ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದರ ಕಡಿತ : ಯಾವ ನಗರಗಳಿಗೆ ಎಷ್ಟು ರೂ.

|
Google Oneindia Kannada News

ಬೆಂಗಳೂರು, ಜ. 8 : ಜನರ ಒತ್ತಾಯಕ್ಕೆ ಮಣಿದ ಕರ್ನಾಟಕ ಸರ್ಕಾರ ಬಸ್ ಪ್ರಯಾಣ ದರವನ್ನು ನೆಪಮಾತ್ರಕ್ಕೆ ಕಡಿಮೆ ಮಾಡಿದೆ. ಪ್ರಯಾಣಿಕ, ವಿದ್ಯಾರ್ಥಿ ಬಸ್ ಪಾಸ್ ಮತ್ತು ಎಸಿ ಹಾಗೂ ವೋಲ್ವೋ ಬಸ್ ದರದಲ್ಲಿ ಯಾವುದೇ ಕಡಿತ ಮಾಡದೆ ಜಾಣ ನಡೆ ಅನುಸರಿಸಿದೆ.

ಡೀಸೆಲ್‌ ದರ ಇಳಿಕೆ­ಯಾಗಿದ್ದರೂ ರಾಜ್ಯದ 4 ರಸ್ತೆ ಸಾರಿಗೆ ನಿಗಮಗಳು ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಒಟ್ಟು ರೂ 161.76 ಕೋಟಿ ನಷ್ಟ ಅನುಭವಿಸಲಿವೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿರುವ ರಾಮಲಿಂಗಾ ರೆಡ್ಡಿ ಅವರು, ಮಾರ್ಚ್ ನಂತರ ಮಾಸಿಕ ಮತ್ತು ವಿದ್ಯಾರ್ಥಿ ಬಸ್ ಪಾಸ್ ದರ ಇಳಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.

KSRTC

ಬುಧವಾರ ಪ್ರಕಟಿಸಿದ ಪರಿಷ್ಕೃತ ಪ್ರಯಾಣ ದರ ಜ.9ರ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ವರ್ಗ, ನಗರ/ಉಪನಗರ ಸಾರಿಗೆ ಹಾಗೂ ವೇಗದೂತ ಬಸ್ ಪ್ರಯಾಣ ದರ ನಾನಾ ಹಂತಗಳಲ್ಲಿ 1ರಿಂದ 11 ರೂ.ವರೆಗೆ ಇಳಿಕೆಯಾಗಲಿದೆ. [ಕರ್ನಾಟಕ ಸರ್ಕಾರದಿಂದ ಬಸ್ ಪ್ರಯಾಣ ದರ ಇಳಿಕೆ]

ಎಸಿ ಹಾಗೂ ವೋಲ್ವೋ ಬಸ್ ದರವನ್ನು ನಾವು ಹೆಚ್ಚಿಸಿರಲಿಲ್ಲ. ಆದ್ದರಿಂದ ಆ ಬಸ್ಸುಗಳ ಪ್ರಯಾಣದರದಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ ಸಾಮಾನ್ಯ ಬಸ್‌ ಪ್ರಯಾಣ ದರ
ಬೆಂಗಳೂರು-ಮೈಸೂರು (132) - 2 ರೂ.ಇಳಿಕೆ
ಬೆಂಗಳೂರು-ದಾವಣಗೆರೆ (249) - 4 ರೂ.
ಬೆಂಗಳೂರು- ಶಿವಮೊಗ್ಗ (267) - 4 ರೂ.
ಬೆಂಗಳೂರು-ಮಂಗಳೂರು (332) - 5 ರೂ.
ಬೆಂಗಳೂರು-ಹುಬ್ಬಳ್ಳಿ (385) - 5 ರೂ.
ಬೆಂಗಳೂರು-ಬೆಳಗಾವಿ (474) - 7 ರೂ.
ಬೆಂಗಳೂರು-ಕಲಬುರಗಿ (592) - 7 ರೂ.

English summary
Fares of Karnataka State Road Transport Corporation (KSRTC) have been reduced on Wednesday. New bus fares, which will be implemented from January 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X