ಸಿಎಂ ಪಟ್ಟಕ್ಕೆ ಪಟ್ಟು: ಡಿ ಕೆ ಶಿವಕುಮಾರ್ ಪರ ಇರುವ ಶಾಸಕರ ಪಟ್ಟಿ ಇಲ್ಲಿದೆ?
ಬೆಂಗಳೂರು, ನವೆಂಬರ್ 24: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದೆ. ಅದ್ಯ ಕೈ ಪಾಳಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಸಿಲುಕಿದೆ. ಕಾಂಗ್ರೆಸ್ ಪಾಳಯಲ್ಲಿ ಕೈ ಕಿತ್ತಾಟ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಯವ ಇಕ್ಕಟ್ಟಿಗೆ ಹೈಕಮಾಂಡ್ ಸಿಲುಕಿದೆ.
ಹೌದು, ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಬಣ ಹಾಗೂ ಡಿ ಕೆ ಶಿವಕುಮಾರ್ ಬಣದ ನಡುವೆ ತೀವ್ರ ಜಟಾಪಟಿ ನಡೆಯುತ್ತಿದ್ದು, ಬಹಿರಂಗವಾಗಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಹಲವು ಡಿಕೆಶಿ ಬಣದ ಶಾಸಕರು ಹೇಳಿಕೆ ನೀಡುತ್ತಿದ್ರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇತ್ತ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರೋಕ್ಷವಾಗಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಲೇ ಡಿ ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡ ಕೆಲವು ಶಾಸಕರು ದೆಹಲಿ ಯಾತ್ರೆ ನಡೆಸಿದ್ದಾರೆ. ಇನ್ನೂ ಡಿಕೆ ಶಿವಕುಮಾರ್ ಪರವಾಗಿ ಕೆಲವು ಶಾಸಕರು ದೆಹಲಿ ಯಾತ್ರೆ ಕೈಗೊಂಡಿರುವುದು ಸದ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಡಿಕೆ ಶಿವಕುಮಾರ್ ಅವರ ಪರವಾಗಿ ಹಲವು ಶಾಸಕರು ದೆಹಲಿ ಯಾತ್ರೆಯನ್ನ ಕೈಗೊಳ್ಳುವ ಮೂಲಕ ಅಧಿಕಾರ ಹಂಚಿಕೆಯ ಸೂತ್ರದಂತೆ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಇದು ಪರೋಕ್ಷವಾಗಿ ಒತ್ತಡ ತಂತ್ರಗಾರಿಕೆ ಎಂಬುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಸಿಎಂ ಆಯ್ಕೆ ಶಾಸಕರಿಗೆ ಬಿಟ್ಟಿರುವುದು. ಸಿಎಂ ಯಾರು ಆಗಬೇಕು ಎಂದು ನಿರ್ಧಾರ ಮಾಡುವವರು ಶಾಸಕರು ಎಂದು ಹೇಳಿದ್ದರು. ಇದಕ್ಕೆ ಕೌಂಟರ್ ಆಗಿ ಸಿಎಂ ಸ್ಥಾನ ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಈ ಮೂಲಕ ಶಾಸಕರ ಅಭಿಪ್ರಾಯಕ್ಕಿಂತ ಹೈಕಮಾಂಡ್ ಅಭಿಪ್ರಾಯವೇ ಮುಖ್ಯ ಎಂದ ಸಂದೇಶ ರವಾನೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಪರ ಇರುವ ಶಾಸಕರು
* ಗುಬ್ಬಿ ಶ್ರೀನಿವಾಸ್ ( ಶಾಸಕ)
* ಬಿ ಶಿವಣ್ಣ ( ಶಾಸಕ)
* ಮಾಗಡಿ ಬಾಲಕೃಷ್ಣ ( ಶಾಸಕ)
* ಎನ್ ಶ್ರೀನಿವಾಸ್ ( ಶಾಸಕ)
* ಶರತ್ ಬಚ್ಚೇಗೌಡ ( ಶಾಸಕ)
* ಗುಬ್ಬಿ ಶ್ರೀನಿವಾಸ್ ( ಶಾಸಕ)
* ಕುಣಿಗಲ್ ರಂಗನಾಥ್ ( ಶಾಸಕ)
* ಇಕ್ಬಾಲ್ ಹುಸೇನ್ ( ಶಾಸಕ)
* ದಿನೇಶ್ ಗೂಳಿಗೌಡ (ಎಂಎಲ್ ಸಿ)
* ಮಹೇಂದ್ರ ತಮ್ಮಣ್ಣ ( ಶಾಸಕ)
* ರವಿ ಗಣಿಗ ( ಶಾಸಕ)
* ರಾಜೇಗೌಡ ( ಶಾಸಕ)
* ಬಸವರಾಜ ಶಿವಗಂಗಾ ( ಶಾಸಕ)
* ಎನ್ ಚೆಲುವರಾಯಸ್ವಾಮಿ ( ಸಚಿವ)












Click it and Unblock the Notifications