ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಜನವರಿ 22 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ವಿಮಾನ ನಿಲ್ದಾಣದಿಂದ ಸಂಚಾರ ನಡೆಸುವ ಫ್ಲೈ ಬಸ್ ಸೇವೆಯ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಜನವರಿ 20 ರಿಂದಲೇ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಕಡಿತಗೊಳಿಸಲಾಗಿದೆ ಎಂದು ಕೆಎಸ್ಆರ್ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲು 800 ರೂ. ಇದ್ದ ಪ್ರಯಾಣದರವನ್ನು 750 ರೂ.ಗಳಿಗೆ ಕಡಿತಗೊಳಿಸಲಾಗಿದೆ.

ಭಾರೀ ಬೇಡಿಕೆ, ಮೈಸೂರಿಗೆ ಮತ್ತೊಂದು ಫ್ಲೈ ಬಸ್ಭಾರೀ ಬೇಡಿಕೆ, ಮೈಸೂರಿಗೆ ಮತ್ತೊಂದು ಫ್ಲೈ ಬಸ್

ಕೆಎಸ್ಆರ್‌ಟಿಸಿ ಬೆಂಗಳೂರು ಕೇಂದ್ರಿಯ ವಿಭಾಗದಿಂದ ಸಂಚಾರ ನಡೆಸುವ ಫ್ಲೈ ಬಸ್ ಸೇವೆಗಳ ದರಗಳನ್ನು ಕಡಿತಗೊಳಿಸಲಾಗಿದೆ. ಫ್ಲೈ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಚಾರ ನಡೆಸುತ್ತವೆ.

ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

ಲೋಡ್ ಫ್ಯಾಕ್ಟರ್ ಉತ್ತಮಗೊಳಿಸಲು ಜನವರಿ 20ರಿಂದ ಜಾರಿಗೆ ಬರುವಂತೆ ಪ್ರಯಾಣದವರನ್ನು ಕಡಿತಗೊಳಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಎರಡು ಫ್ಲೈ ಬಸ್‌ಗಳು ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುತ್ತಿವೆ.

ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ

2013ರಲ್ಲಿ ಆರಂಭವಾದ ಸೇವೆ

2013ರಲ್ಲಿ ಆರಂಭವಾದ ಸೇವೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2013ರಲ್ಲಿ ಬೆಂಗಳೂರು-ಮೈಸೂರು ನಡುವೆ ಫ್ಲೈ ಬಸ್ ಸೇವೆಯನ್ನು ಆರಂಭಿಸಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಂಪರ್ಕ ಕಲ್ಪಿಸಲು ಈ ಬಸ್ ಸೇವೆಯನ್ನು ಆರಂಭಿಸಲಾಗಿತ್ತು.

ಮತ್ತೊಂದು ಬಸ್ ಸೇವೆ ಆರಂಭ

ಮತ್ತೊಂದು ಬಸ್ ಸೇವೆ ಆರಂಭ

ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದ್ದರಿಂದ, 2018ರಿಂದ ಮತ್ತೊಂದು ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಬೆಂಗಳೂರು-ಮೈಸೂರು ನಡುವೆ ದಿನಕ್ಕೆ ಎರಡು ಬಾರಿ ಫ್ಲೈ ಬಸ್ ಸಂಚಾರ ನಡೆಸುತ್ತಿವೆ.

ನಗರಕ್ಕೆ ಪ್ರವೇಶವಿಲ್ಲ

ನಗರಕ್ಕೆ ಪ್ರವೇಶವಿಲ್ಲ

ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಫ್ಲೈ ಬಸ್ ಸೇವೆಯನ್ನು ಕೆಎಸ್ಆರ್‌ಟಿಸಿ ಆರಂಭಿಸಿತ್ತು. ವಿಮಾನ ನಿಲ್ದಾಣದಿಂದ ರಿಂಗ್ ರಸ್ತೆ ಮೂಲಕ ಬಸ್ ಮೈಸೂರಿಗೆ ಸಂಚಾರ ನಡೆಸುತ್ತಿತ್ತು. ಐಷಾರಾಮಿ, ಹವಾನಿಯಂತ್ರಿತ ಬಸ್‌ನಲ್ಲಿ ಜನರು ಸಂಚಾರ ನಡೆಸಬಹುದಿತ್ತು.

ವಿವಿಧ ಮಾರ್ಗದಲ್ಲಿ ಫ್ಲೈ ಬಸ್ ಸೇವೆ

ವಿವಿಧ ಮಾರ್ಗದಲ್ಲಿ ಫ್ಲೈ ಬಸ್ ಸೇವೆ

ಬೆಂಗಳೂರು-ಮೈಸೂರು ಫ್ಲೈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಬಳಿಕ ಕೆಎಸ್ಆರ್‌ಟಿಸಿ ವಿವಿಧ ನಗರಗಳಿಗೆ ಫ್ಲೈ ಬಸ್ ಸೇವೆ ಆರಂಭಿಸಿತ್ತು. ಮಂಗಳೂರು, ಮಣಿಪಾಲ, ಕೊಡಗು ಸೇರಿದಂತೆ ಒಟ್ಟು 7 ಮಾರ್ಗಗಳಲ್ಲಿ ಫ್ಲೈ ಬಸ್ ಸಂಚಾರ ನಡೆಸುತ್ತಿವೆ.

English summary
Karnataka State Road Transport Corporation (KSRTC) cut the fare of fly bus service which run between Kempegowda International Airport Ltd (KIAL) and Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X