KRS Dam: ಉತ್ತಮ ಮಳೆಗೆ ಕೆಆರ್‌ಎಸ್ ಡ್ಯಾಂ ಒಳಹರಿವು ಹೆಚ್ಚಳ, ಅಪ್ಡೇಟ್ಸ್ ಇಲ್ಲಿದೆ

ಬೆಂಗಳೂರು, ಮೇ 29: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಜೀವನದಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣ ರಾಜ ಸಾಗರ ಅಣೆಕಟ್ಟಿನಲ್ಲಿ (KRS Dam) ಒಳಹರಿವು ಹೆಚ್ಚಾಗಿದೆ. ಹಳೇ ಮೈಸೂರು ಭಾಗದ ವಿವಿಧೆಡೆ ಉತ್ತಮ ಮಳೆ ಆಗುತ್ತಿದೆ. ಕೊಡಗು, ಮಡಿಕೇರಿ, ತಲಕಾವೇರಿ ವ್ಯಾಪ್ತಿಯಲ್ಲಿ ಜೋರು ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ, KRS ಜಲಾಶಯದಲ್ಲಿ ನೀರಿನ ಸಂಗ್ರಹ ಏರಿಕೆ ಆಗಿದೆ.

ಮೈಸೂರಿಗೆ ಹತ್ತಿರವಿರುವ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಗ್ರಾಮದಲ್ಲಿ 1931ರಲ್ಲಿ ನಿರ್ಮಿಸಿದ ಈ ಅಣೆಕಟ್ಟು ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿಗೆ, ನಾಲ್ಕಾರು ಜಿಲ್ಲೆಗಳ ಜನರಿಗೆ ಕುಡಿಯಲು ನೀರೊದಗಿಸುತ್ತಿದೆ. ಕಳೆದ ಬೇಸಿಗೆ ವೇಳೆಯು ಉತ್ತಮ ನೀರಿನ ಸಾಮರ್ಥ್ಯ ಹೊಂದಿದ್ದರಿಂದಲೇ ಈ ಬಾರಿ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕುಡಿಯಲು ನೀರಿಗೆ ಹಾಹಾಕಾರ ಎದುರಾಗಲಿಲ್ಲ.

KRS Dam 9 Feet Storage in Past 3 Days Due Monsoon Rainfall

ಬೇಸಿಗೆ ಕಳೆದು ಮಳೆಗಾಲ ಎದುರಾಗಿದ್ದು, ಮುಂಗಾರು ಉತ್ತಮ ಮಳೆ ಸುರಿಸುತ್ತಿದೆ. KRS ಜಲಾಶಯ ಹಿಂಭಾಗದ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಮೇ 29ರ ಬೆಳಗ್ಗೆ 08 ಗಂಟೆವರೆಗಿನ ಮಾಹಿತಿ ಪ್ರಕಾರ, KRS ಡ್ಯಾಂ ನಲ್ಲಿ 98 ಅಡಿವರೆಗೆ ನೀರಿನ ಸಂಗ್ರಹವಾಗಿದೆ. ಒಟ್ಟು 124.80 ಅಡಿ ಜಲಾಶಯವು ಈ ಮುಂಗಾರು ಋತುವಿನಲ್ಲಿ ಭರ್ತಿಯಾಗಲಿದೆ.

ಒಟ್ಟು 49.452 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 21. 282 ಟಿಎಂಸಿ ನೀರು ಸಂಗ್ರಹವಾಗಿದೆ. ಇತ್ತ ಕಾಲುವೆಗಳಿಗೂ ನೀರನ್ನು (50 ಕ್ಯೂಸೆಕ್ಸ್) ಹೊರ ಬಿಡಲಾಗುತ್ತದೆ. ಜಲಾಶದ ಒಳಹರಿವು 22,788.ಕ್ಯೂಸೆಕ್ಸ್ ನಷ್ಟು ಹೆಚ್ಚಾಗಿದೆ. ಹೊರ ಹರಿವು 630 ಕ್ಯೂಸೆಕ್ಸ್ ಇದೆ. ಒಟ್ಟು ನೀರು ಸಂಗ್ರಹಣೆಯಲ್ಲಿ ಶೇಕಡಾ 100ರಲ್ಲಿ ಹಾಲಿ ಶೇಕಡಾ 43ರಷ್ಟು ನೀರಿನ ಸಂಗ್ರಹವಿದೆ.

ಮಳೆ ಮುನ್ಸೂಚನೆ, ಜಲಾಶಯ ಸಂಗ್ರಹ ಹೆಚ್ಚಳ

ಹವಾಮಾನ ಇಲಾಖೆ ಪ್ರಕಾರ, ಮುಂಗಾರು ಮಳೆ ಇನ್ನಷ್ಟು ದಿನಗಳ ಕಾಲ ಹೀಗೆ ಮುಂದುವರಿಯಲಿದೆ. ಕರ್ನಾಟಕದ ಕರಾವಳಿ ಹಾಗೂ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಂಭವವಿದೆ. ಮೈಸೂರು, ಕೊಡಗು, ಮಡಿಕೇರಿ, ಸೋಮವಾರಪೇಟೆ, ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ. ನಾವಿನ್ನು ಮುಂಗಾರು ಮಳೆ ಆರಂಭದಲ್ಲಿದ್ದೇವೆ. ಈ ಋತುವಿನ ಮಧ್ಯಭಾಗದ ಹೊತ್ತಿಗೆ ಕೆಆರ್‌ಎಸ್ ಡ್ಯಾಂ ಜೊತೆಗೆ ಹಾರಂಗಿ, ಕಬಿನಿ, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಉತ್ತಮ ನೀರಿನ ಸಂಗ್ರಹ ಕಾಣಬಹುದಾಗಿದೆ.

ಈ ಮೇಲಿನ ಪ್ರಮುಖ ಡ್ಯಾಂಗಳ ಪೈಕಿ ಜೂನ್ ಎರಡನೇ ವಾರದಲ್ಲೇ ಕೃಷ್ಣ ರಾಜ ಸಾಗರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ನೈಋತ್ಯ ಮುಂಗಾರು ಮಳೆ ಮುಂದುವರಿದಿದೆ. ಹೀಗೆ ಜೋರು ಮಳೆಯು ಜಲಾನಯಶನ ಪ್ರದೇಶಗಳಲ್ಲಿ ಸುರಿದರೆ ಜಲಾಶಯದ ಒಳಹರಿವು ತೀವ್ರ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+