ಕೊಡಗು ಪ್ರವಾಸಿಗರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿ
ಬೆಂಗಳೂರು, ನವೆಂಬರ್ 25 : ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೆಎಸ್ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಕೊಡಗಿನ ಎರಡು ಪ್ರದೇಶಗಳಿಗೆ ಹೊಸ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಬೆಂಗಳೂರು-ಮಡಿಕೇರಿ, ಬೆಂಗಳೂರು-ವಿರಾಜಪೇಟೆ ನಡುವೆ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದೆ. ಪ್ರವಾಸಿಗರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಬೆಂಗಳೂರು-ಮಡಿಕೇರಿ, ಬೆಂಗಳೂರು-ವಿರಾಜಪೇಟೆಗೆ ಸಂಚಾರ ನಡೆಸುವ ಬಸ್‌ಗಳ ವೇಳಾಪಟ್ಟಿಯನ್ನು ಕೆಎಸ್ಆರ್ಅಂತಿಮಗೊಳಿಸಿ ಬಿಡುಗಡೆ ಮಾಡಿದೆ. ಮಡಿಕೇರಿಗೆ ಹೋಗುವ ಬಸ್ ಬೆಳಗ್ಗೆ, ವಿರಾಜಪೇಟೆಗೆ ಹೋಗುವ ಬಸ್ ಮಧ್ಯಾಹ್ನ ಬೆಂಗಳೂರಿನಿಂದ ಹೊರಡಲಿದೆ.
ನೂತನ ಬಸ್‌ಗಳ ವೇಳಾಪಟ್ಟಿ
* ಬೆಂಗಳೂರು-ಮಡಿಕೇರಿ ಬಸ್ ಬೆಂಗಳೂರಿನಿಂದ ಬೆಳಗ್ಗೆ 5.30ಕ್ಕೆ ಹೊರಡಲಿದ್ದು, ಮಡಿಕೇರಿಗೆ 12ಗಂಟೆಗೆ ತಲುಪಲಿದೆ. ಮಡಿಕೇರಿ-ಬೆಂಗಳೂರು ಬಸ್ ಮಡಿಕೇರಿಯಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದ್ದು, ಬೆಂಗಳೂರಿಗೆ 8.30ಕ್ಕೆ ತಲುಪಲಿದೆ.
* ಬೆಂಗಳೂರು-ವಿರಾಜಪೇಟೆ ಬಸ್ ಬೆಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದೆ, ವಿರಾಜಪೇಟೆಗೆ 9.45ಕ್ಕೆ ತಲುಪಲಿದೆ. ವಿರಾಜಪೇಟೆ-ಬೆಂಗಳೂರು ಬಸ್ 8.30ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಬೆಂಗಳೂರಿಗೆ 1.20ಕ್ಕೆ ಬಂದು ತಲುಪಲಿದೆ.












Click it and Unblock the Notifications