ಕೊಲ್ಲೂರಲ್ಲಿ ಕೇಮಾರು ಶ್ರೀ ಉಪವಾಸ ಸತ್ಯಾಗ್ರಹ
ಕೊಲ್ಲೂರು, ನ. 3: ಸೌಪರ್ಣಿಕಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸಲು ಕೇಮಾರು ಶ್ರೀ ನೇತೃತ್ವದಲ್ಲಿ ನವೆಂಬರ್ 9 ರಂದು ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಅನೇಕರು ಪಾಲ್ಗೊಂಡರು.
'ದೇವರು ಕ್ಷಮಿಸುತ್ತಾನೆ, ಆದರೆ ಪಕೃತಿ ಕ್ಷಮಿಸುವುದಿಲ್ಲ' ಎಂಬ ಘೋಷ ವಾಕ್ಯದಡಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕೇಮಾರು ಶ್ರೀ, ಜಿಲ್ಲಾಡಳಿತ ಇನ್ನು ಮುಂದಾದರೂ ಈ ಬಗ್ಗೆ ಗಮನ ಹರಿಸಬೇಕಿದೆ. ಪ್ರವಾಸಿಗರ ಮತ್ತು ನಾಗರಿಕರ ಆರೋಗ್ಯ ಕಾಪಾಡುವುದು ಸರ್ಕಾರ ಮತ್ತು ಅಧಿಕಾರಿಗಳ ಹೊಣೆಯಾಗಿದೆ ಎಂದು ಹೇಳಿದರು.[ಸೌಪರ್ಣಿಕಾ ನದಿ ಉಳಿಸಲು ಉಪವಾಸ ಸತ್ಯಾಗ್ರಹ]

ಪುರಾತನ ಐಹಿತ್ಯ ಸಾರುವ ದೇವಾಲಯಗಳು, ನದಿಗಳು ಇಂದು ಮಾನವನ ಆಧುನಿಕತೆ ಎಂಬ ಹುಚ್ಚಿಗೆ ಸಿಕ್ಕಿ ಬಲಿಯಾಗುತ್ತಿವೆ. ಸರ್ಕಾರದ ಮೇಲೆ ಒತ್ತಡ ತರಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದು ಒಂದು ದಿನಕ್ಕೆ ಮುಗಿಯುವ ಹೋರಾಟವಲ್ಲ ಎಂದು ಹೇಳಿದರು.
ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ , ಪರಶುರಾಮ ಸೇನೆ ಕೊಲ್ಲೂರು ಮತ್ತು ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications