ವಿಕಲಚೇತನರ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ
ವಿಕಲಚೇತನ ಮಾಲೀಕತ್ವದ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ನೋಂದಣಿಗೆ ಸಹ ಕೆಲವು ಸೂಚನೆಗಳನ್ನು ನೀಡಲಾಗಿದೆ.
ಬೆಂಗಳೂರು, ಫೆಬ್ರವರಿ 20; ವಿಕಲಚೇತನ ಮಾಲೀಕತ್ವದ ವಾಹನಗಳಿಗೆ ನಿಯಮಾನುಸಾರ ರಸ್ತೆ ತೆರಿಗೆ ವಿನಾಯಿತಿ ನೀಡುವ ಕುರಿತು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಆಯುಕ್ತರು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಚೇರಿಯಿಂದ ಬಹುಮಹಡಿಗಳ ಕಟ್ಟಡದಲ್ಲಿರುವ ಸಾರಿಗೆ ಇಲಾಖೆ ಆಯುಕ್ತರ ಕಚೇರಿಗೆ ಪತ್ರವನ್ನು ಬರೆಯಲಾಗಿದೆ.
ಚಂದ್ರಶೇಖರ್ ಪುಟ್ಟಪ್ಪ, ಕಾಯಾಧ್ಯಕ್ಷಕರು, ಕ.ರಾ.ವಿ.ರ.ಸ.ರಿ. ಬೆಂಗಳೂರು ಇವರ ಮನವಿಯಂತೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪತ್ರದ ಉಲ್ಲೇಖದಂತೆ ಈ ಆದೇಶ ಹೊರಡಿಸಲಾಗಿದೆ.
ಚಂದ್ರಶೇಖರ್ ಪುಟ್ಟಪ್ಪ ಅವರು 4/2/2023ರಂದು ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರದ Ministry of Heavy Industry ವತಿಯಿಂದ ಅಂಗವಿಕಲರ ಚಲನವಲನದ ಹಿತದೃಷ್ಟಿಯಿಂದ ಅಂಗವಿಕಲರ ಮಾಲಿಕತ್ವದ ವಾಹನಗಳಿಗೆ ಶೇ.10 GST ರಿಯಾಯಿತಿ ಯೊಂದಿಗೆ Ministry of Road Transport and Highways, Govt of India ಮೂಲಕ ಸಂಪೂರ್ಣ Life Time Road Tax ರಿಯಾಯಿತಿ ನೀಡಿ ಅಡಾಪ್ಟೆಡ್/ ಇನ್ ವ್ಯಾಲಿಡ್ ವಾಹನ ಹೆಸರಿನಡಿ ನೋಂದಣಿ ಮಾಡಿಕೊಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಆದೇಶಿರುತ್ತದೆ.

ಈ ಪ್ರಕಾರ ವಾಹನವನ್ನು ಅಂಗವಿಕಲರು ಚಲಾಯಿಸುವಂತೆ ಮಾರ್ಪಾಡು ಮಾಡಿರಬೇಕು/ ಮಾರ್ಪಾಡು ಮಾಡದೆಯೇ ಅಂಗವಿಕಲರು ವಾಹನ ಚಲಾಯಿಸಿದರೂ ಸರಿ, ವಾಹನ ಚಲಾಯಿಸದೇ ಇದ್ದರೂ ಸರಿ ಅಥವಾ ಅಂಗವಿಕಲ ವ್ಯಕ್ತಿ ಚಾಲಕನನ್ನು ನೇಮಿಸಿಕೊಂಡು ವಾಹನ ಬಳಸಬಹುದಾದರು ಸರಿ.
ಮಾರ್ಗಸೂಚಿಯಲ್ಲಿ ಹೇಳಿರುವಂತೆ ಎಲ್ಲಾ ಸೌಲಭ್ಯಗಳ ರಿಯಾಯಿತಿಯೊಂದಿಗೆ ನಿಯಮಾನುಸಾರ ವಾಹನ ನೋದಣಿ ಮಾಡಿಕೊಡಲು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ತಿಳಿಸಿದ್ದರು.
ಇಷ್ಟಾಗಿಯೂ ಸಂಬಂಧಪಟ್ಟ ಆರ್. ಟಿ. ಓ ಅಧಿಕಾರಿಗಳು ತೀರ್ವತರಹದ ಅಂಗವಿಕಲತೆಯಿಂದ ಬಳಲುವ ಅಂಗವಿಕಲರು ವಾಹನ ಚಲಾಯಿಸಲಾಗದ ಕಾರಣ ವಾಹನ ಮಾರ್ಪಾಡಿನೊಂದಿಗೆ ಚಾಲಕನನ್ನು ನೇಮಿಸಿಕೊಂಡು ತಮ್ಮ ಚಲನವಲನಕ್ಕೆ ವಾಹನವನ್ನು ಬಳಸಿಕೊಳ್ಳುವ ಅಂಗವಿಕಲರ ವಾಹನಗಳನ್ನು ನೋಂದಣಿ ಮಾಡದೆ ನಿರಾಕರಿಸುತ್ತಿದ್ದಾರೆ ಎಂದು ಗಮನ ಸೆಳೆದಿದದರು.

ಅಂಗವಿಕಲರ ಹಿತದೃಷ್ಟಿಯಿಂದ ಉಲ್ಲೇಖಿತ ಆದೇಶಾನುಸಾರ ವಾಹನವನ್ನು ಮಾರ್ಪಾಡು ಮಾಡದೇ ಚಾಲಕರನ್ನು ನೇಮಿಸಿಕೊಂಡು ವಾಹನ ಬಳಸುವ ಅಂಗವಿಕಲರ ವಾಹನಗಳಿಗೆ ನೋಂದಣಿ ನಿರಾಕರಿಸದೆ Life Time Road Tax ರಿಯಾಯಿತಿಯೊಂದಿಗೆ ನೋಂದಣಿ ಮಾಡಿಕೊಡುವಂತೆ ರಾಜ್ಯದ ಎಲ್ಲಾ ಆರ್. ಟಿ. ಓ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದರು.
ಅಂಗವಿಕಲರಿಗೆ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿ ಸರ್ವತೋಮುಖ ಸಬಲೀಕರಣಗೊಳಿಸುವುದು ಹಾಗೂ ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಅಂಗವಿಕಲರ ಘನತೆ ಮತ್ತು ಗೌರವವನ್ನು ಕಾಪಾಡವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಕಾನೂನಾತ್ಮಕ ಜವಾಬ್ದಾರಿಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಮನವಿಯನ್ನು ಪರಿಶೀಲಿಸಿ, ಅಂಗವಿಕಲರ ಹಿತದೃಷ್ಟಿಯಿಂದ ವಾಹನವನ್ನು ಮಾರ್ಪಾಡು ಮಾಡದೇ ಚಾಲಕರನ್ನು ನೇಮಿಸಿಕೊಂಡು ವಾಹನ ಬಳಸುವ ಅಂಗವಿಕಲರ ವಾಹನಗಳಿಗೆ ನೋಂದಣಿ ನಿರಾಕರಿಸದೆ Life Time Road Tax ರಿಯಾಯತಿಯೊಂದಿಗೆ ನೋಂದಣಿ ಮಾಡಿಕೊಡುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.












Click it and Unblock the Notifications