ಲೋಕಸಭೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಲೀಕ್
ಬೆಂಗಳೂರು, ಡಿ 16: ಮುಂಬರುವ ಲೋಕಸಭಾ ಚುನಾವಣೆಗೆ ಕೆಪಿಸಿಸಿ ಸಿದ್ದ ಪಡಿಸಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊನೆಯ ಕ್ಷಣದಲ್ಲಿ ಕೆಲವೊಂದು ಮಾರ್ಪಾಡು ಮಾಡಲು ತೀವ್ರ ಒತ್ತಡ ಬಂದ ಹಿನ್ನಲೆಯಲ್ಲಿ ಚುನಾವಣಾ ಆಯ್ಕೆ ಸಮಿತಿಯ ಒಪ್ಪಿಗೆ ಪಡೆದು ಹೈಕಮಾಂಡಿಗೆ ಕಳುಹಿಸಲು ಕೆಪಿಸಿಸಿ ನಿರ್ಧರಿಸಿದೆ.
ಮಾಧ್ಯಮಗಳಿಗೆ ಲಭ್ಯವಾಗಿರುವ ಪಟ್ಟಿ ಪ್ರಕಾರ ಕಾಂಗ್ರೆಸ್ ಈ ಬಾರಿ ಸೇಫ್ ಗೇಮ್ ಆಡಲು ನಿರ್ಧರಿಸಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣಾ ವಿಜೇತರಿಗೆ ಈ ಬಾರಿಯೂ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕ ಪಕ್ಷದಲ್ಲಿ ಇತರ ಪಕ್ಷಗಳಿಗೂ ಮುನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲು ಕೆಪಿಸಿಸಿ ಸಜ್ಜಾಗಿದೆ. ಆ ಮೂಲಕ, ಕೊನೆಯ ಕ್ಷಣದಲ್ಲಿ ಗೊಂದಲ ಉಂಟಾಗಿ ಮತದಾರರಿಗೆ ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳುವುದು ಕೆಪಿಸಿಸಿ ಉದ್ದೇಶವಾಗಿದೆ. (ಅಭ್ಯರ್ಥಿಗಳ ಪಟ್ಟಿ ಹಿಡಿದು ಸಿಎಂ, ಪರಮೇಶ್ವರ್ ದೆಹಲಿಗೆ)
ದೇಶದೆಲ್ಲಡೆ ನರೇಂದ್ರ ಮೋದಿ 'ಹವಾ' ಜೋರಾಗಿರುವ ಹಿನ್ನಲೆಯಲ್ಲಿ ಈ ಬಾರಿ ಅಚ್ಚುಕಟ್ಟಾಗಿ ಚುನಾವಣಾ ತಂತ್ರ ಹಣೆಯಲು ಕೆಪಿಸಿಸಿ ಭಾರೀ ಕಸರತ್ತು ನಡೆಸಲಾರಂಭಿಸಿದೆ.
ಪ್ರತೀ ಕ್ಷೇತ್ರಕ್ಕೂ ಎರಡು ಸಂಭವನೀಯ ಅಭ್ಯರ್ಥಿಗಳನ್ನು ಸೂಚಿಸಿ ಹೈಕಮಾಂಡಿಗೆ ಕಳುಹಿಸಲು ನಿರ್ಧರಿಸಲಾಗಿದ್ದರೂ, ಕೆಲವೊಂದು ಕ್ಷೇತ್ರಗಳಲ್ಲಿ ಒಂದೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು ಕೆಪಿಸಿಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿ ಘೋಷಿಸುವ ಮುನ್ನ ಸ್ಥಳೀಯ ನಾಯಕರ, ಕಾರ್ಯಕರ್ತರ ಮತ್ತು ಶಾಸಕರಿಂದಲೂ ಮಾಹಿತಿ ಪಡೆಯಲು ಕೆಪಿಸಿಸಿ ನಿರ್ಧರಿಸಿದೆ ಎಂದೂ ತಿಳಿದು ಬಂದಿದೆ. (ಸಿಎಂ ಸಿದ್ದರಾಮಯ್ಯ ವಿರುದ್ಧ ಪುನಃ ಸಿಡಿದೆದ್ದ ಶಾಸಕರು)
ರಾಜ್ಯದ 28 ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಂದಿನ ಆರು ಸ್ಲೈಡಿನಲ್ಲಿ ನೋಡಿ...

ಸಂಭವನೀಯ ಅಭ್ಯರ್ಥಿಗಳು
ಬಾಗಲಕೋಟೆ - ಅಜಯ್ ಕುಮಾರ್ ಸರ್ ನಾಯಕ್, ಆರ್ ಎಸ್ ಪಾಟೀಲ್
ಬಿಜಾಪುರ - ಪ್ರಕಾಶ್ ರಾಥೋಡ್, ಅರ್ಜುನ್ ರಾಥೋಡ್
ರಾಯಚೂರು - ರಾಜಾ ವೆಂಕಟಪ್ಪ ನಾಯಕ್, ಹಂಪಯ್ಯ ನಾಯಕ್
ಹಾವೇರಿ - ಸಲೀಂ ಅಹಮದ್, ಪ್ರೊ. ಐ ಜಿ ಸನದಿ
ದಾವಣಗೆರೆ - ಎಸ್ ಎಸ್ ಮಲ್ಲಿಕಾರ್ಜುನ್, ಮಹಿಮಾ ಪಟೇಲ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯರು
ಹಾಸನ - ಬಿ ಶಿವರಾಂ, ಎ ಮಂಜು
ಬಳ್ಳಾರಿ - ಎನ್ ಎಂ ವೈ ಹನುಮಂತಪ್ಪ, ಟಿ ಆರ್ ರಾಮಪ್ಪ
ಕೊಪ್ಪಳ - ಬಸವರಾಜ್ ಹಿಟ್ನಾಳ್
ದಕ್ಷಿಣಕನ್ನಡ - ಜನಾರ್ಧನ ಪೂಜಾರಿ
ತುಮಕೂರು - ಮುದ್ದಹನುಮೇ ಗೌಡ, ರಮೇಶ್ ಗೌಡ

ಕಾಂಗ್ರೆಸ್ ಸಂಭಾವ್ಯರು
ಕಾಂಗ್ರೆಸ್ ಸಂಭಾವ್ಯರು
ಚಿತ್ರದುರ್ಗ - ತಿಪ್ಪೇಸ್ವಾಮಿ, ಎಚ್ ಹನುಮಂತಪ್ಪ
ಮೈಸೂರು - ಎಚ್ ವಿಶ್ವನಾಥ್
ಉತ್ತರಕನ್ನಡ - ನಿವೇದಿತಾ ಆಳ್ವ, ಪ್ರಶಾಂತ್ ದೇಶಪಾಂಡೆ
ಗುಲ್ಬರ್ಗ - ಮಲ್ಲಿಕಾರ್ಜುನ ಖರ್ಗೆ
ಬೀದರ್ - ಧರಂ ಸಿಂಗ್

ಸಂಭವನೀಯ ಅಭ್ಯರ್ಥಿಗಳು
ಉಡುಪಿ / ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ
ಧಾರವಾಡ - ಮಂಜುನಾಥ್ ಕನ್ನೂರು, ಎ ಎಂ ಹಿಂಡಸಗೇರಿ
ಮಂಡ್ಯ - ರಮ್ಯಾ
ಚಾಮರಾಜನಗರ - ಧ್ರುವನಾರಾಯಣ್
ಚಿಕ್ಕೋಡಿ - ಪ್ರದೀಪ್ ಕುಮಾರ್ ಕಣಗಲಿ. ಶಾಮಾ ಭೀಮಾ ಘಾಟಗೆ

ಕಾಂಗ್ರೆಸ್ ಸಂಭಾವ್ಯರು
ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
ಕೋಲಾರ - ಕೆ ಎಚ್ ಮುನಿಯಪ್ಪ
ಶಿವಮೊಗ್ಗ - ಕುಮಾರ್ ಬಂಗಾರಪ್ಪ, ಮಂಜುನಾಥ್
ಬೆಳಗಾವಿ - ಲಕ್ಷ್ಮೀ ಹೆಬ್ಬಾಳಕರ್

ಕಾಂಗ್ರೆಸ್ ಸಂಭಾವ್ಯರು
ಬೆಂಗಳೂರು ದಕ್ಷಿಣ - ಪ್ರೊ. ರಾಜೀವ್ ಗೌಡ, ನಂದನ್ ನಿಲೇಕಣಿ
ಬೆಂಗಳೂರು ಸೆಂಟ್ರಲ್ - ಸಿ ಎಂ ಇಬ್ರಾಹಿಂ, ಸಿ ಕೆ ಜಾಫರ್ ಶರೀಫ್
ಬೆಂಗಳೂರು ಉತ್ತರ - ಬಿ ಕೆ ಹರಿಪ್ರಸಾದ್, ರಮೇಶ್ ಗೌಡ
ಬೆಂಗಳೂರು ಗ್ರಾಮಾಂತರ - ಡಿ ಕೆ ಸುರೇಶ್












Click it and Unblock the Notifications