ಮೋದಿ ವಿರುದ್ಧ ECಗೆ ದೂರು ನೀಡಿದ ಕರ್ನಾಟಕ ಕಾಂಗ್ರೆಸ್

Subscribe to Oneindia Kannada

ಬೆಂಗಳೂರು, ಮಾರ್ಚ್ 21: ಇತ್ತೀಚೆಗೆ ಮುಗಿದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ವಿಲನ್ ರೀತಿ ಚಿತ್ರಿಸಲು ಮೋದಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಐಟಿ ಸೆಲ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಅಧ್ಯಕ್ಷ ಸಿಎಂ ಧನಂಜಯ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.[ಡೈರಿ 2, ಕೇಸು 7; ಇದು ಬಿಜೆಪಿ-ಕಾಂಗ್ರೆಸ್ 'ಡೊನೇಷನ್ ಗೇಟ್' ಹೈಡ್ರಾಮಾ]

KPCC filed a complaint against Narendra Modi in EC

ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಕರ್ನಾಟಕದ ಸಚಿವರೊಬ್ಬರ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದರು. ಜನವರಿ 17ರಂದು ಪಂಜಾಬಿನ ಜಲಂಧರ್ ನಲ್ಲಿ, ಹಾಗೂ ಫೆಬ್ರವರಿ 2 ರಂದು ಮೀರತ್ ನಲ್ಲಿ ಭಾಷಣ ಮಾಡಿದ ಮೋದಿ ಕರ್ನಾಟಕದ ಸಚಿವರೊಬ್ಬರ ಮನೆಯಿಂದ 2000 ರೂ ಮುಖಬೆಲೆ 150 ಕೋಟಿ ರೂಪಾಯಿಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ಶುದ್ದ ಸುಳ್ಳು. ಮುಗ್ಧ ಉತ್ತರ ಪ್ರದೇಶ ಮತ್ತು ಪಂಜಾಬಿಗರ ಮತ ಸೆಳೆಯಲು ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಧನಂಜಯ್ ದೂರಿನಲ್ಲಿ ಹೇಳಿದ್ದಾರೆ.[ಪ್ರಶಾಂತ್ ಕಿಶೋರ್ ಅಲ್ಲೇನಾದ್ರೂ ಕಂಡ್ರೆ ಹೇಳಿ, ಐದು ಲಕ್ಷ ಕೊಡ್ತೀವಿ]

ಕಾಂಗ್ರೆಸ್ ಅಭ್ಯರ್ಥಿಗಳೆಲ್ಲಾ ಕಳಂಕಿತರು ಭ್ರಷ್ಟರು ಎಂದು ಬಿಂಬಿಸಲು ಮೋದಿ ಈ ಹೇಳಿಕೆ ನೀಡಿದ್ದಾರೆ. ಇದು ಜನ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(2) ಹಾಗೂ 123 (4)ರ ಉಲ್ಲಂಘನೆಯಾಗಿದೆ. ಎಂದು ಧನಂಜಯ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಸುಳ್ಳು ಹೇಳಿಕೆಗಾಗಿ ಸಾರ್ವಜನಿಕವಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಈ ಸಂಬಂಧ ಪ್ರತಿಭಟನೆ ನಡೆಸಲಾಗುವುದು ಎಂದು ಧನಂಜಯ್ ಎಚ್ಚರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Pradesh Congress Committee IT cell lodged a complaint against Prime Minister Narendra Modi in Election Commission over his comment in election speech alleged that it was false.
Please Wait while comments are loading...