Get Updates
Get notified of breaking news, exclusive insights, and must-see stories!

ಬಿಜೆಪಿಯಲ್ಲಿ ಬ್ರಾಹ್ಮಣ-ಲಿಂಗಾಯತ ಚರ್ಚೆ: ಮಾಸ್ಟರ್ ಮೈಂಡ್ ಬಿ.ಎಲ್.ಸಂತೋಷ್ ಕೈಯಲ್ಲಿ ರಾಜ್ಯ ಬಿಜೆಪಿ!

ಬೆಂಗಳೂರು, ಏಪ್ರಿಲ್. 21: ಪ್ರಮುಖ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರು ಬಿಜೆಪಿಯನ್ನು ಬಿಟ್ಟ ನಂತರ, ರಾಜ್ಯ ಬಿಜೆಪಿಯಲ್ಲಿ ಬಿ.ಎಲ್.ಸಂತೋಷ್ ಎಂಬ ಬ್ರಾಹ್ಮಣ ನಾಯಕ ಇತರ ಬಿಜೆಪಿ ನಾಯಕರ ಸ್ಥಾನಕ್ಕೆ ತಂದ ಧಕ್ಕೆಯ ಬಗ್ಗೆ ಮಾತನಾಡಿದ್ದಾರೆ. ಇದು ವಿಧಾನಸಭಾ ಚುನಾವಣೆ ವೇಳೆ ಪ್ರತಿಪಕ್ಷ ಕಾಂಗ್ರೆಸ್‌ಗೆ ಭಾರಿ ಆಹಾರ ಒದಗಿಸಿದೆ.

ಆರ್‌ಎಸ್‌ಎಸ್‌ ಮತ್ತು ಬಿಜೆಪಿಯೊಂದಿಗೆ ನಾಲ್ಕು ದಶಕಗಳ ನಂಟು ಇದ್ದ ಜಗದೀಶ್ ಶೆಟ್ಟರ್ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಪಕ್ಷದ ಮೇಲಿನ ಬಿ. ಎಲ್ ಸಂತೋಷ್ ಅವರ ಹಿಡಿತ ಹಳೆಯ ಬಿಜೆಪಿ ನಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಎನ್ನುವ ರೀತಿಯಲ್ಲಿ ಶೆಟ್ಟರ್ ಆರೋಪಿಸಿದ್ದಾರೆ. ಲಕ್ಷ್ಮಣ ಸವದಿ ಸೇರಿದಂತೆ ಲಿಂಗಾಯತ ಮುಖಂಡರು ಕಾಂಗ್ರೆಸ್ ಪಾಲಾಗಿದ್ದಾರೆ.

Lingayats - Brahmins: Jagadish Shettar Outburst Reaction on Lingayats Being Supressed in BJP

ಜಗದೀಶ್ ಶೆಟ್ಟರ್ ಅವರ ಹೇಳಿಕೆಯು ಬಿಜೆಪಿಯಲ್ಲಿ ಬ್ರಾಹ್ಮಣರು ರಾಜ್ಯ ಘಟಕದ ಮೇಲೆ ಹಿಡಿತ ಸಾಧಿಸುವ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದೆ. ಆದರೆ, ರಾಜ್ಯದಲ್ಲಿ ಬಿಜೆಪಿಯು ಮುಖ್ಯವಾಗಿ ಹಿಂದುತ್ವದ ಅಜೆಂಡಾಕ್ಕಿಂತ ಹೆಚ್ಚಾಗಿ ಲಿಂಗಾಯತ ಮತ ಬ್ಯಾಂಕ್ ಅನ್ನು ಆಧರಿಸಿದೆ. ಇದನ್ನು ಬ್ರಾಹ್ಮಣ ನಾಯಕರು ಮರೆಯುತ್ತಿದ್ದಾರೆ ಎಂಬುದನ್ನು ಶೆಟ್ಟರ್ ಮಾತುಗಳು ಒತ್ತಿ ಹೇಳುತ್ತಿವೆ.

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೂ ಬಿ.ಎಲ್. ಸಂತೋಷ್ ಹೆಸರು ಬರುತ್ತಿತ್ತು. ಲಿಂಗಾಯತ ಸಮುದಾಯದ ಮೇಲೆ ಬ್ರಾಹ್ಮಣರು ಪ್ರಾಬಲ್ಯ ಮೆರೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಶೆಟ್ಟರ್ ಅವರ ಆರೋಪದಿಮದ ಈ ವಿಷಯವು ಮತ್ತೆ ಮುನ್ನೆಲೆಗೆ ಬಂದಿದೆ.

Lingayats - Brahmins: Jagadish Shettar Outburst Reaction on Lingayats Being Supressed in BJP

*ಜಗದೀಶ್ ಶೆಟ್ಟರ್ ಹೇಳಿದ್ದೇನು..?*

ದಶಕಗಳ ಕಾಲ ಪಕ್ಷಕ್ಕಾಗಿ ಹೋರಾಡಿದ, ಪಕ್ಷಕ್ಕೆ ರಾಜ್ಯದಲ್ಲಿ ನೆಲೆಯೊದಗಿಸಲು ಕೆಲಸ ಮಾಡಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಈ ವೇಳೆ ಬಿ.ಎಲ್ ಸಂತೋಷ್ ಆರ್‌ಎಸ್‌ಎಸ್ ಸಂಪರ್ಕದ ಬಲದಿಂದ ಭಾರತೀಯ ಜನತಾ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಗೆ ಹೆಚ್ಚಿನ ಗೌರವ ನೀಡಲಾಗುತ್ತಿದೆ.ಸಂತೋಷ್ ಅವರ ಕಾರ್ಯವೈಖರಿ ರಾಜ್ಯದಲ್ಲಿ ಆಡಳಿತ ಪಕ್ಷವನ್ನು ನಾಶ ಮಾಡಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

*ಬಿ.ಎಸ್ ಸಂತೋಷ್ *

56 ವರ್ಷದ ಬಿ.ಎಸ್ ಸಂತೋಷ್ ತಮ್ಮ ಮೇಲಿನ ದಾಳಿಯಿಂದ ತಲೆಕೆಡಿಸಿಕೊಂಡಿಲ್ಲ. ಈಗ ಪಕ್ಷದಲ್ಲಿ ಹೊಸ ರಕ್ತ ಹರಿಯುತ್ತಿದ್ದು, ಈ ಕ್ರಮಗಳಿಂದ ಪಕ್ಷಕ್ಕೆ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದಿದ್ದಾರೆ. ಉಡುಪಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಂತೋಷ್ ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. 1993 ರಲ್ಲಿ ಪೂರ್ಣ ಸಮಯದ ಆರ್‌ಎಸ್‌ಎಸ್ ಕಾರ್ಯಕರ್ತರಾದ ಅವರು, ಬಿಜೆಪಿಗೆ ಸೇರ್ಪಡೆಯಾಗಿ 2006 ರಲ್ಲಿ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು.

Lingayats - Brahmins: Jagadish Shettar Outburst Reaction on Lingayats Being Supressed in BJP

2004 ರಲ್ಲಿ 224-ಸದಸ್ಯ ಸದನದಲ್ಲಿ 79 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಹೊಸ ರಾಜಕೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಸಂತೋಷ್ ಅವರ ಪ್ರಯತ್ನಗಳು ಮತ್ತು ತಂತ್ರಗಳ ಬಗ್ಗೆ ಆಗಲು ಅಸಮಾಧಾನವಿತ್ತು. ಈಗ ದಿವಂಗತ ರಾಜ್ಯ ಪಕ್ಷದ ಅಧ್ಯಕ್ಷ ಅನಂತ್ ಕುಮಾರ್ ಅವರೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.

ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಶೋಭಾ ಕರಂದ್ಲಾಜೆ ಅವರು ಸಂತೋಷ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಬಿಜೆಪಿ ಇತರ ಪಕ್ಷಗಳಿಗಿಂತ ಮುಂದಿದ್ದರೆ ಅದಕ್ಕೆ ಸಂತೋಷ್ ಅವರ ಪ್ರಯತ್ನವೇ ಕಾರಣ ಎಂದು ಹೇಳುತ್ತಾರೆ.

