ಕರ್ನಾಟಕದ ಯಾವ ಜಿಲ್ಲೆಯಲ್ಲಿ ಯಾವಾಗ ಚುನಾವಣೆ?

ಶತಕೋಟಿ ಅಂದ್ರೆ 100 ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಗತ್ತಿನ ಎರಡೇ, ಎರಡು ದೇಶಗಳ ಪೈಕಿ ಭಾರತವೇ ನಂಬರ್ 1. ಅದರಲ್ಲೂ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಂಡ ಜಗತ್ತಿನ ಅತಿದೊಡ್ಡ ದೇಶ ನಮ್ಮ ಭಾರತ. ಇದೇ ಕಾರಣಕ್ಕೆ ಇಡೀ ಪ್ರಪಂಚ ಭಾರತವನ್ನ ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯುತ್ತೆ. ಹೀಗಿದ್ದಾಗ ಭಾರತದ ಲೋಕಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಇಂದು ದಿನಾಂಕ ಘೋಷಣೆ ಮಾಡಿದೆ ಚುನಾವಣಾ ಆಯೋಗ. ಹಾಗಾದ್ರೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಯಾವಾಗ ಚುನಾವಣೆ ನಡೆಯಲಿದೆ?

2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ, ಅಭ್ಯರ್ಥಿಗಳು ಸಿದ್ಧವಾಗಿ ಕೂತಿದ್ದಾರೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ, ರಣಕಹಳೆ ಮೊಗಳಗಿಸಿದೆ. ಇನ್ನೇನು ಕೆಲ ದಿನಗಳಲ್ಲಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದು, ಹಾಗೇ ಇದಕ್ಕೆ ಬೇಕಾದ ತಯಾರಿಗಳು ಕೂಡ ಸಾಗಿವೆ. ಹಾಗೇ ಕರ್ನಾಟಕದಲ್ಲಿ ಕೂಡ ಎಲ್ಲಾ ರೀತಿ ತಯಾರಿ ನಡೆದಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗೆ ಇದ್ದಾಗ ಯಾವ ಯಾವ ಜಿಲ್ಲೆಯಲ್ಲಿ ಯಾವಾಗ ಮತದಾನ ಆಗುತ್ತೆ ಗೊತ್ತಾ? ಮುಂದೆ ಓದಿ.

Lok Sabha Election 2024 Explore The District Wise Election Date In Karnataka

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಯಾವಾಗ...

ಚುನಾವಣಾ ಆಯೋಗದ ಅಧಿಕಾರಿಗಳು ಇಂದು ಘೋಷಣೆ ಮಾಡಿರುವ ಪ್ರಕಾರ ಏಪ್ರಿಲ್ 26 ರಂದು & ಮೇ 7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಚುನಾವಣೆ ಫಲಿತಾಂಶ ಜೂನ್ 4ಕ್ಕೆ ಹೊರಬೀಳಲಿದೆ. ಈ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ ಭಾರತದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿದೆ. ಇನ್ನು ಯಾವ ಯಾವ ಜಿಲ್ಲೆಯಲ್ಲಿ ಯಾವಾಗ ಮತದಾನ ನಡೆಯಲಿದೆ ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.

ಏಪ್ರಿಲ್ 26ಕ್ಕೆ ಮತದಾನ ನಡೆಯುವ ಕ್ಷೇತ್ರಗಳು

1). ಬೆಂಗಳೂರು ಗ್ರಾಮಾಂತರ

2). ಬೆಂಗಳೂರು ಉತ್ತರ

3). ಬೆಂಗಳೂರು ದಕ್ಷಿಣ

4). ಬೆಂಗಳೂರು ಕೇಂದ್ರ

5). ಉಡುಪಿ ಮತ್ತು ಚಿಕ್ಕಮಗಳೂರು

6). ಹಾಸನ

7). ದಕ್ಷಿಣ ಕನ್ನಡ

8). ಚಿತ್ರದುರ್ಗ

9). ತುಮಕೂರು

10). ಮಂಡ್ಯ

11). ಮೈಸೂರು

12). ಚಾಮರಾಜನಗರ

13). ಚಿಕ್ಕಬಳ್ಳಾಪುರ

14). ಕೋಲಾರ

ಮೇ 7ಕ್ಕೆ ಮತದಾನ ನಡೆಯುವ ಕ್ಷೇತ್ರಗಳು

1). ಬಾಗಲಕೋಟೆ

2). ವಿಜಯಪುರ

3). ಕಲಬುರಗಿ

4). ರಾಯಚೂರು

5). ಬೀದರ್

6). ಕೊಪ್ಪಳ

7). ಚಿಕ್ಕೋಡಿ

8). ಬೆಳಗಾವಿ

9). ಬಳ್ಳಾರಿ

10). ಶಿವಮೊಗ್ಗ

11). ಹಾವೇರಿ

12). ಧಾರವಾಡ

13). ಉತ್ತರ ಕನ್ನಡ

14). ದಾವಣಗೆರೆ

Lok Sabha Election 2024 Explore The District Wise Election Date In Karnataka

ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗಾಗಿ 2024ರ ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ಹೀಗಾಗಿ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಶುರು ಮಾಡಿವೆ. ಹೀಗಿದ್ದಾಗ ಕಾಂಗ್ರೆಸ್ & ಬಿಜೆಪಿ ನಡುವೆ ನೇರ ಯುದ್ಧವು ನಡೆಯುತ್ತಿದೆ. ಇನ್ನು ಮುಂದಿನ 2ರಿಂದ 3 ತಿಂಗಳು, ಇದೇ ರೀತಿ ರಾಜಕೀಯ ನಾಟಕವನ್ನು ದೇಶದ ಜನತೆ ನೋಡಬೇಕಿದ್ದು, ಚುನಾವಣೆ ಜಯ ನಮ್ಮದೆ ಅಂತಾ ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತಿವೆ. ಆದರೆ ಮತದಾರನ ಮನಸ್ಸನ್ನು ಗೆಲ್ಲುವುದು ಯಾರು? ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ? ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+