ತಮಿಳುನಾಡಿಗೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಪುನಃ ಆರಂಭ
ಬೆಂಗಳೂರು, ಜೂ. 03 : ಕೆಎಸ್ಆರ್‌ಟಿಸಿ ತಮಿಳುನಾಡಿಗೆ ಬಸ್ ಸಂಚಾರವನ್ನು ಪುನಃ ಆರಂಭಿಸಿದೆ. ಸೋಮವಾರ ರಾತ್ರಿಯಿಂದ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿಗೆ ಸಂಚರಿಸುವ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ದೋಷಮುಕ್ತರು ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸೋಮವಾರ ತೀರ್ಮಾನ ಕೈಗೊಂಡಿತ್ತು. [ತಮಿಳುನಾಡಿಗೆ ಬಸ್ ಸಂಚಾರ ಸ್ಥಗಿತ]

ಈ ನಿರ್ಧಾರಕ್ಕೆ ತಮಿಳುನಾಡಿನಲ್ಲಿ ಆಕ್ರೋಶ ಉಂಟಾಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಬಹುದೆಂದು ಸೋಮವಾರ ರಾತ್ರಿ ಮತ್ತು ಮಂಗಳವಾರ ತಮಿಳುನಾಡಿಗೆ ತೆರಳಬೇಕಿದ್ದ ಬಸ್ ಸಂಚಾರವನ್ನು ನಿಲ್ಲಿಸಲಾಗಿತ್ತು. [ಜಯಾ ವಿರುದ್ಧ ಮೇಲ್ಮನವಿ ಸಲ್ಲಿಸಲು 7 ಕಾರಣಗಳು]
ಮಂಗಳವಾರ ರಾಜಹಂಸ ಸೇರಿದಂತೆ ಐಷಾರಾಮಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ, ಕೆಲವು ಸಾಮಾನ್ಯ ಬಸ್ಸುಗಳು ಗಡಿಭಾಗವಾದ ಚಾಮರಾಜನಗರ, ಕೊಳ್ಳೆಗಾಲ, ಗುಂಡ್ಲುಪೇಟೆವರೆಗೆ ಮಾತ್ರ ಸಂಚಾರ ನಡೆಸಿ ವಾಪಸ್ ಬರುತ್ತಿದ್ದವು.
ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಶಾಂತಿನಗರದಿಂದ ಪ್ರತಿದಿನ 469 ಬಸ್ಸುಗಳು ತಮಿಳುನಾಡಿಗೆ ಸಂಚರಿಸುತ್ತಿದ್ದವು. ಆದರೆ, ಮಂಗಳವಾರ ಈ ಬಸ್ಸುಗಳು ನಿಲ್ದಾಣದಿಂದ ಹೊರಬಂದಿರಲಿಲ್ಲ.












Click it and Unblock the Notifications