ಯಡಿಯೂರಪ್ಪ ಅವರೊಂದಿಗಿನ ಸಂಬಂಧ ಆರಂಭದಲ್ಲಿ ಉತ್ತಮವಾಗಿದ್ದರೂ, 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಿನ್ನಾಭಿಪ್ರಾಯಗಳು ಬೆಳೆದವು. ಸಂತೋಷ್ ಸರ್ಕಾರ ನಡೆಸುತ್ತಿರುವ ರೀತಿಯನ್ನು ಆಕ್ಷೇಪಿಸಿದರು. ಸಂತೋಷ್ ಅವರ ಕೆಲಸವನ್ನು ಗುರುತಿಸಿ, 2019 ರಲ್ಲಿ, ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿ ನೇಮಿಸಲಾಯಿತು.

ಇದಾದ ನಂತರ ಸಂತೋಷ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲು ಬಯಸುತ್ತಾರೆ ಎಂದು ಕೆಲವು ಬಿಜೆಪಿ ನಾಯಕರು ವದಂತಿ ಸೃಷ್ಟಿಸಲು ಆರಂಭಿಸಿದರು. ರಾಜ್ಯ ಬಿಜೆಪಿಯು ಅನೇಕ ಪ್ರಮುಖ ಬ್ರಾಹ್ಮಣರನ್ನು ಹೊಂದಿಲ್ಲದಿದ್ದರೂ, ಸಂತೋಷ್ ಅವರ ನಾಯಕತ್ವ ಮತ್ತು ಅವರ ಆರ್‌ಎಸ್‌ಎಸ್ ಸಂಪರ್ಕಗಳಿಂದಾಗಿ ರಾಜ್ಯದಲ್ಲಿ ಅಪಾರ ಪ್ರಭಾವವನ್ನು ಬೀರುತ್ತಿದೆ.

*ಬ್ರಾಹ್ಮಣ ಸಿಎಂ ಕುರಿತು ಕುಮಾರಸ್ವಾಮಿ ಭವಿಷ್ಯ*

ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಯೋಜಿಸಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ಹಿಂದೆ ಹೇಳಿಕೆ ನೀಡಿದ್ದರು. ಮರಾಠಿ ಪೇಶ್ವೆ ಕುಲದ ಜೋಶಿಯವರ ಮೂಲದ ಬಗ್ಗೆ ಮಾತಾಡಿದ್ದ ಅವರನ್ನು ಹಲವು ಮಂದಿ ಟೀಕಿಸಿದ್ದರು. ಆದರೆ, ಅವರ ಹೇಳಿಕೆಯನ್ನು ತಳ್ಳಿ ಹಾಕುವಂತೆ ಇರಲಿಲ್ಲ.

ಇದೀಗ ಜಗದೀಶ್ ಶೆಟ್ಟರ್ ಅವರ ಘಟನೆ ರಾಜ್ಯದಲ್ಲಿ ಹೊಸ ಕತೆಯನ್ನು ಹೇಳುತ್ತಿದೆ. ಬಿಜೆಪಿಯ ಸಂಸದೀಯ ಅಭ್ಯರ್ಥಿಯಾಗಿ ಪ್ರಲ್ಹಾದ್ ಜೋಶಿ ಅವರನ್ನು ನಾಮನಿರ್ದೇಶನ ಮಾಡಲು ನಾನೇ ಕಾರಣ ಎಂದು ಜಗದೀಶ್ ಶೆಟ್ಟರ್ ಹೇಳುತ್ತಾರೆ. ಪ್ರತಿಯಾಗಿ, ಮುಂಬರುವ ಚುನಾವಣೆಗೆ ತಮಗೆ ಟಿಕೆಟ್ ಸಿಗದಿರಲು ಜೋಶಿ ಕಾರಣ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ಸಂತೋಷ್ ಮತ್ತು ಪ್ರಲ್ಹಾದ್ ಜೋಶಿ ಇಬ್ಬರೂ ಮುಂಬರುವ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೊಡಬಾರದು ಎಂದು ಷಡ್ಯಂತ್ರ ರೂಪಿಸಿದ್ದಾರೆ. ಇದಕ್ಕೆ ಕಾರಣ ಲಿಂಗಾಯತರ ಮೇಲೆ ಬ್ರಾಹ್ಮಣರು ಪ್ರಾಬಲ್ಯ ಸಾಧಿಸುವುದು ಎಂದು ಶೆಟ್ಟರ್ ಹೇಳಿದ್ದಾರೆ. ಇದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಉತ್ಸುಕವಾಗಿರುವ ಕಾಂಗ್ರೆಸ್‌ಗೆ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಅದು ಕೂಡ ಬಿಜೆಪಿ-ಬ್ರಾಹ್ಮಣ ವಿಷಯದ ಮೇಲೆ ಹರಿಹಾಯ್ದಿದೆ.

ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಯೋಜಿಸಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಹೇಳಿರುವುದು ಸರಿ ಎಂದು ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್ ಹೇಳಿದ್ದಾರೆ. ನಾನು ಲಿಂಗಾಯತ ಸಮುದಾಯದ ಪರವಾಗಿ ಮಾತನಾಡಿದ್ದೇನೆ. ನಾವು ಬ್ರಾಹ್ಮಣ ಸಮುದಾಯದ ವಿರುದ್ಧ ಅಲ್ಲ. ಬ್ರಾಹ್ಮಣರು ಕೆಟ್ಟವರು ಎಂದು ಹೇಳಬಾರದು. ಆದರೆ, ಕೆಲವರು ಕೆಟ್ಟ ಕೆಲಸ ಮಾಡಿದರೆ ದನಿ ಎತ್ತಬೇಕು" ಎಂದಿದ್ದಾರೆ.

2019 ರಲ್ಲಿ, ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಆ ಸ್ಥಾನಕ್ಕೆ ಪ್ರಲ್ಹಾದ್ ಜೋಶಿ ಅವರನ್ನು ಹೆಸರು ಕೇಲಿ ಬಂದಿತ್ತು. ಆದರೆ ಅದಕ್ಕೆ ಬಿಎಸ್‌ವೈ ತಮ್ಮ ಆಪ್ತ ಸಹಾಯಕ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಿ ಅವರನ್ನು ಹುದ್ದೆಯಲ್ಲಿ ಕೂರಿಸಿದ್ದಾರೆ.

ಬಿ.ಎಲ್. ಸಂತೋಷ್ ಬಗ್ಗೆ ಯಡಿಯೂರಪ್ಪನವರು ಏನೇ ಅಂದುಕೊಂಡರೂ ಕೂಡ ಈಗ ಅವರ ಬೆಂಬಲಕ್ಕೆ ನಿಂತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದ ಬಳಿಕ ಮಾತನಾಡಿದ ಬಿಎಸ್‌ವೈ, "ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕಾರ್ಯಾಚರಣೆಯಲ್ಲಿ ಸಂತೋಷ್ ಅವರೇ ಪ್ರಮುಖ ಸಂಚುಕೋರರು ಎಂಬ ವದಂತಿ ಸೃಷ್ಟಿಯಾಗುತ್ತಿದೆ. ಈ ಆರೋಪ ನಿರಾಧಾರವಾಗಿದೆ. ನಾನು ಹೊಸ ಪೀಳಿಗೆಗೆ ದಾರಿ ಮಾಡಿಕೊಡಲು ನಿರ್ಧರಿಸಿದ್ದೇನೆ" ಎಂದಿದ್ದರು.

ಸಂತೋಷ್ ಅವರನ್ನು ದೂಷಿಸುವುದು ಸರಿಯಲ್ಲ ಎಂದು ಯಡಿಯೂರಪ್ಪ ಒತ್ತಿ ಹೇಳಿದ್ದಾರೆ. ಆದರೆ ಲಿಂಗಾಯತರು ಮತ್ತು ಒಕ್ಕಲಿಗರು ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಹುಟ್ಟಿನಿಂದ ಬ್ರಾಹ್ಮಣರಾದ ಸಂತೋಷ್ ಅವರ ಬಗ್ಗೆ ಬಿಜೆಪಿಯಲ್ಲಿಯೇ ಊಹಾಪೋಹಗಳು ಮುಂದುವರಿದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+