65,00,000 ರೂಪಾಯಿ ಬೆಲೆಬಾಳುವ ಚಿನ್ನದ ನಿಧಿ ಕೊಟ್ಟು ಬೀದಿಗೆ ಬಿದ್ದ ಕುಟುಂಬ, ಅಧಿಕಾರಿಗಳ ವಿರುದ್ಧ ಆಕ್ರೋಶ... Gold Treasure
ರಸ್ತೆಯಲ್ಲಿ 500 ರೂಪಾಯಿ ನೋಟ್ ಬಿದ್ದರೂ ಅದನ್ನ ಪ್ರಾಮಾಣಿಕವಾಗಿ ಮರಳಿಸದ ಜನರು ಇರುವ ಈ ಕಾಲಘಟ್ಟದಲ್ಲಿ, ತಮ್ಮ ಮನೆ ಕಟ್ಟಲು ಗುಂಡಿ ತೋಡುವಾಗ ತಮ್ಮದೇ ಜಾಗದಲ್ಲಿ ಸಿಕ್ಕಿದ್ದ ಸುಮಾರು 65,00,000 ರೂಪಾಯಿ ಬೆಲೆ ಬಾಳುವ ನಿಧಿಯನ್ನು ಸರ್ಕಾರಕ್ಕೆ ಮರಳಿಸಿತ್ತು ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಕುಟುಂಬ. ಇಷ್ಟೆಲ್ಲಾ ಮಾಡಿ ಪ್ರಮಾಣಿಕತೆ ಮೆರೆದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದ ಹಿನ್ನೆಲೆ ನಿಧಿ ಮರಳಿಸಿದ್ದ ಕುಟುಂಬ ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ತಮ್ಮ ಜಾಗವನ್ನೇ ಬಿಟ್ಟುಕೊಟ್ಟು ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಜನವರಿ 10 ರಂದು ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆ ಕಟ್ಟಿಸಲು ಗುಂಡಿ ತೋಡುವಾಗ ನಿಧಿ ಸಿಕ್ಕಿತ್ತು. ನಿಧಿ ಸಿಕ್ಕಿದ್ದ ಬೆನ್ನಲ್ಲೇ ಗ್ರಾಮದಲ್ಲಿ ಉತ್ಖನನ ಆರಂಭವು ಆಗಿದೆ, ಇದಕ್ಕಿಂತ ಹೆಚ್ಚಾಗಿ ತಮ್ಮ ಜಾಗದಲ್ಲಿ ನಿಧಿ ಸಿಕ್ಕಿದ್ದ ವಿಚಾರವನ್ನು ಗಂಗವ್ವ ಕುಟುಂಬ ಅಧಿಕಾರಿಗಳಿಗೆ ತಿಳಿಸಿ ಆ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿತ್ತು. ಇಷ್ಟೆಲ್ಲಾ ಮಾಡಿದ್ದರೂ ಪ್ರಾಮಾಣಿಕ ರೀತಿಯಲ್ಲಿ ನಿಧಿ ಒಪ್ಪಿಸಿದ ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯ ಸಿಕ್ಕೇ ಇಲ್ಲ. ಇದರ ಬದಲಾಗಿ ಗಂಗವ್ವ ಕುಟುಂಬ ತಮ್ಮ ಜಾಗವನ್ನೂ ತೊರೆದು, ಮನೆ ಕಟ್ಟುವ ಕೆಲಸವನ್ನೂ ಪೂರ್ಣಗೊಳಿಸಲು ಆಗದೆ ಬೀದಿಗೆ ಬೀಳುವ ಸ್ಥಿತಿಗೆ ತಲುಪಿದೆ.

ತಾಯಿ ಮನೆಯಲ್ಲಿ ನರಳುತ್ತಿರುವ ಕುಟುಂಬ
ತಮ್ಮ ಪರಿಸ್ಥಿತಿ ಬಗ್ಗೆ ಮಾತನಾಡಿರುವ, ನಿಧಿ ಒಪ್ಪಿಸಿದ್ದ ಗಂಗವ್ವ ಅವರು ಮನೆ ಅರ್ಧಕ್ಕೆ ನಿಂತಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ. ಅಲ್ಲದೇ, ನಿಧಿ ಸಿಕ್ಕಿದ್ದ ದಿನ ಬಂದ ಅಧಿಕಾರಿಗಳು ಮತ್ತೆ ಬಂದೇ ಇಲ್ಲ ಎಂದು ಗಂಗವ್ವ ಅವರು ತಮ್ಮ ಮನೆಯ ಪರಿಸ್ಥಿತಿ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಗ್ರಾಮಸ್ಥರು ಕೂಡ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ಹೊರ ಹಾಕುತ್ತಿದ್ದು, ಅತ್ತ 65,00,000 ರೂಪಾಯಿ ಬೆಲೆಬಾಳುವ ಚಿನ್ನದ ನಿಧಿ ಒಪ್ಪಿಸಿದರೂ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲವಾ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇಷ್ಟೆಲ್ಲಾ ನಡೆದರೂ ಗಂಗವ್ವ ಕುಟುಂಬ ಮಾತ್ರ ನಿಧಿ ಕೊಟ್ಟಿದ್ದಕ್ಕೆ ತಮಗೆ ಯಾವುದೇ ಬೇಸರ ಇಲ್ಲ ಎಂದಿದೆ. ಮತ್ತೊಂದು ಕಡೆ ಇರಲು ಸೂರು ಇಲ್ಲದೆ ತಾಯಿ ಮನೆ ಸೇರಿದ್ದಾರೆ ಗಂಗವ್ವ ಮತ್ತು ಕುಟುಂಬ ಸದಸ್ಯರು.
