ಕುಡುಕರು ಆನ್‌ಲೈನ್ ಮೂಲಕ ಬೆಂಗಳೂರಲ್ಲಿ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸಲು ದಿಢೀರ್... Liquor Online Delivery
ಎಣ್ಣೆ ಇಲ್ಲದೆ ಬಹುತೇಕರಿಗೆ ಜೀವನವೇ ಇಲ್ಲ ಅನ್ನುವ ವಾತಾವರಣ ಇದೆ, ಎಣ್ಣೆ ಇಲ್ಲದೆ ಏನೂ ಆಗಲ್ಲ ಅನ್ನೋ ಮನಸ್ಥಿತಿ ಕೂಡ ಇದೆ. ನಾವು ಮಾತನಾಡ್ತಾ ಇರೋದು ಅಡುಗೆ ಎಣ್ಣೆಯ ಬಗ್ಗೆ ಅಲ್ಲ, ಎಣ್ಣೆ ಅಂದ್ರೆ ಬಿಯರ್, ಬ್ರಾಂಡಿ, ರಮ್, ವಿಸ್ಕಿ... ಇತ್ಯಾದಿ & ಇತ್ಯಾದಿ ಬಗ್ಗೆ. ಅಷ್ಟಕ್ಕೂ ಹೀಗೆ ಎಣ್ಣೆ ಹೊಡೆಯುವವರನ್ನ ಕುಡುಕರು ಅಂತಾ ಆಡಿಕೊಳ್ಳುತ್ತಾರೆ ಜನ, ಆದರೆ ಕುಡುಕರು ಅನ್ನುವ ಬದಲು ಮದ್ಯಪ್ರಿಯರು ಅಂತಾ ಕರೆಯಬೇಕು ಎಂಬ ಆಗ್ರಹ ಮಾಡುತ್ತಾರೆ ಮದ್ಯಪ್ರಿಯ ಜನರು. ಹೀಗಿದ್ದಾಗಲೇ, ಕುಡುಕರು ಆನ್‌ಲೈನ್ ಮೂಲಕ ಬೆಂಗಳೂರಲ್ಲಿ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸಲು ದಿಢೀರ್...
ಮದ್ಯಪ್ರಿಯರು ರಾತ್ರಿ ಆದರೆ ಸಾಕು ಎಣ್ಣೆ ಹಾಕದೆ ನಿದ್ದೆ ಬರೋದಿಲ್ಲ & ಕೈಕಾಲು ಕೂಡ ಅಲ್ಲಾಡಲ್ಲ ಅಂತಾರೆ. ಇನ್ನೂ ಕೆಲವರು ತಮ್ಮ ಕೆಲಸದ ಒತ್ತಡ ಹಾಗೂ ಸಂಸಾರದ ನೋವಿನ ಕಾರಣಗಳಿಗೆ ಎಣ್ಣೆ ಹಾಕಿ ನೆಮ್ಮದಿಯಾಗಿ ನಿದ್ದೆ ಮಾಡಬಹುದು ಅಂತಾ ಪ್ಲಾನ್ ಮಾಡುತ್ತಾರೆ. ಇಷ್ಟೆಲ್ಲದರ ಮಧ್ಯೆ ರಾತ್ರಿ 10:30 ಆಗೋದ್ರೆ ಎಣ್ಣೆ ಸಿಗೋದೆ ಇಲ್ಲ ಅನ್ನೋ ನೋವು ಕೂಡ ಇರುತ್ತೆ. ಹೀಗಾಗಿ ಮದ್ಯ ಪ್ರಿಯರು ಎಣ್ಣೆ ತರೋದಕ್ಕೆ ಅಲೆದಾಡುವುದು ತಪ್ಪುತ್ತಿಲ್ಲ. ಇಂತಹ ಸಮಯದಲ್ಲೇ, ಮದ್ಯಪ್ರಿಯ ಕುಡುಕರು ಆನ್‌ಲೈನ್ ಮೂಲಕ ಬೆಂಗಳೂರಲ್ಲಿ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸಲು ದಿಢೀರ್...

ಆನ್‌ಲೈನ್ ಮೂಲಕ ಬೆಂಗಳೂರಲ್ಲಿ ಎಣ್ಣೆ ಆರ್ಡರ್...
