Laxman Savadi : ನಾನೇನು ರೇಪ್ ಮಾಡಿದ್ದೀನಾ? ಬಿಜೆಪಿ ನಾಯಕರಿಗೆ ನೇರ ಪ್ರಶ್ನೆ ಮಾಡಿದ ಲಕ್ಷ್ಮಣ್‌ ಸವದಿ

ಬೆಳಗಾವಿ, ಏಪ್ರಿಲ್13:‌ ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಟ್ಟಿ ಬಳಿಕ ಅಳೆದುತೂಗಿ ಟಿಕೆಟ್‌ ಬಿಜೆಪಿ 212 ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಜೋರಾಗಿದೆ.

ಈಗಾಗಲೇ ಅಥಣಿ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿಗೆ ಗುಡ್‌ ಬೈ ಹೇಳಿರುವ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ್‌ ಸವದಿ, ನನಗೆ ಟಿಕೆಟ್‌ ಕೈ ತಪ್ಪಲು ಕೆಲ ಬಿಜೆಪಿ ನಾಯಕರೇ ಕಾರಣ ಎಂದು ಆರೋಪ ಮಾಡಿ ಪಕ್ಷ ಬಿಡಲು ನಿರ್ಧಾರಿಸಿದ್ದಾರೆ.

Laxman Savadi Questions BJP Leaders Why Remove Me From DCM Post

ಇನ್ನೂ ಟಿಕೆಟ್‌ ಕೈ ತಪ್ಪಿದ ಕುರಿತು ಲಕ್ಷ್ಮಣ್‌ ಸವದಿ ಮಾತನಾಡಿದ ಅವರು, ಯಾವ ಅಪರಾಧ ಮಾಡಿದ್ದೇನೆ ? ಪದವಿ ಕೊಟ್ಟು ಕಸಿದಿದ್ದು ಏಕೆ? ನಾನೇನು ಕಳ್ಳತನ ಮಾಡಿದ್ದೇನಾ?, ಭ್ರಷ್ಟಾಚಾರ ಮಾಡಿದ್ದೀನಾ? ರೇಪ್ ಮಾಡಿದ್ದೀನಾ ?ಯಾರದ್ದಾದರೂ ಸೀರೆ ಜಗಿದ್ದೆನಾ? ಎಂದು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳಿಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಹಳೆಯ ಸ್ನೇಹಿತರು, ಅವರ ವಿಚಾರವೇ ಬೇರೆ, ನನ್ನ ವಿಚಾರ ಬೇರೆ, ಆ ನಂತರದಲ್ಲಿ ಅವರು ನಾವು ಕೂಡಿ ಕೆಲಸ ಮಾಡಿದ್ದೇವೆ. ನನಗೆ ರಾಜಕೀಯವಾಗಿ ಈ ಬೆಳವಣಿಗೆ ಅನಿವಾರ್ಯವಾಗಿದೆ. ನನಗೆ ಬಹಳ ನೋವಾಗಿದೆ. ಟಕೆಟ್ ಕೊಡಲಿಲ್ಲಾ ಅಂತಾ ನಾನು ಪಕ್ಷದಿಂದ ಹೊರ ಹೊರಟಿಲ್ಲ , ಅಸೂಯೆ, ಅವಮಾನ ಎಲ್ಲವೂ ನನಗೆ ಆಗಿದೆ. ಆಂತರಿಕವಾಗಿ ಜಿಲ್ಲಾ ಮತ್ತು ರಾಜ್ಯದವರು ಕೊಟ್ಟ ತೊಂದರೆಯನ್ನು ಸಹಿಸಿಕೊಂಡು ಆದರೂ ಇಲ್ಲಿವರೆಗೆ ಬಂದಿದ್ದೇನೆ. ಅನೇಕ ಕಡೆ ವೇದಿಕೆ ರಾಷ್ಟ್ರೀಯ ನಾಯಕರು ಜತೆಗೆ ವೇದಿಕೆ ಹಂಚಿಕೊಳ್ಳುಲು ಅವಕಾಶ ಕೊಟ್ಟಿಲ್ಲ. ಅದೆಲ್ಲ ಮಾತನಾಡುವ ಅಗತ್ಯ ನನಗಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಇನ್ನೂ ಈ ಹಿಂದೆ ನಾನು ಉಪಮುಖ್ಯಮಂತ್ರಿ ಆಗಿದ್ದೆ ಯಾಕೆ ಹಠಾತ ಆಗಿ ನನ್ನ ಗಮನಕ್ಕೆ ತರದೆ ಯಾಕೆ ಕಸಿದುಕೊಂಡರಿ? ಆಗಲೂ ನಾನು ಮೌನವಹಿಸಿದ್ದೆ. ಯಾರೊಬ್ಬರ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡಲಿಲ್ಲ. ಪಕ್ಷ ನನಗೆ ಸೋತ ಸಂಧರ್ಭದಲ್ಲಿ ಕೊಟ್ಟ ಅವಕಾಶ ದೊಡ್ಡದು, ಟೀಕೆ ಮಾಡುವದಿಲ್ಲ ಅದರಿಂದ ನನಗೆ ಲಾಭ ಇಲ್ಲ. ಒಬ್ಬರಿಗೂ ಕೆಡಕು ಬಯಸಲ್ಲ,ಅಸೂಯೆಯೂ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

Laxman Savadi Questions BJP Leaders Why Remove Me From DCM Post

ಇನ್ನೂ ಪಕ್ಷದ ಸದಸ್ಯತ್ವಕ್ಕೆ ನಾಳೆ ರಾಜೀನಾಮೆ ಕೊಡುತ್ತೆನೆ. ಜನರ ಅಭಿಪ್ರಾಯವನ್ನು ಕೇಳಿ ಮುಂದಿನ ನಿರ್ಣಯ ಮಾಡುತ್ತೆನೆ. ನಾಳೆ(ಶುಕ್ರವಾರ) ರಾತ್ರಿ ಬೆಂಗಳೂರು ತೆರಳಿ ಪಕ್ಷದ ಸದಸ್ಯತ್ವ ಮತ್ತು ಸಭಾಪತಿಗಳಿಗೆ ವಿದಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.

ನನ್ನ ರಾಜಕೀಯ ಗುರುಗಳಾದ ಬಿ ಎಲ್ ಸಂತೋಷ ಪೋನ್ ಕರೆಗಳನ್ನು ನಾನು ಸ್ವೀಕಾರ ಮಾಡುತ್ತಿಲ್ಲ, ಯಾಕೆಂದರೆ ಗುರುವಿಗೆ ಮರಳಿ ಉತ್ತರ ಕೊಡುವ ಶಕ್ತಿ ನನಗೆ ಉಳಿದಿಲ್ಲ. ಅವರು ನನ್ನ ಪರವಾಗಿ ಪ್ರಯತ್ನ‌ ಮಾಡಿಲ್ಲ ಅಂತಾ ಅನ್ನಿಸಿಲ್ಲ. ಅವರಿಗೆ ಉತ್ತರ ಕೊಡಲು ಮರು ಮಾತನಾಡಲು ನನಗೆ ಮುಜಗುರವಾಗುತ್ತದೆ. ನಾನು ಮಾದ್ಯಮಗಳ ಮೂಲಕ ಕ್ಷಮೆ ಕೇಳಿದ್ದೇನೆ ಎಂದರು

ಇನ್ನೂ ಅನ್ಯ ಪಕ್ಷದ ನಾಯಕರು ಸಂಪರ್ಕಿಸಿದ್ದಾರಾ ಎಂಬ ಕುರಿತು ಮಾತನಾಡಿ, ಸಿದ್ದರಾಮಯ್ಯ ಅಥವಾ ಬೇರೆ ಪಕ್ಷ ದ ಯಾವುದೇ ನಾಯಕರು ನನಗೆ ನೇರವಾಗಿ ಮಾತನಾಡಿಲ್ಲ, ಮಧ್ಯವರ್ತಿ ಗಳ ಮೂಲಕ ಕರೆ ಮಾಡಿದ್ದು ಸತ್ಯ. ಇಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯ ನಂತರ ನಾನು ಎನು ಮಾಡಬೇಕು ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+