ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದರಿಗೆ ಬಿಜೆಪಿ ಸೇರಲು ಆಹ್ವಾನ!
ಬೆಂಗಳೂರು, ಮಾರ್ಚ್ 03 : ಕರ್ನಾಟಕ ಏಕೈಕ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್‌ಗೆ ಬಿಜೆಪಿ ಸೇರಲು ಆಹ್ವಾನ ನೀಡಲಾಗಿದೆ. ಹೌದು, ಲಡಾಕ್ ಕ್ಷೇತ್ರದ ಬಿಜೆಪಿ ಸಂಸದ ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಈ ಆಹ್ವಾನವನ್ನು ನೀಡಿದ್ದು, ಟ್ವೀಟ್ ಕೂಡಾ ಮಾಡಿದ್ದಾರೆ.
Recommended Video
ಸೋಮವಾರದಿಂದ ಸಂಸತ್ ಅಧಿವೇಶನ ಆರಂಭವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಅವರು ಸಂಸತ್ ಭವನದಲ್ಲಿ ಇರುವಾಗಲೇ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿದೆ.
ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಕೇವಲ ಡಿ. ಕೆ. ಸುರೇಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ. ಅವರ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಲಡಾಕ್‌ನ ಸಂಸದರು ಕನ್ನಡದಲ್ಲಿಯೇ 'ಬಿಜೆಪಿ ಸೇರಿಕೊಳ್ಳಿ' ಎಂದು ಕರೆ ನೀಡಿರುವುದು ಕುತೂಹಲ ಮೂಡಿಸಿದೆ.
ಡಿ. ಕೆ. ಸುರೇಶ್ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಸಹೋದರ. ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
|
ಜಮ್ಯಾಂಗ್ ಮಾಡಿರುವ ಟ್ವೀಟ್
ದೆಹಲಿಯ ಸಂಸತ್ ಭವನದಲ್ಲಿ ಡಿ. ಕೆ. ಸುರೇಶ್‌ಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿದೆ. ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಸಂಸತ್ ಭವನದಲ್ಲಿ ಆಗಿದ್ದೇನು?
ಸಂಸತ್ ಭವನದಲ್ಲಿ ಇಂದು ಬಿಡುವಿನ ವೇಳೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತಿದ್ದರು. ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಸಹ ಜೊತೆಗಿದ್ದರು.

ಲಡಾಕ್ ಸಂಸದರಿಗೆ ಕನ್ನಡ ಪಾಠ
ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್‌ಗೆ ಕನ್ನಡ ಪದಗಳನ್ನು ಕಲಿಸುತ್ತಿದ್ದರು. ಆಗ ಡಿ. ಕೆ. ಸುರೇಶ್ ಬಂದರು. ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಆಗ ಕನ್ನಡದಲ್ಲಿ 'ಬಿಜೆಪಿ ಸೇರಿಕೊಳ್ಳಿ' ಎಂದು ಹೇಳಿದರು.

ಕನ್ನಡ ಕೇಳಿ ಅಚ್ಚರಿ
ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಕನ್ನಡ ಕೇಳಿ ಡಿ. ಕೆ. ಸುರೇಶ್ ಸಂತಸ ವ್ಯಕ್ತಪಡಿಸಿದರು. ಬಳಿಕ ಎಲ್ಲಾ ಸಂಸದರು ಒಟ್ಟಾಗಿ ಫೋಟೋ ತೆಗೆಸಿಕೊಂಡರು.












Click it and Unblock the Notifications