ್ಜುನ, ಹೆಚ್‌.ಎಂ.ರೇವಣ್ಣ

      ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ

      ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ

      * ಉತ್ತರ ಕನ್ನಡ - ಪ್ರಶಾಂತ್ ದೇಶಪಾಂಡೆ, ನಿವೇದಿತಾ ಆಳ್ವಾ, ಭೀಮಣ್ಣ ನಾಯ್ಕ್
      * ಉಡುಪಿ-ಚಿಕ್ಕಮಗಳೂರು - ಆರತಿ ಕೃಷ್ಣ, ವಿಜಯ್ ಕುಮಾರ್, ಪ್ರಮೋದ್ ಮಧ್ವರಾಜ್, ಬಿ.ಕೆ.ಹರಿಪ್ರಸಾದ್
      * ದಕ್ಷಿಣ ಕನ್ನಡ - ರಮಾನಾಥ ರೈ, ಐವಾನ್ ಡಿಸೋಜಾ, ಮೋಯಿದ್ದೀನ್ ಬಾವಾ, ವಿನಯ್ ಕುಮಾರ್ ಸೊರಕೆ
      * ಮೈಸೂರು-ಕೊಡಗು - ವಿಜಯ ಶಂಕರ್, ಸೂರಜ್ ಹೆಗ್ಡೆ

      ಬೆಂಗಳೂರು ನಗರ

      ಬೆಂಗಳೂರು ನಗರ

      * ಬೆಂಗಳೂರು ಕೇಂದ್ರ - ರಿಜ್ವಾನ್ ಅರ್ಷದ್, ರೋಷನ್ ಬೇಗ್, ಎಚ್.ಟಿ.ಸಾಂಗ್ಲಿಯಾನ, ಸಲೀಂ ಅಹಮದ್
      * ಬೆಂಗಳೂರು ದಕ್ಷಿಣ - ಪ್ರಿಯಕೃಷ್ಣ, ರಾಮಲಿಂಗಾ ರೆಡ್ಡಿ
      * ಬೆಂಗಳೂರು ಉತ್ತರ - ಸಿ.ನಾರಾಯಣ ಸ್ವಾಮಿ, ಎಂ.ಆರ್.ಸೀತಾರಾವ್, ಬಿ.ಎಲ್.ಶಂಕರ್
      * ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್ (ಹಾಲಿ ಸಂಸದ)

      ಹಾಲಿ ಸಂಸದರು

      ಹಾಲಿ ಸಂಸದರು

      * ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
      * ಕಲಬುರಗಿ - ಮಲ್ಲಿಕಾರ್ಜು ಖರ್ಗೆ
      * ರಾಯಚೂರು- ಬಿ.ವಿ.ನಾಯಕ್
      * ಬಳ್ಳಾರಿ- ವಿ.ಎಸ್.ಉಗ್ರಪ್ಪ
      * ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ
      * ತುಮಕೂರು - ಮುದ್ದ ಹನುಮೇಗೌಡ
      * ಚಾಮರಾಜನಗರ - ಆರ್.ಧ್ರುವ ನಾರಾಯಣ್
      * ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
      * ಕೋಲಾರ - ಕೆ.ಎಚ್.ಮುನಿಯಪ್ಪ

      ಚರ್ಚೆ ನಡೆಸಲಾಗಿದೆ

      ಚರ್ಚೆ ನಡೆಸಲಾಗಿದೆ

      ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು,'ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗಿದೆ. ಒಂದೊಂದು ಕ್ಷೇತ್ರದಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳಿದ್ದಾರೆ. ಮತ್ತೊಮ್ಮೆ ಚರ್ಚಿಸಿ ಮೂವರ ಹೆಸರನ್ನು ಶಿಫಾರಸು ಮಾಡಿ ಸ್ಕ್ರೀನಿಂಗ್ ಕಮಿಟಿಗೆ ಕಳಿಸಲಾಗುತ್ತದೆ' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+