ಬೇಡವೆಂದರೂ ಪ್ರಕಾಶ್ ಹುಕ್ಕೇರಿಗೆ ಒಲಿಯಿತು ಗೆಲುವು

ಬೆಂಗಳೂರು, ಮೇ 19 : ಕರ್ನಾಟಕ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಬೇಕು ಎಂಬ ಉದ್ದೇಶದಿಂದ ಚಿಕ್ಕೋಡಿ ಕ್ಷೇತ್ರದಲ್ಲಿ ಸಚಿವ ಪ್ರಕಾಶ್ ಹುಕ್ಕೇರಿ ಅವರನ್ನು ಒತ್ತಾಯಪೂರ್ವಕವಾಗಿ ಕಣಕ್ಕಿಳಿಸಿತ್ತು. ಪಕ್ಷ ನಾಯಕರ ನಿರೀಕ್ಷೆ ಹುಸಿ ಮಾಡದ ಹುಕ್ಕೇರಿ ಅವರು ಮೂರು ಸಾವಿರ ಮತಗಳ ಅಂತರದಿಂದ ಜಯಗಳಿಸಿದರು, ಆ ಮೂಲಕ ಬಿಜೆಪಿ ಕೈಯಿಂದ ಒಂದು ಸ್ಥಾನವನ್ನು ಕಿತ್ತುಕೊಂಡರು.

ಮುಜರಾಯಿ ಮತ್ತು ಸಕ್ಕೆರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಚಿಕ್ಕೋಡಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೂ ಅವರು ಮಾತ್ರ ಸ್ಪರ್ಧಿಸುವುದಿಲ್ಲ ಎಂದು ಹಠ ಹಿಡಿದಿದ್ದರು. ನಾನು ರಾಜ್ಯದಲ್ಲೇ ಇರುವೆ ದೆಹಲಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. [ಕರ್ನಾಟಕದಲ್ಲಿ ಸೋತವರು, ಗೆದ್ದವರು]

Prakash Hukkeri

ಕಾಂಗ್ರೆಸ್ ನಾಯಕರ ಸಂಧಾನದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು. ಚಿಕ್ಕೋಡಿ ಕ್ಷೇತ್ರದ ಜನರು ಸಹ ಹುಕ್ಕೇರಿ ಅವರಿಗೆ ಬೆಂಬಲ ನೀಡಿದರು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಾಗ ಪ್ರಕಾಶ್ ಹುಕ್ಕೇರಿ ಅವರು 3,003 ಮತಗಳ ಅಂತರದಿಂದ ಜಯಗಳಿಸಿದ್ದರು. [ಸಚಿವಸ್ಥಾನ ತೊರೆಯುತ್ತೇನೆ : ಹುಕ್ಕೇರಿ]

ಸದ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಪ್ರಕಾಶ್ ಹುಕ್ಕೇರಿ ಅವರು ಸಂಸದರಾಗಿ ಮುಂದುವರೆಯಲಿದ್ದಾರೆ. ಚಿಕ್ಕೋಡಿ ಕ್ಷೇತ್ರ ಬಿಜೆಪಿ ವಶದಲ್ಲಿತ್ತು, ರಮೇಶ್ ಕತ್ತಿ ಸಂಸದರಾಗಿದ್ದರು. ಪ್ರಕಾಶ್ ಹುಕ್ಕೇರಿ ಕಣಕ್ಕಿಳಿಯುವ ಮೂಲಕ ಬಿಜೆಪಿ ಕೈಯಿಂದ ಒಂದ ಸ್ಥಾನವನ್ನು ಕಿತ್ತುಕೊಂಡಿದ್ದಾರೆ.

ಒಟ್ಟು 14,35,510 ಮತದಾರರಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಏ.17ರಂದು ನಡೆದ ಚುನಾವಣೆಯಲ್ಲಿ ಶೇ 74ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಜಯಗಳಿಸಿದರೆ, ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಎರಡನೇ ಸ್ಥಾನ ಪಡೆದರು. ಎನ್ ಸಿಪಿ ಪಕ್ಷದ ಪ್ರತಾಪರಾವ್ ಪಾಟೀಲ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಚಿಕ್ಕೋಡಿ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಪ್ರಕಾಶ್ ಹುಕ್ಕೇರಿ
1
ಕಾಂಗ್ರೆಸ್ 4,74,373
ರಮೇಶ್ ಕತ್ತಿ
2
ಬಿಜೆಪಿ 4,71,370
ಪ್ರತಾಪರಾವ್ ಪಾಟೀಲ
3
ಎನ್ ಸಿಪಿ 42,735
ಶ್ರೀಮಂತ್ ಬಾಳಾಸಾಬ್ ಪಾಟೀಲ್
4
ಜೆಡಿಎಸ್
39,992
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+