ಹೌದು, ಮದ್ಯಪ್ರಿಯರು ಅಥವಾ ಕುಡುಕರಿಗೆ ಎಣ್ಣೆ ಇಲ್ಲದೆ ದಿನ ಮುಗಿಯೋದೆ ಇಲ್ಲ... ಕತ್ತಲು ಕವಿದರೆ ಸಾಕು ಬಾಡಿ ಡ್ರೈ ಆಗಿರುತ್ತೆ, ಎಣ್ಣೆ ಹಾಕಬೇಕು ಅಂತಾನೇ ವಾದ ಮಾಡುತ್ತಾರೆ ಮಧ್ಯ ಪ್ರಿಯ ಜನರು. ಇನ್ನೂ ಕೆಲವರಿಗೆ ಬಾರ್ ಅಥವಾ ಎಂಆರ್‌ಪಿಗೆ ಹೋಗಿ ಎಣ್ಣೆ ತರೋದು ಕಷ್ಟ ಕಷ್ಟ. ಹೀಗಿದ್ದಾಗ ಮನೆ ಬಾಗಿಲಿಗೆ ಎಣ್ಣೆ ತಂದು ಕೊಟ್ಟರೆ ಸಾಕು ಜಾಸ್ತಿ ಹಣ ಬೇಕಾದರೂ ನಾವು ಕೊಡ್ತೀವಿ ಅನ್ನೋ ವಾದ ಮಾಡುವವರು ಇದ್ದಾರೆ. ಹೀಗಿದ್ದಾಗಲೇ ಕುಡುಕರು ಆನ್‌ಲೈನ್ ಮೂಲಕ ಬೆಂಗಳೂರಲ್ಲಿ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸಲು ದಿಢೀರ್ ಚರ್ಚೆ ಶುರುವಾಗಿದೆ!
ಅಷ್ಟಕ್ಕೂ ವಿಧಾನಸಭೆ ಬೆಳಗಾವಿ ಅಧಿವೇಶನದಲ್ಲಿ ಮದ್ಯ ಮಾರಾಟ ವಿಚಾರವಾಗಿ ದೊಡ್ಡ ಗಲಾಟೆ ನಡೆದಿದ್ದು, ಅತ್ತ ವಿರೋಧ ಪಕ್ಷಗಳು ಇದೇ ಅಸ್ತ್ರವನ್ನು ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಪ್ರಯೋಗ ಮಾಡಿ ಫೈಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಬಾರ್ & ಎಂಆರ್‌ಪಿ ಶಾಪ್‌ಗಳಲ್ಲಿ ಅವಧಿ ಮುಗಿದರೂ ಎಣ್ಣೆ ಮಾರಾಟ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಾ ಇದೆ. ಹೀಗಾಗಿ ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಹೊಸ ಡಿಮ್ಯಾಂಡ್ ಇಟ್ಟಿದ್ದು, ಆನ್‌ಲೈನ್ ಮೂಲಕ ಬೆಂಗಳೂರು ಸೇರಿ ಇಡೀ ಕರ್ನಾಟಕದಲ್ಲಿ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸಿಬಿಡಿ ಅಂತಾ ಆಗ್ರಹಿಸುವ ಮೂಲಕ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವಧಿ ಮೀರಿ ಬಾರ್ & ಎಂಆರ್‌ಪಿ ತೆರೆಯಬಾರದು ಆ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ ವಿರೋಧ ಪಕ್ಷಗಳ ನಾಯಕರು. ಹಾಗಾದ್ರೆ ಇನ್ನುಮುಂದೆ ಆನ್‌ಲೈನ್ ಮೂಲಕ ಎಣ್ಣೆ ಸಿಗುತ್ತಾ?
ಮದ್ಯಪ್ರಿಯರ ಆಸೆ ಈಡೇರಿಸುತ್ತಾ ಸರ್ಕಾರ?
ಹೌದು, ಆನ್‌ಲೈನ್ ಮೂಲಕ ಎಣ್ಣೆ ಅಂದ್ರೆ ಬಿಯರ್, ಬ್ರಾಂಡಿ, ರಮ್, ವಿಸ್ಕಿ... ಇತ್ಯಾದಿ & ಇತ್ಯಾದಿ ಆರ್ಡರ್ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಡಿಮ್ಯಾಂಡ್ ಹಲವು ವರ್ಷಗಳಿಂದ ಇದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಆನ್‌ಲೈನ್ ಮೂಲಕ ಎಣ್ಣೆ ಆರ್ಡರ್ ಮಾಡಲು ಅವಕಾಶ ಕೂಡ ಇದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲೂ ಆನ್‌ಲೈನ್ ಮೂಲಕ ಎಣ್ಣೆ ಆರ್ಡರ್ ಮಾಡಲು ಅವಕಾಶ ಮಾಡಿಕೊಡಿ ಎಂಬ ಡಿಮ್ಯಾಂಡ್ ಇಡುತ್ತಿದ್ದಾರೆ ಮದ್ಯಪ್ರಿಯರು & ಕುಡುಕರು. ಆದರೆ ಈ ಬಗ್ಗೆ ಬಾರ್ ಮಾಲೀಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು, ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ನಮಗೆ ಸಮಸ್ಯೆ ಆಗುತ್ತದೆ ಅಂತಾ ಆರೋಪಿಸುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗನೇ ಕರ್ನಾಟಕದಲ್ಲೂ ಆನ್‌ಲೈನ್ ಮೂಲಕ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆ ದಟ್ಟವಾಗಿದೆ...












Click it and Unblock the Notifications