ದೇಶದ ಮಹಾನ್ ವ್ಯಕ್ತಿಗಳಿಗೆ ಕಂಟಕ: ಕೋಡಿಮಠ ಶ್ರೀಗಳ ಭಯಾನಕ ಭವಿಷ್ಯ!
ಹಾಸನ: ತಮ್ಮ ಭವಿಷ್ಯವಾಣಿ ಮೂಲಕವೇ ಆಗಾಗ ಸಂಚಲನ ಸೃಷ್ಟಿಸುವ ಕೋಡಿಮಠದ ಶ್ರೀಗಳು ಈಗ ಮತ್ತೆ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಕೋಡಿಮಠ ಶ್ರೀಗಳು ಹೇಳಿರುವ ಆ ಒಂದು ಮಾತು ವೈರಲ್ ಆಗುತ್ತಿದ್ದು, ಎಲ್ಲೆಡೆ ಚರ್ಚೆ ಶುರುವಾಗಿದೆ. ಹಾಗಾದರೆ ಶ್ರೀಗಳು ಹೇಳಿದ್ದು ಏನು? ಅದರ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಅಂದಹಾಗೆ ಕೋಡಿಮಠ ಶ್ರೀಗಳು ಈಗ ನುಡಿದಿರುವ ಭವಿಷ್ಯದ ಪ್ರಕಾರ ದೇಶದ ಮಹಾನ್ ವ್ಯಕ್ತಿಗಳಿಗೆ ಕಂಟಕ ಎದುರಾಗಲಿದೆಯಂತೆ. ದೇಶದಲ್ಲಿ 2024ರ ಯುಗಾದಿ ವೇಳೆಗೆ ಮತ್ತೊಂದು ದುರ್ಘಟನೆ ಸಂಭವಿಸುತ್ತೆ. ದೇಶದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದೆ. ಆಳುವವರು ಎಚ್ಚರ ವಹಿಸಿದರೆ ತಪ್ಪಿಸಬಹುದು ಎಂದು ಕೋಡಿಮಠದ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಇನ್ನೂ ಅನೇಕ ವಿಚಾರ ಹಂಚಿಕೊಂಡಿದ್ದಾರೆ ಶ್ರೀಗಳು, ಆ ಬಗ್ಗೆ ಮಾಹಿತಿ ತಿಳಿಯೋಣ.

ದೇಶದ ಮಹಾನ್ ವ್ಯಕ್ತಿಗಳಿಗೆ ಕಂಟಕ?
ಅಷ್ಟಕ್ಕೂ ಹಾಸನದ ಅರಸೀಕೆರೆ ತಾಲೂಕು ಹಾರನಹಳ್ಳಿಯ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತೆ. ಇದರ ಜತೆ ಜಗತ್ತಿನ ಸಾಮ್ರಾಟರು ತಲ್ಲಣವಾಗುವ ಕಾಲ ಬರುತ್ತದೆ. ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ. 2024ರ ಯುಗಾದಿಯೊಳಗೆ ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನ ಆಳುವವರು ಎಚ್ಚರ ವಹಿಸಿದರೆ ಈ ದುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೇ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಜೀವನವು ಆಡಂಬರ ರಹಿತವಾಗಿರಬೇಕು. ಆಧ್ಯಾತ್ಮಿಕ ಚಿಂತನೆ ನಮ್ಮಲ್ಲಿರಬೇಕು ಎಂದಿದ್ದಾರೆ ಶ್ರೀಗಳು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭವಿಷ್ಯ
ಹಾಗೇ ಇದೇ ವೇಳೆ ಕೋಡಿಮಠ ಶ್ರೀಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಪಾಯವಿಲ್ಲ. ಆದರೆ ಕೆಲವರು ಬಹುಬೇಗ ಹಣ ಮಾಡುವ ಆಸೆ ಹೊಂದಿದ್ದಾರೆ. ಅದೇ ಅವರಿಗೆ ಆಪತ್ತು ತಂದುಕೊಡುತ್ತದೆ. ಆಘಾತಗಳು ಸಂಭವಿಸಲಿದೆ, ಆದ್ರೆ ಯಾವುದೇ ತೊಂದರೆ ಇರಲ್ಲ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸಂಭವವಿದೆ. ಹೀಗಾಗಿ, ಸರ್ಕಾರ ಜನರ ಹಿತಕ್ಕಾಗಿ ಬದಲಾಗಬೇಕಿದೆ ಎಂದು ಶ್ರೀಗಳು ಇದೇ ವೇಳೆ ಸಲಹೆ ನೀಡಿದ್ದಾರೆ.
ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ
ಇನ್ನೇನು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಮುಂದಿನ ಪ್ರಧಾನಿ ಯಾರಾಗಬೇಕೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಶ್ನೆಗೆ ಉತ್ತರ ನೀಡುವುದು ಸಾಮಾನ್ಯ ಸಂಗತಿಯಲ್ಲ. ಅದನ್ನು ಸುಮ್ಮನೆ ಹೇಳುವುದಕ್ಕಾಗುವುದಿಲ್ಲ. ಅದರ ಬಗ್ಗೆ ಜಪ-ತಪಗಳನ್ನು ಮಾಡಬೇಕು. ಆಧ್ಯಾತ್ಮ ಚಿಂತನೆ ಮಾಡಬೇಕಿದೆ. ಪಂಚಾಗ್ನಿ, ಜಲಾಗ್ನಿ, ವಾಯಾಗ್ನಿ ಸೇರಿದಂತೆ 4 ಕಡೆ ಬೆಂಕಿಯನ್ನಿಟ್ಟು, ತಲೆಯ ಮೇಲೆ ಬೆಂಕಿಕುಂಡವಿಟ್ಟು ಧ್ಯಾನ ಮಾಡಬೇಕು ಎಂದರು.

ಹಾಗೇ ಮೊನ್ನೆ ಹಿಮಾಲಯ ಜೋಶಿಮಠ ಮುಳುಗುವ ಮುನ್ನ ನಾನು ಧ್ಯಾನ ಮಗ್ನನಾಗಿದ್ದೆ. ಏಕಾಏಕಿ ಬೆಂಕಿ ನನ್ನ ಉದರದ ಮೇಲೆ ಬಿದ್ದು, ಗಾಯವು ಆಗಿತ್ತು. ಆಗ ನನಗೆ ಗೌರಿಶಂಕರ ಶಿಖರಕ್ಕೆ, ಜೋಶಿಮಠಕ್ಕೆ ಕಂಟಕವಿದೆ ಎಂದು ