ಬಿಜೆಪಿಯ ಈ ಹಿಂದಿನ ರಾಜ್ಯಾಧ್ಯಕ್ಷರು ಯಾರ್ಯಾರು? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು, ನವೆಂಬರ್ 15: 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ, ಬಿಜೆಪಿ ಹೈಕಮಾಂಡ್‌ ಹೊಸ ಉಸ್ತುವಾರಿಗಾಗಿ ಹುಡುಕಾಟ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನ ನೀಡಿದೆ.

ಹೌದು, ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಬುಧವಾರ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಯುವ ನಾಯಕರಿಗೆ ಮಣೆ ಹಾಕುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಡ್ಯೊಯ್ಯಲು ಹೆಗಲು ಕೊಟ್ಟಿದ್ದಾರೆ.

list-of-leaders-who-took-office-as-bjp-state-president

ಇನ್ನೂ 1980ರಲ್ಲಿ ಎ.ಕೆ ಸುಬ್ಬಯ್ಯ ಅವರು ಕರ್ನಾಟಕ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಬಳಿಕ ಬಿ.ಬಿ ಶಿವಪ್ಪ ಬಿ.ಎಸ್.‌ ಯಡಿಯೂರಪ್ಪ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿರುವುದರಲ್ಲಿ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪನವರ ಪಾತ್ರ ಬಹಳ ದೊಡ್ಡದಿದೆ.‌ ಇನ್ನೂ ಇಲ್ಲಿಯವರೆಗೆ ರಾಜ್ಯ ಬಿಜೆಪಿ ಹೊಣೆ ಹೊತ್ತ ನಾಯಕರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

list-of-leaders-who-took-office-as-bjp-state-president

ಬಿಜೆಪಿಯ ಈ ಹಿಂದಿನ ರಾಜ್ಯಾದ್ಯಕ್ಷರು ಯಾರು?

1 ಎ.ಕೆ. ಸುಬ್ಬಯ್ಯ: 1980 ರಿಂದ 1983 (3 ವರ್ಷ)

2 ಬಿ.ಬಿ. ಶಿವಪ್ಪ: 1983-1988 (5 ವರ್ಷ)

3 ಬಿ.ಎಸ್.‌ ಯಡಿಯೂರಪ್ಪ: 1988-1991 (3 ವರ್ಷ)

4 ಕೆ.ಎಸ್.‌ ಈಶ್ವರಪ್ಪ: 1993-1998 (5 ವರ್ಷ)

5 ಬಿ.ಎಸ್.‌ ಯಡಿಯೂರಪ್ಪ: 1998-1999 (1 ವರ್ಷ)

6 ಬಸವರಾಜ ಪಾಟೀಲ್‌ ಸೇಡಂಳ 2000- 2003 (3 ವರ್ಷ)

7 ಅನಂತ್‌ ಕುಮಾರ್: 2003- 2004 (1 ವರ್ಷ)

8 ಜಗದೀಶ್‌ ಶೆಟ್ಟರ್: 2004-2006(2 ವರ್ಷ)

9 ಡಿ.ವಿ. ಸದಾನಂದ ಗೌಡ: 2006-2010 (4 ವರ್ಷ)

10 ಕೆ.ಎಸ್.‌ ಈಶ್ವರಪ್ಪ: 2010-2013 (3 ವರ್ಷ 52 ದಿನ)

11 ಪ್ರಲ್ಹಾದ್‌ ಜೋಶಿ-2013-2016 (3 ವರ್ಷ)

12 ಬಿ.ಎಸ್.‌ ಯಡಿಯೂರಪ್ಪ: 2016-2019 (3 ವರ್ಷ)

13 ನಳಿನ್‌ ಕುಮಾರ್‌ ಕಟೀಲ್: 2019- (4 ವರ್ಷ)

14 ಬಿ.ವೈ. ವಿಜಯೇಂದ್ರ: 2023 (ನ. 15) ಹಾಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+