ಮಂಡ್ಯ: ಕೆಎಸ್ಸಾರ್ಟಿಸಿ ಬಸ್ ಅಪಘಾತ, ಚಾಲಕನ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜನವರಿ,30: ಮದ್ದೂರಿನ ಶಿಂಷಾ ನದಿ ಬಳಿ ಗುರುವಾರ ಸಂಭವಿಸಿದ ಕೆಎಸ್ಆರ್ ಟಿಸಿ ಬಸ್ ಅಪಘಾತದ ಸಂಬಂಧ ಬಸ್ಸಿನ ಚಾಲಕನನ್ನು ಮದ್ದೂರು ಠಾಣೆ ಪೋಲಿಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಬಸ್ಸಿನ ಅಪಘಾತದಿಂದ ಪಾರಾದ ಭಾಗ್ಯಮ್ಮ ಎಂಬ ಮಹಿಳೆಯು ಮದ್ದೂರು ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಚಾಲಕ ವಿರೂಪಾಕ್ಷನನ್ನು ಬಂಧಿಸಲಾಗಿದೆ. ವಾಹನ ಚಲಾಯಿಸುವಾಗ ಪ್ರಯಾಣಿಕರ ಸುರಕ್ಷತೆಗೆ ಗಮನಕೊಡದೆ ನೀರು ಕುಡಿಯುತ್ತಿದ್ದದ್ದೇ ಘಟನೆಗೆ ಕಾರಣ ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ.[ಮಂಡ್ಯ: ಚಾಲಕನ ನಿರ್ಲಕ್ಷ್ಯದಿಂದ ಕೆಎಸ್ಸಾರ್ಟಿಸಿ ಬಸ್ ನದಿಗೆ ಬಿತ್ತೇ?]

Mandya

ಟೈರ್ ಸ್ಫೋಟ, ಚಾಲಕನ ಅಜಾಗರೂಕತೆ, ಸ್ಟೇರಿಂಗ್ ರಾಡ್ ನಲ್ಲಿ ಇದ್ದ ತಾಂತ್ರಿಕ ದೋಷ ಮೊದಲಾದವು ಅಪಘಾತಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಚಾಲಕ ವಿರೂಪಾಕ್ಷನ ವಿರುದ್ಧ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 279, 304ಎ ಮತ್ತು 337 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

ವಿರೂಪಾಕ್ಷ ಹಾಸನ ಜಿಲ್ಲೆಯ ರಾಮನಾಥಪುರ ಕೆಎಸ್ಆರ್ ಟಿಸಿ ಘಟಕದಲ್ಲಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅಪಘಾತಕ್ಕೀಡಾದ ಬಸ್ (ಕೆಎ-14 ಎಫ್ 1944) 6.5 ಲಕ್ಷ ಕಿ.ಮೀ. ಓಡಿತ್ತು. ಟೈರ್ ಗಳು ಸಹ ಸವೆದಿದ್ದವು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.[ಕೆಎಸ್ಆರ್‌ಟಿಸಿ ನೇಮಕಾತಿ : ಅರ್ಜಿ ಸಲ್ಲಿಸಲು 5 ದಿನ ಬಾಕಿ]

Mandya

ಘಟನೆ ಯಾವಾಗ ನಡೆದಿದ್ದು?

ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಶಿಂಷಾ ನದಿಗೆ ಜನವರಿ 28ರ ಗುರುವಾರ ಅಪಘಾತಕ್ಕೆ ಈಡಾಗಿತ್ತು.[ಕೆಎಸ್ಆರ್ ಟಿಸಿ ಬಸ್ ಗಳ ಅಪಘಾತಕ್ಕೆ ಪ್ರೇತಬಾಧೆ ಕಾರಣ?]

ಬಸ್ಸಿನಲ್ಲಿ ಸುಮಾರು ಮಂದಿ ಪ್ರಯಾಣಿಕರಿದ್ದು, ಅದರಲ್ಲಿ ರಾಮಕೃಷ್ಣ ಎಂಬಾತ ಮೃತಪಟ್ಟಿದ್ದು, ಉಳಿದ 38 ಮಂದಿ ಮಂಡಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಮಕೃಷ್ಣ ಮದ್ದೂರು ಗ್ರಾಮದ ಹೆಬ್ಬೆರಳು ಗ್ರಾಮದವರೆಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KSRTC bus accident, Maddur police arrested by a driver Virupaksha in Mandya. Karnataka State Road Transport Corporation (KSRTC) bus fell into the Shimsha river in Maddur, Mandya district on Thursday, January 28 evening. Bus was going towards Mysuru from Bengaluru.
Please Wait while comments are loading...