ದೇವಾಲಯ ಬಳಿ ಬೃಹತ್ ಕಲ್ಲಿನ ರಚನೆ ಪತ್ತೆ
ಒಂದು ಕಡೆ ಗಂಗವ್ವ ಅವರ ಕುಟುಂಬ ಸೂರು ಇಲ್ಲದೆ ಪರದಾಡುವಾಗ, ಇನ್ನೊಂದು ಕಡೆ ಉತ್ಖನನ ನಡೆಯುತ್ತಿರುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಜಾಗದಲ್ಲಿ ಬೃಹತ್ ಕಲ್ಲಿನ ರಚನೆ ಪತ್ತೆಯಾಗಿದೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇರುವ ಕೋಟೆ ವೀರಭದ್ರೇಶ್ವರ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ಈ ಜಾಗದಲ್ಲಿ ಮತ್ತಷ್ಟು ನಿಧಿಯ ಜೊತೆಗೆ ಐತಿಹಾಸಿಕ ಕುರುಹು ಸಿಗಬಹುದು ಎಂಬ ಭರವಸೆಯೊಂದಿಗೆ ಉತ್ಖನನ ಕಾರ್ಯ ಶುರು ಮಾಡಲಾಗಿತ್ತು.
ಹೀಗೆ ಉತ್ಖನನ ಆರಂಭವಾದ ನಂತರ ದೊಡ್ಡ ರಚನೆ ಭಾಗವೆಂದು ನಂಬಲಾಗಿರುವ ಬೃಹತ್ ಕಲ್ಲು ಪತ್ತೆ ಆಗಿದ್ದು, ಭಾರಿ ಅಚ್ಚರಿಗೆ ಕಾರಣವಾಗಿದೆ. ಬೃಹತ್ ಕಲ್ಲಿನ ರಚನೆಯು ಪತ್ತೆಯಾದ ಬಳಿಕ ಅಧಿಕಾರಿಗಳು ಮತ್ತಷ್ಟು ಅಲರ್ಟ್ ಆಗಿದ್ದು, ಮುತುವರ್ಜಿಯಿಂದ ಈ ಉತ್ಖನನ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ನಿಧಿಯನ್ನು ಪ್ರಾಮಾಣಿಕವಾಗಿ ಒಪ್ಪಿಸಿದ್ದ ಗಂಗವ್ವ ಅವರ ಕುಟುಂಬಕ್ಕೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
-
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Gold Price: ಸತತ 2ನೇ ದಿನವು ಬಂಗಾರದ ಬೆಲೆ ಭಾರೀ ಏರಿಕೆ, ದಾಖಲೆ ಬರೆದ ಬೆಳ್ಳಿ -
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
Pawan Kalyan: ಪವನ್ ಕಲ್ಯಾಣ್ ವಿರುದ್ಧ ಕಾಮಿಡಿ ವಿಡಿಯೋ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಬಂಧನ -
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Bengaluru Migration: ಬೆಂಗಳೂರಿಗೆ ನಾರ್ಥಿಗಳ ವಲಸೆಗೆ ಇದೇ ಕಾರಣ, ವೈರಲ್ ಪೋಸ್ಟ್ - ಚರ್ಚೆ -
Dr BR Ambedkar: ಚುನಾವಣೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಪಕ್ಷವಲ್ಲ: ಸಿದ್ದರಾಮಯ್ಯ -
Gold: ಹಟ್ಟಿ ಚಿನ್ನದ ಗಣಿ ಐತಿಹಾಸಿಕ ಸಾಧನೆ, ದಾಖಲೆ ಮಟ್ಟದ ಚಿನ್ನ ಉತ್ಪಾದನೆ -
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
Viral: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪಾದಚಾರಿಗಳೇ ಕಾರಣವೆಂದ ಸಂಸ್ಥಾಪಕ: ಕಿಡಿಕಾರಿದ ನೆಟ್ಟಿಗರು -
Amruthadhare Serial: ಜೈದೇವ್ ಅಟ್ಟಹಾಸಕ್ಕೆ ಬ್ರೇಕ್ ಬೇಕು: ಗೌತಮ್ ದಿವಾನ್ಗೆ ಆಕ್ಷನ್ ಕೊಡಿ ಎಂದ ವೀಕ್ಷಕರು












Click it and Unblock the Notifications