Diabetes: ಕರ್ನಾಟಕದಲ್ಲಿ 10ರಲ್ಲಿ ಒಬ್ಬರಿಗೆ ಮಧುಮೇಹ: ಅಧ್ಯಯನ
ಬೆಂಗಳೂರು, ಜೂನ್. 11: ದೇಶದಲ್ಲಿ ಮಧುಮೇಹದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಕರ್ನಾಟಕ ರೆಡ್ ಝೋನ್‌ನಲ್ಲಿದೆ. ಮಧುಮೇಹ ಪ್ರಕರಣಗಳ ಸಂಖ್ಯೆಯಲ್ಲಿ ರಾಜ್ಯವು 5.3 ರಿಂದ 16.0 ಪ್ರಮಾಣದಲ್ಲಿ 10.6 ರಷ್ಟಿದೆ ಎಂದು ಅಂದಾಜಿಸಲಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಇದರರ್ಥ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈಗಾಗಲೇ ಮಧುಮೇಹದಿಂದ ಬಳಲುತ್ತಿದ್ದಾರೆ
ಮುಂದಿನ ಐದು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಜನರು ಮಧುಮೇಹದಿಂದ ಬಳಲಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಂತಹ ಮೆಟ್ರೋ ನಗರಗಳು ಮಧುಮೇಹಿಗಳ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಹೆಚ್ಚಿನ ಅಪಾಯವನ್ನು ಹೊಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನವನ್ನು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ (MDRF) ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಹಯೋಗದೊಂದಿಗೆ ನಡೆಸಿದೆ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಧನಸಹಾಯ ಪಡೆದಿದೆ.

ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಇಂಡಿಯಾ ಡಯಾಬಿಟಿಸ್ (ICMR-INDIAB) ಅಧ್ಯಯನವು ಭಾರತದಲ್ಲಿ ಪ್ರಸ್ತುತ 101 ಮಿಲಿಯನ್ ಮಧುಮೇಹಿಗಳಿದ್ದಾರೆ ಎಂದು ಬೊಟ್ಟು ಮಾಡಿದೆ. ಇದು ಒಟ್ಟು ಜನಸಂಖ್ಯೆಯ 11·4 ಶೇಕಡಾ. ಪೂರ್ವ ಮಧುಮೇಹವು ದೇಶಕ್ಕೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇಲ್ಲಿ ಕನಿಷ್ಠ 136 ಮಿಲಿಯನ್ ಜನರು, ಅಂದರೆ 15.3 ಪ್ರತಿಶತದಷ್ಟು ಜನರು ಮಧುಮೇಹಕ್ಕೆ ಒಳಗಾಗಬಹುದು ಎಂದು ಪತ್ತೆಹಚ್ಚಲಾಗಿದೆ.
ಕರ್ನಾಟಕದಲ್ಲಿ, ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಅನುಪಾತವು 1: 1.2 ರ ಆತಂಕಕಾರಿ ಅನುಪಾತವನ್ನು ಮುಟ್ಟಿದೆ. ಎಂಡಿಆರ್‌ಎಫ್‌ನ ಅಧ್ಯಕ್ಷ ಮತ್ತು ಅಧ್ಯಯನದ ಮೊದಲ ಲೇಖಕರಾದ ಡಾ ರಂಜಿತ್ ಮೋಹನ್ ಅಂಜನಾ, "ರಾಜ್ಯದಲ್ಲಿ 10 ಜನರಲ್ಲಿ ಒಬ್ಬರಿಗೆ ಮಧುಮೇಹವಿದೆ. ಇದು ಆತಂಕಕಾರಿಯಾಗಿದೆ" ಎಂದು ಹೇಳಿದ್ದಾರೆ.
ಈ ಸಂಶೋಧನೆಯಲ್ಲಿ ಇಡೀ ದೇಶದಿಂದ ಒಟ್ಟು 1,13,043 ವ್ಯಕ್ತಿಗಳನ್ನು ಪರೀಕ್ಷಿಸಿದೆ. ಅಕ್ಟೋಬರ್ 18, 2008 ಮತ್ತು ಡಿಸೆಂಬರ್ 17, 2020 ರ ನಡುವೆ ಗ್ರಾಮೀಣ ಪ್ರದೇಶಗಳಿಂದ 79,506 ಮತ್ತು ನಗರ ಪ್ರದೇಶಗಳಿಂದ 33,537 ಮಂದಿಯನ್ನು ಪರೀಕ್ಷೆಗ ಒಳಪಡಿಸಲಾಗಿದೆ. ಮಧುಮೇಹದ ವಿಷಯದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅಂತರ ಕಡಿಮೆಯಾಗಿದೆ ಎಂದು ಡಾ.ಅಂಜನಾ ಮಾಹಿತಿ ನೀಡಿದ್ದಾರೆ.

"ಭಾರತದಲ್ಲಿ ಈ ಹಿಂದೆ ರೋಗನಿರ್ಣಯ ಮಾಡಲಾದ ಮಧುಮೇಹ ಹೊಂದಿರುವ ಸುಮಾರು 7% ಜನರು ಮಾತ್ರ ರಕ್ತದಲ್ಲಿನ ಗ್ಲೂಕೋಸ್, ಲಿಪಿಡ್ಗಳು ಮತ್ತು ರಕ್ತದೊತ್ತಡದ ಚಿಕಿತ್ಸೆಯ ಗುರಿಗಳನ್ನು ಪೂರೈಸುತ್ತಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅವರು ಸರ್ಕಾರಿ ಆರೋಗ್ಯ ಸೌಲಭ್ಯಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ವರದಿ ಹೇಳಿದೆ.
ಸಾಂಕ್ರಾಮಿಕ ನಂತರದ ಪ್ರಕರಣಗಳು ವ್ಯಕ್ತಿಗಳ ಲಕ್ಷಣಗಳ ಮಾದರಿಗಳು ಬದಲಾದ ಕಾರಣ ಮತ್ತು ಅನೇಕರು ದೈಹಿಕವಾಗಿ ನಿಶಕ್ತರಾಗಿದ್ದಾರೆ. ಹೀಗಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಮಾನಸಿಕ ಸದೃಢತೆಗೆ ಪ್ರಾಮುಖ್ಯತೆ ಕೊಡುವುದು ಒಂದೇ ದಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ನಿಂಗ್ ವಾಕ್ vs ಈವಿನಿಂಗ್ ವಾಕ್: ಯಾವುದು ಉತ್ತಮ? -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ










Click it and Unblock the Notifications