ಕೆಂಪು ಬಸ್ ಚುನಾವಣಾ ಕೆಲಸಕ್ಕೆ: ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ
ಬೆಂಗಳೂರು, ಮೇ 08: ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 11 ಹಾಗೂ 12 ರಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಅಡಚಣೆ ಉಂಟಾಗಲಿದೆ.
ಮೇ 12 ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 8 ಸಾವಿರ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ಅಡಚಣೆ ಉಂಟಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಒಂದೊಮ್ಮೆ ಮತದಾನ ಮಾಡಲು ಊರಿಗೆ ತೆರಳಬೇಕಿದ್ದರೆ, ಕೆಎಸ್‌ಆರ್‌ಟಿಸಿ ಬಸ್ ನಂಬಬೇಡಿ, ಬೇರೆ ಖಾಸಗಿ ಬಸ್‌ಗಳಿಗೆ ತೆರಳುವುದು ಒಳಿತು. ಊರಿಗೆ ಹೋಗುವ ಪ್ಲಾನ್ ಮಾಡುವ ಮುನ್ನ ಒಮ್ಮೆ ಯೋಚಿಸಿ. ಬಸ್ ಟಿಕೆಟ್ ಮಾಡಿಸದೆ ಯಾವುದೋ ಒಂದು ಬಸ್ ಹತ್ತಿ ತೆರಳೋಣ ಎನ್ನುವ ಆಲೋಚನೆಯಲ್ಲಿ ತೆರಳಿದರೆ ನಿಮಗೆ ಶಾಕ್ ಕಾದಿದೆ.












Click it and Unblock the Notifications