ಕರ್ಫ್ಯೂ ಬಳಿಕ ಬಸ್ ಸಂಚಾರ ಆರಂಭ; 82,127 ಜನರ ಪ್ರಯಾಣ

ಬೆಂಗಳೂರು, ಮೇ 25 : ಭಾನುವಾರ ಕರ್ಫ್ಯೂ ಇದ್ದ ಕಾರಣ ಸರ್ಕಾರಿ ಬಸ್ ಸಂಚಾರ ಸ್ಥಗಿತವಾಗಿತ್ತು. ಸೋಮವಾರ ಪುನಃ ಬಸ್ ಸಂಚಾರ ನಡೆಸಿದ್ದು, 82,127 ಜನರು ಪ್ರಯಾಣಿಸಿದ್ದಾರೆ.

Recommended Video

      ಹೊರಜಿಲ್ಲೆಗಳಿಗೆ ಹೋಗೋಕೆ ಪಾಸ್ ಅವಶ್ಯಕತೆ ಇದೆಯೇ ? | KSRTC | Oneindia Kannada

      ಕೆಎಸ್ಆರ್‌ಟಿಸಿ ಈ ಕುರಿತು ಮಾಹಿತಿ ನೀಡಿದೆ. ಮೇ 19 ರಿಂದ 25ರ ತನಕ ಒಟ್ಟು 15,238 ಬಸ್‌ಗಳು ಸಂಚಾರ ನಡೆಸಿದ್ದು, 4,61,449 ಜನರು ಸಂಚಾರವನ್ನು ನಡೆಸಿದ್ದಾರೆ.

      ಸೋಮವಾರ 300 ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿತ್ತು. 2826 ಬಸ್‌ಗಳು ಸಂಚಾರ ನಡೆಸಿವೆ. ಬೆಂಗಳೂರು ನಗರದಿಂದ 617 ಬಸ್ ಸಂಚಾರ ನಡೆಸಿದ್ದು, 10,980 ಜನರು ಪ್ರಯಾಣ ಬೆಳೆಸಿದ್ದಾರೆ.

      KSRTC Run 2826 Bus On May 25 After The One Day Curfew

      ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಲು ಅವಕಾಶವನ್ನು ನೀಡಲಾಗಿದೆ. ಸೋಮವಾರ 8190 ಜನರು ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಮೇ 26ರಂದು ಸಂಚಾರ ನಡೆಸಲು 4002 ಜನರು ಟಿಕೆಟ್ ಕಾಯ್ದಿರಿಸಿದ್ದಾರೆ.

      ಸೋಮವಾರ ಬೆಂಗಳೂರು ನಗರದಿಂದ ಬಾಲಗಕೋಟೆ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹೊಸಕೋಟೆ, ಕಲಬುರ್ಗಿ, ಕೊಪ್ಪಳ, ಹಾಸನ ಮುಂತಾದ ಜಿಲ್ಲೆಗಳಿಗೆ ಸಂಚಾರ ನಡೆಸಿದ್ದಾರೆ.

      ಬಸ್ ಸಂಚಾರದ ವಿವರ: ಮೇ 19ರಂದು 1606 ಬಸ್, ಮೇ 20 ರಂದು 2633 ಬಸ್, ಮೇ 21ರಂದು 2732 ಬಸ್, ಮೇ 22ರಂದು 2660 ಬಸ್, ಮೇ 23ರಂದು 2781 ಬಸ್ ಮತ್ತು ಮೇ 25ರಂದು 2826 ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+