KSRTC: ವೇಗದೂತ ಕಾರ್ಯಾಚರಣೆಗೆ ಪ್ರೋಟೋ ಟೈಪ್ ಬಸ್ ಪರಿಚಯ

ಬೆಂಗಳೂರು, ಆಗಸ್ಟ್ 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯಾಪ್ತಿಯಲ್ಲಿ ವೇಗದೂತ ಕಾರ್ಯಾಚರಣೆಗೆ ರಾಜ್ಯ ಸಾರಿಗೆ ಇಲಾಖೆ ವತಿಯಿಂದ 'ಪಾಯಿಂಟ್ ಟು ಪಾಯಿಂಟ್' ನಿಯೋಜಿಸಿದೆ. ಈ 'ಪ್ರೋಟೋ ಟೈಪ್' ವಾಹನವನ್ನು (ಬಸ್‌) ಕೆ.ಎಂ.ಎಸ್. ಕೋಚ್ ಬಿಲ್ಡರ್ಸ ಕಂಪನಿ ವಿನೂತನವಾಗಿ ವಿನ್ಯಾಸಗೊಳಿಸಿದ್ದು, ಈ ವಾಹನವನ್ನು ಸೋಮವಾರಿ ಸರಿಗೆ ಸಚಿವರು ಪರಿಶೀಲಿಸಿದರು.

ಈ ವೇಳೆ ಮಾನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಪರಿಶೀಲಿಸಲಾದ 'ಪ್ರೋಟೋ ಟೈಪ್' ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದೇವೆ. ಮುಂಬರುವ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸವನ್ನು ಹೊಂದಲಿವೆ ಎಂದರು.

KSRTC Introduced Prototype Bus Provided For Point To Point And Express Operation

ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ವಾಹನಗಳನ್ನು ಕಾರ್ಯಾಚರಣೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳನ್ನು ತರಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಹೊಸ ಬಸ್ಸುಗಳು ಬರಲಿದೆ. ಎಲ್ಲ ಹೊಸ ವಾಹನಗಳು ಈ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿಗಳಾದ ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್, ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

KSRTC Introduced Prototype Bus Provided For Point To Point And Express Operation

'ಪಾಯಿಂಟ್ ಟು ಪಾಯಿಂಟ್'- 'ಪ್ರೋಟೋ ಟೈಪ್ ಬಸ್' ವಿಶೇಷತೆ

* ವಾಹನದ ಎತ್ತರ 3420 ಮಿ.ಮಿ.

* ಆಸನಗಳ ಸಂಖ್ಯೆ 52.

* ಪ್ರಯಾಣಿಕರ ಆಸನ

* ಎಲ್ಲಾ ಜಿಲ್ಲಾ‌ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ‌ ಕಲ್ಪಿಸಲಿದೆ.

* ವಾಹನದ ಮುಂದಿನ/ ಹಿಂದಿನ ಗಾಜು ವಿಶಾಲವಾಗಿರುತ್ತದೆ.

* ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿವೆ.

* ಕಿಟಕಿ ಗಾಜು ದೊಡ್ಡದಾದ ಟಿಂಟೆಡ್ ಗಾಜುಗಳು ಅಳವಡಿಸಲಾಗಿದೆ.

* ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ ಹೊಂದಿದೆ.

* ಒಳಾಂಗಣದ ದೀಪ ಸತತವಾದ ಎಲ್ಇಡಿ ದೀಪ ಅಳವಡಿಸಲಾಗಿದೆ.

* ಹಿಂದಿನ/ಮುಂದಿನ ಮಾರ್ಗ ಎಲ್ಇಡಿ ಮಾರ್ಗ ಫಲಕ ಅಳವಡಿಕೆ.

* ಬ್ಯಾನೆಟ್ ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್.

* ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸ್ರ್ರ್ ಮತ್ತು ತುರ್ತು ಬಟನ್ ವ್ಯವಸ್ಥೆ.

* ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್ ಇದೆ.

* ಲಗ್ಗೇಜ್ ಕ್ಯಾರಿಯರ್ ವಿಶಾಲವಾಗಿದ್ದು, ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು

ಸಾಗಿಸಬಹುದಾಗಿದೆ.

* ಆಸನಗಳ ಮಧ್ಯೆ (leg space) ಸ್ಥಳಾವಕಾಶ ಹೆಚ್ಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+