ವಿದ್ಯುತ್ ದರ ಎರಡನೇ ಬಾರಿ ಏರಿಕೆ, ಸಾಲಮನ್ನಾ ಹೊರೆ ಸರಿದೂಗಿಸಲು ಕ್ರಮ?
Recommended Video

ಬೆಂಗಳೂರು, ಅಕ್ಟೋಬರ್ 01: ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಹೆಚ್ಚಳವಾಗಿದೆ. ಈ ಬಾರಿ ಪ್ರತಿ ಯುನಿಟ್‌ಗೆ 14 ಪೈಸೆ ಹೆಚ್ಚಿಸಲಾಗಿದೆ. ಇದೇ ವರ್ಷದ ಮೇ ತಿಂಗಳಿನಲ್ಲಿ 25 ರಿಂದ 38 ಪೈಸೆ ಪ್ರತಿ ಯುನಿಟ್‌ಗೆ ಏರಿಸಲಾಗಿತ್ತು.
ಪರಿಷ್ಕೃತ ದರವು ಅಕ್ಟೋಬರ್ 01 ರಿಂದಲೇ ಜಾರಿಗೆ ಬರುವಂತೆ ಇಂಧನ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ಸಂಗ್ರಹ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಎಲ್ಲ ಪ್ರಸರಣ ನಿಗಮ ಮಂಡಳಿಗಳಿಗೆ ಆದೇಶ ಹೊರಡಿಸಿದೆ. ಸಾಲಮನ್ನಾದ ಹೊರೆಯನ್ನು ತಗ್ಗಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಕಲ್ಲಿದ್ದಲು ಕೊರತೆ ಇದೆ. ಪ್ರಕೃತಿ ವಿಕೋಕಪದ ಕಾರಣದಿಂದ ಹಲವೆಡೆ ಸಾಗಾಟ ತೊಂದರೆಗಳು ಆಗಿವೆ. ವಿದ್ಯುತ್ ಉತ್ಪಾದನೆಗೂ ಪೆಟ್ಟು ಬಿದ್ದಿದೆ. ಹಾಗಾಗಿ ವಿದ್ಯುತ್ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕಳೆದ ತ್ರೈಮಾಸಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 94 ಕೋಟಿ ಹೆಚ್ಚುವರಿ ಹೊರೆ ಇಲಾಖೆಯ ಮೇಲೆ ಬಿದ್ದಿದೆ, ಅದನ್ನು ಗ್ರಾಹಕರ ಮೇಲೆ ವರ್ಗಾಯಿಸಲೇ ಬೇಕಾಗಿದೆ ಹಾಗಾಗಿ ಬೆಲೆ ಏರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಪರಿಷ್ಕೃತ ದರವು ಡಿಸೆಂಬರ್ 31ರ ವರೆಗೆ ಇರಲಿದೆ. ಆ ನಂತರ ಮತ್ತೆ ದರ ಪರೀಷ್ಕರಣೆ ನಡೆಯಲಿದೆ. ಆಗ ವಿದ್ಯುತ್ ಬೆಲೆ ಇಳಿಯಬಹುದು ಅಥವಾ ಏರಬಹುದು.












Click it and Unblock the Notifications