ಚಿತ್ರನ್ನಾ ಹುಟ್ಟಿದ್ದು ಹೇಗೆ?, ಸೋಶಿಯಲ್ ಮೀಡಿಯಾ ತುಂಬಾ ಚಿತ್ರ, ವಿಚಿತ್ರ ಪೋಸ್ಟ್‌ಗಳು

ಬೆಂಗಳೂರು, ಮಾರ್ಚ್‌ 20: ಬಡವರ ಬಿರಿಯಾನಿ ಎಂದು ಕರೆಸಿಕೊಳ್ಳುವ 'ಚಿತ್ರಾನ್ನ' ದಕ್ಷಿಣ ಭಾರತದಲ್ಲಿ ಅನ್ನದಿಂದ ತಯಾರು ಮಾಡುವ ಒಂದು ಖಾದ್ಯ. ಆದರೆ ಇದಕ್ಕೆ 'ಚಿತ್ರಾನ್ನ' ಎಂದು ಹೆಸರು ಬಂದಿದ್ದು ಹೇಗೆ? ಎಂಬ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ವೈರಲ್ ಆಗಿದೆ. ಈಗ ಇದನ್ನೇ ಮುಂದಿಟ್ಟುಕೊಂಡು ಬೇರೆ ಬೇರೆ ತಿಂಡಿಗಳ ಹೆಸರು ಬಂದಿದ್ದು ಹೇಗೆ? ಎಂದು ಚರ್ಚೆಗಳನ್ನು ಮಾಡಲಾಗುತ್ತಿದೆ.

ಜನರು ಅತ್ಯಂತ ಇಷ್ಟ ಪಡುವ ಖಾದ್ಯ 'ಚಿತ್ರಾನ್ನ'. ವಿವಿಧ ಬಗೆಯ ಚಿತ್ರಾನ್ನಗಳಿದ್ದು, ಕನ್ನಡದಲ್ಲಿ 'ಚಿತ್ರಾನ್ನ'ದ ಮೇಲೆ ಸಿನಿಮಾ ಹಾಡು ಸಹ ರಚನೆಯಾಗಿದೆ. ಆದರೆ ಈಗ 'ಚಿತ್ರಾನ್ನ' ಸುದ್ದಿಯಲ್ಲಿರುವುದು ಬೇರೆಯದೇ ಕಾರಣಕ್ಕೆ.

Lemon Rice To Gobi Manchuri Social Media Post Goes Viral

'ಚಿತ್ರಾನ್ನ' ಎಂದು ಹೆಸರು ಬರಲು ಕಾರಣ ಏನು? ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಂದು ಈ ಪಟ್ಟಿಗೆ ಪಕೋಡಾ, ಪೊಂಗಲ್, ಗೋಬಿ ಮಂಚೂರಿ ಸೇರಿಕೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಸದ್ದು: ಯಾವುದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಲು, ಸದ್ದು ಮಾಡಲು ಹೆಚ್ಚು ಹೊತ್ತು ಬೇಡ. ಇದನ್ನು 'ಚಿತ್ರಾನ್ನ' ಮತ್ತೊಮ್ಮೆ ಸಾಬೀತು ಮಾಡಿದೆ. ಜಾಲತಾಣ ಎಕ್ಸ್‌ನಲ್ಲಿ 'ಮಸಾಲೆ ದೋಸೆ - Masale Dose' ಎಂಬ ಖಾತೆಯಲ್ಲಿ ವಿವಿಧ ತಿಂಡಿಗಳ ಹೆಸರು ಹೇಗೆ ಬಂದಿತು ಎಂದು ಭಾರೀ ಚರ್ಚೆ ನಡೆಯುತ್ತಿದೆ.

* ಪಕೋಡಾದ ಕಥೆ ಕೇಳಿದ್ರಾ: ಮಸಾಲೆ ದೋಸೆ ಖಾತೆಯಲ್ಲಿ ಪಕೋಡಾದ ಹೆಸರಿನ ಕುರಿತು ಪೋಸ್ಟ್ ಹಾಕಲಾಗಿದೆ.
'ಒಮ್ಮೆ ಯಾರೋ ಕಳ್ಳನನ್ನು ಹಿಡಿಯಲು "ಪಕ್ಡೋ,ಪಕ್ಡೋ" ಅಂತ ಕೂಗ್ತಾ ಇದ್ರು ರೀ.....ಇನ್ನೊಬ್ಬ ಯಾರೋ ಕಳ್ಳನನ್ನು ಹಿಡಿದು "Pakdaa, Pakdaa" ಅಂತ ಕೂಗಿದ ರೀ.....ಇದನ್ನು ಕಂಡ ಬೋಂಡಾ ಅಂಗಡಿಯವ "ಪಕೋಡ, ಪಕೋಡ" ಅಂತ ಹೆಸರಿಟ್ಟ ಕಣ್ರೀ' ಎಂದು ಪೋಸ್ಟ್ ಹಾಕಲಾಗಿದೆ.

* ಗೋಬಿ ಮಂಚೂರಿಯ ಹೆಸರು: ಕೇರಳದ ಪುಟ್ಟ ಮಕ್ಕಳು ಕರ್ನಾಟಕದಲ್ಲಿ ಎಷ್ಟೋ ವರ್ಷಗಳ ಹಿಂದೆ ಕೆಳೆದು ಹೋಗಿರುತ್ತಾರೆ. ವರ್ಷಗಳ ನಂತರ ಮಕ್ಕಳು ತನ್ನ ಹೋಟೆಲ್‌ನಲ್ಲಿ ಅಕಸ್ಮಾವಾಗಿ ಸಿಕ್ಕರು

ಏನು ನಿಮ್ಮ ಹೆಸರು

ಗೋಪಿ, ಮಂಜು ರೀ ಎಂದರು

ಬಳಿಕ ಮಕ್ಕಳ ನೆನಪಿಗೆ ಒಂದು ಖಾದ್ಯ ತಯಾರಿಸಿದ.... ಅದು ಇಂದು ನೀವು ತಿನ್ನೋ 'ಗೋಪಿ ಮಂಚೂರಿ' ಕಣ್ರೀ.

* ಪೊಂಗಲ್ ಹೆಸರು: ಹುಡುಗನೊಬ್ಬ ಶಾಲೆಯಲ್ಲಿ ತಲೆ ಹರಟೆ ಮಾಡುತ್ತಿದ್ದ, ಗುರುಗಳು "ಏಯ್.. ಪೆಂಗ, ಚೆಂಗ್ ಚೆಂಗ್ಲೂತರ ಆಡ್ತೀಯ" ಅಂತ ಒಂದು ಕಪಾಳಕ್ಕೆ ಕೊಟ್ಟರು.

ಮಗು ಅಳುತ್ತಾ ಮನೆಗೆ ಬಂದ,

ತಾಯಿ: "ಎನ್ನ ಆಯ್ತು, ಎನ್ನ ಸೊಲ್ಲು"

ಮಗು ಅಳುತ್ತಾ: "ಸಾರ್ ಪೆಂಗಲ್ ಅಂದ್ರು"

ಆಗ ಮಹಾತಾಯಿ ತಯಾರಿಸಿದ್ದೇ "ಪೊಂಗಲ್", ಇಷ್ಟೇ ಕಣ್ರೀ ಎಲ್ಲಾ.... ನಂಬ್ರೀ

* ರವೆ ಉಂಡೆ ಹೆಸರು: ಒಂದು ಉಂಡೆಯ ಕಥೆ:

ಸ್ನೇಹಿತ 1: ಊಟ ಆಯ್ತಾ

ಸ್ನೇಹಿತ 2: ಆಯ್ತು....

ಸ್ನೇಹಿತ 1: "ಏನ್ ಉಂಡೆ?"

ಅಷ್ಟರಲ್ಲಿ ಅಲ್ಲೆ ಇದ್ದ ಸಿಹಿ ಅಂಗಡಿಯವ ಕೇಳಿಸಿಕೊಂಡ, ತಾನು ಮಾಡಿದ್ದ ಸಿಹಿಗೆ.... "ರವೆ ಉಂಡೆ" ಎಂದು ಹೆಸರಿಟ್ಟ.... ಇಂದು ಅದೇ ರವೆ ಉಂಡೆ, ನುಚ್ಚಿನ ಉಂಡೆ ಹೀಗೆ ಎಷ್ಟೋ ಉಂಡೆಗಳು ಆಗೋಗಿದೆ ಕಣ್ರೀ!!

* ಹಾಲು ಬಾಯಿ: ಅಡುಗೆ ಭಟ್ಟ ಅಕ್ಕಿ, ಬೆಲ್ಲ ಎಲ್ಲಾ ಹಾಕಿ ಏನೊ ಅಡುಗೆ ಮಾಡ್ತಿದ್ದ.... ಅಷ್ಟರಲ್ಲಿ ಅವನ ಪ್ರಾಣ ಸ್ನೇಹಿತ, "ಕ್ಯಾ ಹಾಲ್ ಭಾಯ್" ಅಂದ ರೀ.... ಅಷ್ಟೇ!!

ತನ್ನ ಬಗ್ಗೆ ಎಷ್ಟು ಕಾಳಜಿ ಇವನಿಗೆ ಅಂತ ಭಾವುಕನಾದ ಭಟ್ಟ.... ತಾನು ತಯಾರಿಸಿದ ತಿಂಡಿಗೆ ಒಂದು ಹೆಸರಿಟ್ಟ.... ಅದೇ "ಹಾಲುಬಾಯಿ" ಕಣ್ರೀ!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+