KPSC Recruitment: KAS ಮೇನ್ಸ್ ಪರೀಕ್ಷೆಗಳ ವೇಳಾಪಟ್ಟಿ ರಿಲೀಸ್: ದಿನಾಂಕ ಸಮಯ ತಿಳಿಯಿರಿ
ಬೆಂಗಳೂರು, ಏಪ್ರಿಲ್ 18: ರಾಜ್ಯಾದ್ಯಂತ ಪ್ರಶ್ನೆ ಪತ್ರಿಕೆಗಳಲ್ಲಿನ ಲೋಪದೋಷ ವಿಚಾರವಾಗಿ ಸದ್ದು ಮಾಡಿದ್ದ 'ಕರ್ನಾಟಕ ಲೋಕಸೇವಾ ಆಯೋಗದ (KPSC)' 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದ ಮುಖ್ಯ ಪರೀಕ್ಷೆ ಮೇ ತಿಂಗಳಲ್ಲಿ ನಡೆಯಲಿದೆ ಎಂಬುದು ಆಯೋಗವು ಗುರುವಾರ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಪೂರ್ವ ಭಾವಿ ಪರೀಕ್ಷೆ ಬರೆದಿದ್ದ 'ಕರ್ನಾಟಕ ಲೋಕಸೇವಾ ಆಯೋಗದ (KPSC)' ಅಭ್ಯರ್ಥಿಗಳು ಮೇ 3, 5, 7 ಹಾಗೂ 09 ರಂದು ಮುಖ್ಯ ಪರೀಕ್ಷೆ (ಮೇನ್ಸ್) ಬರೆಯಲಿದ್ದಾರೆ. ಈ ಅಭ್ಯರ್ಥಿಗಳು ಈಗಾಗಲೇ ಕೆಪಿಎಸ್ಸಿ ಲೋಪದೋಷದಿಂದ ಎರಡು ಭಾರಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದವರಾಗಿದ್ದಾರೆ. ಆ ಪರೀಕ್ಷೆ 2024ರ ಡಿಸೆಂಬರ್ ಅಂತ್ಯಕ್ಕೆ ಜರುಗಿತ್ತು.

KPSC ಮುಖ್ಯ ಪರೀಕ್ಷೆ ವೇಳಾಪಟ್ಟಿ ನೋಡುವುದಾದರೆ, ಅರ್ಹತಾ ಪರೀಕ್ಷೆಯ ಕನ್ನಡ ಮೇ 3 ರಂದು ಬೆಳಗ್ಗೆ 10 ಗಂಟೆಯಿಂದ ರಿಂದ 12 ಗಂಟೆವರೆಗೆ ನಡೆಯಲಿದೆ. ಇಂಗ್ಲಿಷ್ ಪರೀಕ್ಷೆಯು ಸಹ ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಮುಖ್ಯ ಪರೀಕ್ಷೆಯ ವೇಳಾಪಟ್ಟಿ
ಮೇ 3 ರಂದು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆ ಬೆಳಗ್ಗೆ 10- 12 ಮತ್ತು ಮಧ್ಯಾಹ್ನ 2-4 ಗಂಟೆಯವರೆಗೆ
ಮೇ 5 ರಂದು ಪತ್ರಿಕೆ : 1 (ಪ್ರಬಂಧ) ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ
ಮೇ 7 ಕ್ಕೆ ಪತ್ರಿಕೆ : 2 (ಸಾಮಾನ್ಯ ಅಧ್ಯಯನ) ಬೆಳಗ್ಗೆ 9 ಗಂಟೆಯಿಂದ 12
ಮೇ 7 ರಂದು ಪತ್ರಿಕೆ : 3 (ಸಾಮಾನ್ಯ ಅಧ್ಯಯನ-2) ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ
ಮೇ 9 ಕ್ಕೆ ಪತ್ರಿಕೆ : 4 (ಸಾಮಾನ್ಯ ಅಧ್ಯಯನ-3) ಬೆಳಗ್ಗೆ 9 ಗಂಟೆಯಿಂದ 12
ಮೇ 9 ರಂದು ಪತ್ರಿಕೆ : 5 (ಸಾಮಾನ್ಯ ಅಧ್ಯಯನ-4) ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆಗಳು ಜರುಗಲಿವೆ ಎಂದು ವೇಳಾಪಟ್ಟಿ ತಿಳಿಸಿದೆ.
ಕೆಪಿಎಸ್ ಮುಖ್ಯ ಪರೀಕ್ಷೆ ಬರೆಯುವವರು ಹೆಚ್ಚಿನ ಮಾಹಿತಿಗೆ ನೀವು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ https://kpsc.kar.nic.in/ ಗೆ ಭೇಟಿ ನೀಡಬಹುದಾಗಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications