ಕುಮಟಾ ಅವಘಡ: ಮೃತರ ಸಂಖ್ಯೆ 10ಕ್ಕೆ ಏರಿಕೆ
ಶಿರಸಿ, ಸೆಪ್ಟೆಂಬರ್, 06: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬರ್ಗಿಯಲ್ಲಿ ನಡೆದಿದ್ದ ಗ್ಯಾಸ್ ಟ್ಯಾಂಕರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 10 ಕ್ಕೆ ಏರಿದೆ.
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಯಕಾರಿಯಾಗದೇ ನಿರ್ಮಲಾ (26), ನವ್ಯ(4) ಮೃತಪಟ್ಟಿದ್ದಾರೆ, ಕಳೆದ ಮಂಗಳವಾರ ನಡೆದಿದ್ದ ದುರ್ಘಟನೆಯಲ್ಲಿ ಪ್ರೇಮ ಗಣಪತಿ(50), ನಾಗವೇಣಿ(84),ಭರತ್(26), ಜಯಶ್ರೀ(56), ಶಕೀಲಾ(32) ಶ್ರೀಕಾಂತ್(57), ಧೀರಜ್(18) ನಿರಂಜನ(3) ಮೃತಪಟ್ಟಿದ್ದರು. [ಚಿತ್ರಗಳು : ಕುಮಟಾದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ, 4 ಸಾವು]

ಕಳೆದ ಮಂಗಳವಾರ ಬೆಳಗ್ಗೆ 5.30ರ ಸುಮಾರಿಗೆ ಅವಘಡ ನಡೆದಿತ್ತು. ಮಂಗಳೂರಿನಿಂದ ಗೋವಾಕ್ಕೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಹತ್ತಿರದಲ್ಲಿದ್ದ 9 ಮನೆಗಳಿಗೆ ಹಾನಿಯಾಗಿತ್ತು.
ಮನೆಗಳಲ್ಲಿದ್ದ ಸಿಲಿಂಡರ್ ಸಹ ಸ್ಫೋಟಗೊಂಡು ಗೋಡೆಗಳು ಕುಸಿದು ಬಿದ್ದಿದ್ದವು. ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಮೃತಪಟ್ಟಿದ್ದವು. ಇದೀಗ ಅವಘಡದಿಂದ ಗಂಭೀರ ಗಾಯಗೊಂಡವರು ಒಬ್ಬಬ್ಬರೇ ಮೃತಪಡುತ್ತಿರುವುದು ಕುಟುಂಬದವರ ಶೀಕ ಹೆಚ್ಚಿಸಿದೆ.[ಉತ್ತರ ಕನ್ನಡ : ಗ್ಯಾಸ್ ಟ್ಯಾಂಕರ್ ಸ್ಫೋಟ]
ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದರು. ಅಲ್ಲದೇ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದರು.












Click it and Unblock the Notifications