Land Acquisition: ಭೂ ಮಾಲೀಕರಿಗೆ ಹೈಕೋರ್ಟ್ ಗುಡ್ ನ್ಯೂಸ್
Good News: ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ರೈತರಿಂದ ಅವರ ಒಪ್ಪಿಗೆಯ ಮೇರೆಗೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಜೊತೆಗೆ ಇದಕ್ಕೆ ನೀಡುವ ಪರಿಹಾರದ ರೂಪದ ಹಣಕ್ಕೆ ಜಿಎಸ್‌ಟಿ ವಿಧಿಸಲಾಗುತ್ತಿತ್ತು ಎನ್ನುವ ಆರೋಪಗಳಿವೆ. ಇದೀಗ ಈ ಕುರಿತು ರೈತರಿಗೆ ಅನುಕೂಲ ಆಗುವಂತೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ರೈತರು ಸೇರಿ ಇತರರಿಂದ ಭೂಮಿ ವಶಪಡಿಸಿಕೊಳ್ಳುವವರಿಗೆ ಪರಿಹಾರ ರೂಪದಲ್ಲಿ ನೀಡುವ ಹಣಕ್ಕೆ ಜಿಎಸ್ಟಿ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶ ಭೂ ಮಾಲೀಕರ ಮುಖದಲ್ಲಿ ಮಂದಹಾಸ ತರಿಸಿದೆ.

ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿಗಳಾದ ಆರ್.ಆಶಾ ಮತ್ತಿತರರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.
ಇದರಿಂದ ರೈತರು ತಾವು ಪಡೆಯುವ ಪರಿಹಾರಕ್ಕೆ ಜಿಎಸ್‌ಟಿ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಇಷ್ಟ ಇಲ್ಲದಿದ್ದರೂ ಭೂಮಿಯನ್ನು ಕಳೆದುಕೊಂಡಿರುವ ಮತ್ತು ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರು ಕಳೆದುಕೊಳ್ಳುವ ಭೂಮಿಗೆ ಪರ್ಯಾಯವಾಗಿ ನಷ್ಟ ತುಂಬಿಕೊಡಲು ಪರಿಹಾರ ಪಡೆಯುತ್ತಾರೆ. ಅದಕ್ಕೆ ಜಿಎಸ್ಟಿಯಡಿ ತೆರಿಗೆಯನ್ನು ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು ಮತ್ತು ಕೆಐಎಡಿಬಿಇ ನಡುವೆ ಆಗಿರುವ ಒಪ್ಪಂದದಲ್ಲಿ ಹಲವು ಷರತ್ತುಗಳು ಒಳಗೊಂಡಿರಬಹುದು. ಆದರೆ, ಅದಕ್ಕೂ ಅರ್ಜಿದಾರರಿಗೆ ನೀಡುವ ಪರಿಹಾರ ಮೊತ್ತಕ್ಕೂ ಸಂಬಂಧ ಇಲ್ಲ. ಅದನ್ನು ಸಿಜಿಎಸ್ಟಿ-2ರಡಿ ಎಂಟ್ರಿ 5(ಇ) ಅಡಿ ಸೇವೆ ಎಂದು ಪರಿಗಣೆ ಮಾಡಲಾಗುವುದು ಎಂದು ತಿಳಿಸಿದೆ.
ಒಪ್ಪಂದದ ವಿಚಾರದಲ್ಲಿ ಜಿಎಸ್‌ಟಿ ಕಾಯ್ದೆಯನ್ನು ಒಪ್ಪಿಕೊಳ್ಳಬೇಕೆಂದೇನಿಲ್ಲ. ಸರ್ಕಾರ ಅರ್ಜಿದಾರರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಅದಕ್ಕೆ ಪರ್ಯಾಯವಾಗಿ ಪರಿಹಾರ ನೀಡುತ್ತಿದೆ. ಅದರಲ್ಲಿ ತೆರಿಗೆ ವಿಧಿಸುವ ಅಗತ್ಯ ಇಲ್ಲ ತಿಳಿಸಿರುವ ನ್ಯಾಯಪೀಠ, ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಬೇಡಿಕೆ ನೋಟಿಸ್ಗಳನ್ನು ರದ್ದುಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಿಎಂಆರ್ಸಿಎಲ್ಗಾಗಿ ಕೆಎಐಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಆಗುವ ನಷ್ಟಕ್ಕೆ ಪರಿಹಾರವನ್ನು ನೀಡಿತ್ತು. ಆ ಭೂಮಿ ವರ್ಗಾವಣೆ ಮತ್ತು ಮಾರಾಟ ಜಿಸಿಎಸ್ಟಿ/ಕೆಜಿಎಸ್ಟಿನಡಿ ಬಂದರೂ ಸಹ ಅದಕ್ಕೆ ಜಿಎಸ್ಟಿ ವಿಧಿಸಲು ವಿನಾಯ್ತಿ ಇದೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ತನಗೆ ಅಧಿಕಾರ ಇಲ್ಲದಿದ್ದರೂ ಸಹ ಪರಿಹಾರ ಧನಕ್ಕೆ ಜಿಎಸ್ಟಿ ಪಾವತಿಸುವಂತೆ ನೋಟಿಸ್ ನೀಡಿರುವುದು ಕಾನೂನುಬಾಹಿರ ಆಗಿದೆ.
ಆದ್ದರಿಂದ ಆ ತೆರಿಗೆ ನೋಟಿಸ್ಗಳನ್ನು ರದ್ದುಗೊಳಿಸಬೇಕೆಂದು ಕೋರ್ಟ್‌ಗೆ ಕೋರಿದ್ದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ಪರ ವಕೀಲರು, ರೈತರ ಪರಿಹಾರದ ಮೇಲೆ ಜಿಎಸ್ಟಿ ವಿಧಿಸಿರುವುದು ಕಾನೂನು ಬದ್ಧವಾಗಿಯೇ ಇದೆ ಎಂದು ವಾದಿಸುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದರು.
ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬೆಂಗಳೂರು ನಗರದ ಸುತ್ತಮುತ್ತ ಹಲವು ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮಂಡಳಿ ಪರಿಹಾರ ಧನವನ್ನು ನಿಗದಿ ಮಾಡಿತ್ತು. ಅದರಂತೆಯೇ ಅವರು ಪರಿಹಾರ ಮೊತ್ತವನ್ನೂ ಸಹ ಪಡೆದುಕೊಂಡಿದ್ದರು. ಆದರೆ ವಾಣಿಜ್ಯ ತೆರಿಗೆ ಇಲಾಖೆ ಆ ಪರಿಹಾರ ಧನಕ್ಕೆ ಜಿಎಸ್‌ಟಿ ಪಾವತಿ ಮಾಡುವಂತೆ ರೈತರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ರೈತರು ತಮ್ಮ ಪರಿಹಾರ ಧನಕ್ಕೆ ಜಿಎಸ್ಟಿ ಅನ್ವಯ ಸರಿಯಲ್ಲಎಂದು ಮನವಿ ಸಲ್ಲಿಸಿದ್ದರು. ಆದರೂ ಅದನ್ನು ಪರಿಗಣಿಸಿರಲಿಲ್ಲ. ಬದಲಿಗೆ ಮೊದಲು ನೀಡಿದ್ದ ತೆರಿಗೆ ಬೇಡಿಕೆ ನೋಟಿಸ್ ಅನ್ನು ಕಾಯಂಗೊಳಿಸಿದ್ದರು. ಅದನ್ನು ಪ್ರಶ್ನಿಸಿ ರೈತರು ಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications