KSRTC; ಸಾರಿಗೆ ವಿದ್ಯಾ ಚೇತನ ಯೋಜನೆ, ವಿವರಗಳು
ಬೆಂಗಳೂರು, ಆಗಸ್ಟ್ 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನಿಗಮದ ಸಮಸ್ತ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾಭ್ಯಾಸ ಪ್ರೋತ್ಸಾಹ ಧನ ಯೋಜನೆಯನ್ನು ಘೋಷಣೆ ಮಾಡಿದೆ. ಯೋಜನೆಯ ವಿವರಗಳು ಇಲ್ಲಿವೆ.
'ಸಾರಿಗೆ ವಿದ್ಯಾ ಚೇತನ ಯೋಜನೆ' ಎಂದು ಇದಕ್ಕೆ ಹೆಸರು ಇಡಲಾಗಿದೆ. ಈ ಮೊದಲು ಕೈಗಾರಿಕಾ ತರಬೇತಿ, ಪದವಿ (ಬಿಇ, ಬಿಎಸ್ಸಿ) ಹಾಗೂ ಸ್ನಾತಕೋತ್ತರ ಪದವಿಗಳ ವ್ಯಾಸಂಗಕ್ಕಾಗಿ ಮಾತ್ರ ಸ್ಕಾಲರ್ ಶಿಪ್ ನೀಡಲಾಗುತ್ತಿತ್ತು.

ಆದರೆ ಈಗ ಈ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚಿನ ವಿದ್ಯಾಭ್ಯಾಸಗಳನ್ನು, ಸ್ಕಾಲರ್ ಶಿಪ್ ವ್ಯಾಪ್ತಿಗೆ ಸೇರಿಸಿ ನೂತನ ಸಾರಿಗೆ ವಿದ್ಯಾ ಚೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯೋಜನೆಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ ಸ್ಕಾಲರ್ ಶಿಪ್‌ಗಿಂತ ಪ್ರಸ್ತುತ 3 ರಿಂದ 5 1/2 ಪಟ್ಟು ಹೆಚ್ಚಿಸಿದ ಮೊತ್ತದ ಸ್ಕಾಲರ್ ಶಿಪ್ ಅನ್ನು ನೀಡಲಾಗುತ್ತದೆ.
ಈ ಯೋಜನೆಯಲ್ಲಿ ನೂತನವಾಗಿ ಪಿಯುಸಿ, ಪದವಿ ಬಿಎ, ಬಿಕಾಂ., ಪಿಹೆಚ್‌ಡಿ ಹಾಗೂ ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವ ಪದವಿ ವ್ಯಾಸಂಗವನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ.
ಸ್ಕಾಲರ್ ಶಿಪ್ ಪರಿಷ್ಕೃತ ಪ್ರೋತ್ಸಾಹ ದರಗಳು ಹೀಗಿವೆ
* ಐಟಿಐ/ ಜೆಒಸಿ (1 ರಿಂದ 2 ವರ್ಷ). ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತ 900 ರೂ. ಪ್ರತಿ ವರ್ಷ. 2022-23ನೇ ಸಾಲಿನಲ್ಲಿ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ ರೂ. 5000 ಪ್ರತಿ ವರ್ಷ.
* ಡಿಪ್ಲೊಮಾ (3 ವರ್ಷಗಳು). ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತ 880 ರೂ. ಪ್ರತಿ ವರ್ಷ. 2022-23ನೇ ಸಾಲಿನಲ್ಲಿ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ ರೂ. 5000 ಪ್ರತಿ ವರ್ಷ.
* ಪದವಿ (ಬಿಇ/ ಬಿಎಸ್‌ಸಿ) (4 ವರ್ಷಗಳು). ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತ 900 ರೂ. ಪ್ರತಿ ಸೆಮಿಸ್ಟರ್‌ಗೆ ವರ್ಷ. 2022-23ನೇ ಸಾಲಿನಲ್ಲಿ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ ರೂ. 5000 ಪ್ರತಿ ವರ್ಷ.
* ವೈದ್ಯಕೀಯ ಪದವಿಗಳು. 4 2/1 ವರ್ಷ. ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತ ರೂ. 10,650 4 2/1 ವರ್ಷಗಳ ಪೂರ್ಣ ಅವಧಿಗೆ. 2022-23ನೇ ಸಾಲಿನಲ್ಲಿ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ ರೂ. 7,500 ಪ್ರತಿ ವರ್ಷ. (ರೂ 33,750 ಪೂರ್ಣ ಅವಧಿಗೆ).
* ಸ್ನಾತಕೋತ್ತರ ಪದವಿಗಳು. (2 ವರ್ಷಗಳು). ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತ 3,600 ರೂ. ಪೂರ್ಣ ಅವಧಿಗೆ. 2022-23ನೇ ಸಾಲಿನಲ್ಲಿ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ 7000 ರೂ. ಪ್ರತಿವರ್ಷ. (ರೂ. 14,000 ಪೂರ್ಣ ಅವಧಿ).
* ಸ್ನಾತಕೋತ್ತರ ಪದವಿಗಳು. (3 ವರ್ಷಗಳು). ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತ ರೂ. 5,400 ಪೂರ್ಣ ಅವಧಿಗೆ. 2022-23ನೇ ಸಾಲಿನಲ್ಲಿ ಪರಿಷ್ಕೃತ ವಿದ್ಯಾರ್ಥಿ ವೇತನ ಮೊತ್ತ ರೂ. 7000 ಪ್ರತಿ ವರ್ಷ (ರೂ. 21,000 ಪೂರ್ಣ ಅವಧಿ).
* ವಿದ್ಯಾರ್ಹತೆ ಪಿಯುಸಿ. ವಿದ್ಯಾರ್ಥಿ ವೇತನ ದರ 4 ಸಾವಿರ ಪ್ರತಿ ವರ್ಷ. ಪದವಿ ಬಿಎ/ಬಿಕಾಂ 5 ಸಾವಿರ ಪ್ರತಿ ವರ್ಷ. ಪಿಹೆಚ್‌ಡಿ 25,000 ಪೂರ್ಣ ಅವಧಿ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ಪದವಿ 25,000 ಪೂರ್ಣ ಅವಧಿ.
ವಿದ್ಯಾ ಚೇತನ ಯೋಜನೆಯಲ್ಲಿ ಸಂಪೂರ್ಣ ಪಾರದರ್ಶಕತೆ, ತ್ವರಿತತೆ ಹಾಗೂ ನಿಖರತೆಯ ಉದ್ದೇಶದಿಂದ ಗಣಕೀರಣಗೊಳಿಸಿ vn.ksrtc.in ಪೋರ್ಟ್‌ಲ್‌ನಲ್ಲಿ ಆನ್‌ಲೈನ್ ಮೂಲಕ ದಿನಾಂಕ 1/8/2023 ರಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ನೌಕರರು ಸೌಲಭ್ಯದ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications