ಫಿಟ್‌ನೆಸ್ ಚಾಲೆಂಜ್:ಎಚ್‌ಡಿಕೆ ಮೇಲೆ ಅನಂತ್‌ಕುಮಾರ್ ಹೆಗ್ಡೆ ಗರಂ

Recommended Video

      ಮೋದಿ ಫಿಟ್ನೆಸ್ ಚಾಲೆಂಜ್ ನ ನಿರಾಕರಿಸಿದ ಎಚ್ ಡಿ ಕೆ | ಅನಂತ್ ಕುಮಾರ್ ಹೆಗ್ಡೆ ಫುಲ್ ಗರಂ

      ಬೆಂಗಳೂರು, ಜೂನ್ 14: ಪ್ರಧಾನಿ ಮೋದಿ ಅವರು ನೀಡಿದ್ದ ಫಿಟ್‌ನೆಸ್ ಚಾಲೆಂಜ್‌ ಅನ್ನು ನಿರಾಕರಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೇಂದ್ರ ಬಿಜೆಪಿ ಸಚಿವ ಅನಂತ್‌ಕುಮಾರ್ ಹೆಗಡೆ ಗರಂ ಆಗಿದ್ದಾರೆ.

      ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿರುವ ಅನಂತ್‌ಕುಮಾರ್ ಹೆಗ್ಡೆ ಅವರು, ' ಅಧಿಕಾರ ಸಿಗದಿದ್ದರೆ ಸತ್ತೇ ಹೋಗುತ್ತೇನೆ ಎಂದಿದ್ದ ಕುಮಾರಸ್ವಾಮಿ, ದೈಹಿಕ ಹಾಗೂ ಮಾನಸಿಕವಾಗಿ ಫಿಟ್‌ ಆಗಿಲ್ಲ' ಎಂದು ಜರಿದಿದ್ದಾರೆ.

      'ಅಧಿಕಾರ ಸಿಗದ್ದಿದ್ದರೆ ನನಗೆ ಜಾಸ್ತಿ ಆಯುಷ್ಯವಿಲ್ಲ, ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡ ಅಪ್ರಬುದ್ಧ ಮುಖ್ಯಮಂತ್ರಿಗೆ fitness ಸವಾಲ್ ಚಾಲೆಂಜ್ ಅನ್ನು ಪ್ರಧಾನಿಯವರು ಸೂಕ್ತವಾಗಿಯೇ ನೀಡಿರುತ್ತಾರೆ. ದೇಹ ಹಾಗು ಮಾನಸಿಕ fitness ಇಲ್ಲದವರು ರಾಜ್ಯದ ಕಾಳಜಿ ಬಗ್ಗೆ ಮಾತನಾಡುವುದು ಶುದ್ಧ ಹಾಸ್ಯಾಸ್ಪದ!' ಎಂದು ಅವರು ಟ್ವೀಟ್ ಮಾಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

      Kumaraswamy is not mentally and physically fit: Ananthkumar Hegde

      ಬಿಜೆಪಿ ಶಾಸಕ ಡಾ.ಅಶ್ವಥ್‌ನಾರಾಯಣ್ ಕೂಡ ಇದೇ ಕಾರಣಕ್ಕೆ ಕುಮಾರಸ್ವಾಮಿ ಅವರ ಕಾಲೆಳೆದಿದ್ದು, 'ರಾಜ್ಯದ 'ಫಿಟ್‌ನೆಸ್'ಬಗ್ಗೆ ಕಾಳಜಿ ವಹಿಸುವ ನೀವು ನಿಮ್ಮ ಹೊಸ ಮಿತ್ರರ ಅಕ್ರಮಗಳ ತನಿಖೆ ಮಾಡುವಿರಾ' ಎಂದು ಕಾಲೆಳೆದಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.

      ಕ್ರಿಕೆಟಿಗ ವಿರಾಟ್ ಕೊಹ್ಲಿ ನೀಡಿದ್ದ ಫಿಟ್‌ನೆಸ್ ಜಾಲೆಂಜ್‌ ಅನ್ನು ಸ್ವೀಕರಿಸಿದ್ದ ನರೇಂದ್ರ ಮೋದಿ, ತಾವು ವ್ಯಾಯಾಮ ಮಾಡುವ ವಿಡಿಯೋವನ್ನು ಟ್ವಿಟ್ಟರ್‌ ನಲ್ಲಿ ಅಪ್‌ಲೋಡ್ ಮಾಡಿ, ಕುಮಾರಸ್ವಾಮಿ ಅವರಿಗೆ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಲು ಆಹ್ವಾನಿಸಿದ್ದರು ಆದರೆ ಕುಮಾರಸ್ವಾಮಿ ಅದನ್ನು ನಿರಾಕರಿಸಿದ್ದರು.

      ಮೋದಿ ಅವರ ಚಾಲೆಂಜ್‌ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಅವರು, 'ದೈಹಿಕ ವ್ಯಾಯಾಮ ಅತ್ಯಗತ್ಯ ಆದರೆ ನನಗೀಗ ರಾಜ್ಯದ 'ಫಿಟ್‌ನೆಸ್‌' ಅತ್ಯಂತ ಮುಖ್ಯ, ಅದಕ್ಕೆ ನಿಮ್ಮ ಸಹಕಾರ ಬೇಕು' ಎಂದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+