ಕೆಎಸ್‌ಆರ್‌ಟಿಸಿ ಮುಂಗಡ ಬುಕ್ಕಿಂಗ್ ಆರಂಭ; ಮಾರ್ಗದ ವಿವರಗಳು
ಬೆಂಗಳೂರು, ಮೇ 18 : ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಷರತ್ತು ಬದ್ಧ ಅನುಮತಿಯನ್ನು ಸರ್ಕಾರ ನೀಡಿದೆ. ಕೆಎಸ್ಆರ್‌ಟಿಸಿ ಆಯ್ದ ಮಾರ್ಗದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಅನ್ನು ಆರಂಭ ಮಾಡಿದೆ.
Recommended Video
ರಾಜ್ಯದಲ್ಲಿ ಮಂಗಳವಾರದಿಂದ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಆದರೆ, ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ಕೆಎಸ್ಆರ್‌ಟಿಸಿ ಸ್ಪಷ್ಟನೆಯನ್ನು ನೀಡಿದೆ.
ಸರ್ಕಾರಿ ಬಸ್‌ನಲ್ಲಿ ಸಂಚಾರ ನಡೆಸುವ ಜನರಿಗೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಮಾತ್ರ ಬಸ್‌ಗಳು ಸಂಚಾರ ನಡೆಸಲಿವೆ. ಪ್ರಯಾಣಿಕರು ಕೆಎಸ್ಆರ್‌ಟಿಸಿ ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು.
ಕರ್ನಾಟಕ ಸರ್ಕಾರ ಹೆಚ್ಚು ಕೊರೊನಾ ಪ್ರಕರಣಗಳು ಇರುವ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಿದೆ. ಈ ಪ್ರದೇಶಗಳಿಗೆ ಯಾವುದೇ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಮುಂಗಡ ಬುಕ್ಕಿಂಗ್ ಮಾರ್ಗಗಳು
* ಬೆಂಗಳೂರು-ಮೈಸೂರು (3 ಗಂಟೆ) ಬೆಂಗಳೂರಿನಿಂದ ಕೊನೆ ಬಸ್ ಸಂಜೆ 4ಕ್ಕೆ ಹೊರಡಲಿದೆ.
* ಬೆಂಗಳೂರು- ಶಿವಮೊಗ್ಗ (7 ಗಂಟೆ) ಬೆಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಕೊನೆ ಬಸ್ ಹೊರಡಲಿದೆ
* ಬೆಂಗಳೂರು-ದಾವಣಗೆರೆ (6 ಗಂಟೆ) ಬೆಂಗಳೂರಿನಿಂದ ಮಧ್ಯಾಹ್ನ 1ಕ್ಕೆ ಕೊನೆ ಬಸ್ ಹೊರಡಲಿದೆ.
* ಬೆಂಗಳೂರು-ಹಾಸನ (ಮೂರೂವರೆ ಗಂಟೆ) ಬೆಂಗಳೂರಿಂದ ಮಧ್ಯಾಹ್ನ 3.30ಕ್ಕೆ ಕೊನೆ ಬಸ್.
* ಬೆಂಗಳೂರು-ಮಂಗಳೂರು (ಏಳೂವರೆ ಗಂಟೆ) ಬೆಂಗಳೂರಿಂದ ಬೆಳಗ್ಗೆ 11.30ಕ್ಕೆ ಕೊನೆ ಬಸ್.

ಬಸ್ ಸಂಚಾರದ ಮಾರ್ಗಸೂಚಿಗಳು
* ಬಸ್ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ
* ಹಗಲು ವೇಳೆಯಲ್ಲಿ ಮಾತ್ರ (ಬೆಳಗ್ಗೆ 7ರಿಂದ ಸಂಜೆ 7 ಗಂಟೆ ತನಕ ಮಾತ್ರ ಬಸ್ ಸಂಚಾರ ನಡೆಸಲಿದೆ).
* ಕಂಟೈನ್‌ಮೆಂಟ್ ಝೋನ್‌ಗಳಿಗೆ ಬಸ್‌ಗಳು ಸಂಚಾರ ನಡೆಸುವುದಿಲ್ಲ
* ಬಸ್, ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.

ಮಾಸ್ಕ್ ಧರಿಸುವುದು ಕಡ್ಡಾಯ
* ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಮಾತ್ರ ಬಸ್‌ನಲ್ಲಿ ಸಂಚಾರ ನಡೆಸಲು ಅನುಮತಿ ನೀಡಲಾಗುತ್ತದೆ. ಮಾಸ್ಕ್ ಇಲ್ಲವಾದಲ್ಲಿ ಬಸ್ ಒಳಗೆ ಪ್ರವೇಶವಿಲ್ಲ.
* ಒಂದು ಬಸ್‌ನಲ್ಲಿ ಗರಿಷ್ಠ 30 ಜನರು ಮಾತ್ರ ಸಂಚಾರ ನಡೆಸಲು ಅವಕಾಶವಿದೆ.
* ಬಸ್ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು
* ರಾಜ್ಯದ ಪ್ರಮುಖ ಸ್ಥಳಗಳಿಗೆ ಮಾತ್ರ ಬಸ್ ಸಂಚಾರ ನಡೆಸಲಿದೆ.

ಎಸಿ ಬಸ್ ಸಂಚಾರವಿಲ್ಲ
* ಪ್ರಸ್ತುತ ಅಂತರರಾಜ್ಯ ಬಸ್‌ಗಳ ಸಂಚಾರ ಇರುವುದಿಲ್ಲ
* ಹವಾನಿಯಂತ್ರಿತ ಬಸ್‌ಗಳ ಕಾರ್ಯಾಚರಣೆಯನ್ನು ಮಾಡುತ್ತಿಲ್ಲ
* ಪ್ರತಿ ಭಾನುವಾರ ಯಾವುದೇ ಬಸ್ ಸಂಚಾರ ನಡೆಸುವುದಿಲ್ಲ
* ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
* ಕಡಿಮೆ ಲಗೇಜ್, ಗುರುತಿನ ಪತ್ರದ ಜೊತೆ ಪ್ರಯಾಣ ಮಾಡಬೇಕು
* ಊಟ, ಉಪಹಾರಕ್ಕೆ ನಿಲುಗಡೆ ಇಲ್ಲ. ಕುಡಿಯುವ ನೀರು, ಆಹಾರ ಪ್ರಯಾಣಿಕರೇ ತರಬೇಕು.












Click it and Unblock the Notifications