ಟೆಕ್ಕಿಗೆ ಸಾಲ ಬಾಧೆ: ಕುಟುಂಬ ಸಮೇತ ಆತ್ಮಹತ್ಯೆ

ಸಾಲದ ಸುಳಿಗೆ ಸಿಲುಕಿ ಹೀಗೆ ಬದುಕನ್ನು ಅಂತ್ಯಗೊಳಿಸಿದವರು ಬೆಂಗಳೂರಿನ ಕೆಆರ್ ಪುರಂ ಸಮೀಪದ ದ್ಯಾವಸಂದ್ರ ನಿವಾಸಿ ರವಿ (45), ಪತ್ನಿ ಕಲ್ಪನಾ (38) ಹಾಗೂ 17 ವರ್ಷದ ಮಗ ಸುಕೇಶ್ ಎಂದು ಗುರುತಿಸಲಾಗಿದೆ.
ಕುಟುಂಬದ ಮೂವರು ಪೂರ್ವ ನಿರ್ಧಾರದಂತೆ ಟಾಟಾ ನ್ಯಾನೋ ಕಾರನಲ್ಲಿ ಮನೆಯಿಂದ ಹೊರಟಿದ್ದಾರೆ. ದಾರ ಮಧ್ಯೆ ಗೊಟ್ಟಿಪುರ ಗೇಟ್ ಬಳಿ ಕಾರನ್ನು ನಿಲ್ಲಿಸಿ, ತಂಪು ಪಾನೀಯದಲ್ಲಿ ವಿಷ ಬೆರೆಸಿ ಮೂವರು ಅದನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಹಳ ಸಮಯವಾದರೂ ಕಾರು ಚಲಿಸದ ಕಾರಣ ಸಂಶಯಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಸಾಲದ ಹೊರೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರಿನಲ್ಲಿ ಸಿಕ್ಕಿರುವ ಡೆತ್ ನೋಟ್ ನಿಂದ ತಿಳಿದುಬಂದಿದೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರು ಸಮೀಪದ ಟೋಲ್ ಗೇಟ್ ನಿಂದ ಶುಕ್ರವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಪಾಸ್ ಆಗಿರುವುದು ಪತ್ತೆಯಾಗಿದೆ.












Click it and Unblock the Notifications