ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಬಿಜೆಪಿಗೆ 25, ಮೂರು ಸ್ಥಾನ ಹಂಚಿಕೊಂಡ ಇತರರು
ಬೆಂಗಳೂರು, ಮೇ 23: ಹದಿನೇಳನೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದಲ್ಲಿ ಬಿಜೆಪಿಗೆ 25 ಸ್ಥಾನಗಳು ಲಭ್ಯವಾಗಿದೆ, ಇನ್ನುಳಿದ ಮೂರು ಸ್ಥಾನವನ್ನು ಇತರರು ಹಂಚಿಕೊಂಡಿದ್ದಾರೆ.
ಏಪ್ರಿಲ್ 18 ಹಾಗೂ 23ರಂದು ಎರಡು ಹಂತದಲ್ಲಿ ನಡೆದ ಚುನಾವಣೆಯನ್ನು ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ರಚಿಸಿಕೊಂಡು ಒಮ್ಮತದ ಅಭ್ಯರ್ಥಿಗಳನ್ನು ಹಾಕಿದ್ದರು.
ಬಿಜೆಪಿಯು 2014ರ 17 ಸೀಟುಗಳಿಂದ 20ರ ಗಟಿ ದಾಟುವುದನ್ನು ನಿರೀಕ್ಷಿಸುತ್ತಿದ್ದರು, ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟವು ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅರ್ಧದಷ್ಟು ಸೀಟುಗಳನ್ನಾದರೂ ಪಡೆಯುವ ಬಯಕೆಯಲ್ಲಿದ್ದರು ಆದರೆ ಬಿಜೆಪಿಗೆ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದೆ.

2014ರಲ್ಲಿ ಬಿಜೆಪಿ 17 ಸೀಟು ಗೆದ್ದಿದ್ದರೆ ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸೀಟುಗಳನ್ನು ಗೆದ್ದಿತ್ತು ಆಗ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈ ಬಾರಿ ರಾಜ್ಯದ 27 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದೆ.
ಆದರೆ ಮಂಡ್ಯದಲ್ಲಿ ಮಾತ್ರ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಾಗೂ ಮೈತ್ರಿಕೂಟದ ನಿಖಿಕ್ ಕುಮಾರಸ್ವಾಮಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಏಪ್ರಿಲ್ 11ರಿಂದ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ-ಪ್ರಮೋದ್ ಮಧ್ವರಾಜ್
ಹಾಸನ: ಎ ಮಂಜು-ಪ್ರಜ್ವಲ್ ರೇವಣ್ಣ
ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್, ಮಿಥುನ್ ರೈ
ಚಿತ್ರದುರ್ಗ: ಎ ನಾರಾಯಣಸ್ವಾಮಿ, ಬಿಎನ್ ಚಂದ್ರಪ್ಪ
ತುಮಕೂರು: ಜಿಎಸ್ ಬಸವರಾಜು, ಎಚ್‌ಡಿ ದೇವೇಗೌಡರ
ಮಂಡ್ಯ: ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ
ಮೈಸೂರು: ಪ್ರತಾಪ್ ಸಿಂಹ, ವಿಜಯಶಂಕರ್
ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್, ಆರ್ ದ್ರುವನಾರಾಯಣ
ಬೆಂಗಳೂರು ಗ್ರಾಮೀಣ: ಅಶ್ವತ್ಥನಾರಾಯಣ, ಡಿಕೆ ಸುರೇಶ್
ಬೆಂಗಳೂರು ಉತ್ತರ: ಡಿವಿ ಸದಾನಂದ ಗೌಡ, ಕೃಷ್ಣ ಬೈರೇಗೌಡ
ಬೆಂಗಳೂರು ಕೇಂದ್ರ: ಪಿಸಿ ಮೋಹನ್, ರಿಜ್ವಾನ್ ಅರ್ಷದ್
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ, ಬಿಕೆ ಹರಿಪ್ರಸಾದ್
ಚಿಕ್ಕಬಳ್ಳಾಪುರ: ಬಿಎನ್ ಬಚ್ಚೇಗೌಡ, ಎಂ ವೀರಪ್ಪ ಮೊಯಿಲಿ
ಕೋಲಾರ: ಎಸ್ ಮುನಿಸ್ವಾಮಿ, ಕೆಎಚ್ ಮುನಿಯಪ್ಪ
ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ, ಪ್ರಕಾಶ್ ಹುಕ್ಕೇರಿ
ಬೆಳಗಾವಿ: ಸುರೇಶ್ ಅಂಗಡಿ, ವಿರೂಪಾಕ್ಷಿ ಸಾಧುನ್ನವರ್
ಬಾಗಲಕೋಟೆ: ಪಿಸಿ ಗದ್ದೀಗೌಡರ್, ವೀಣಾ ಕಾಶಪ್ಪನವರ್
ವಿಜಯಪುರ: ರಮೇಶ್ ಜಿಗಜಣಗಿ, ಸುನಿತಾ ಚೌಹಾಣ್
ಕಲಬುರಗಿ: ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆ
ರಾಯಚೂರು: ರಾಜಾ ಅಮರೇಶ್ ನಾಯಕ್, ಬಿವಿ ನಾಯಕ್
ಬೀದರ್: ಭಗವಾನ್ ಖೂಬಾ, ಈಶ್ವರ್ ಖಂಡ್ರೆ
ಕೊಪ್ಪಳ: ಸಂಗಣ್ಣ ಕರಡಿ, ರಾಜಶೇಖರ್ ಹಿಟ್ನಾಳ್
ಬಳ್ಳಾರಿ: ದೇವೇಂದ್ರಪ್ಪ, ವಿಎಸ್ ಉಗ್ರಪ್ಪ
ಹಾವೇರಿ: ಶಿವಕುಮಾರ್ ಉದಾಸಿ, ಬಿಆರ್ ಪಾಟೀಲ್
ಧಾರವಾಡ: ಪ್ರಹ್ಲಾದ್ ಜೋಶಿ, ವಿನಯ್ ಕುಲಕರ್ಣಿ
ಉತ್ತರ ಕನ್ನಡ : ಅನಂತ್‌ಕುಮಾರ್ ಹೆಗಡೆ, ಆನಂದ್ ಅಸ್ನೋಟಿಕರ್
ದಾವಣಗೆರೆ: ಜಿಎಂ ಸಿದ್ದೇಶ್ವರ, ಎಚ್‌ಡಿ ಮಂಜಪ್ಪ
ಶಿವಮೊಗ್ಗ: ಬಿವೈ ರಾಘವೇಂದ್ರ, ಮಧು ಬಂಗಾರಪ್ಪ












Click it and Unblock the Notifications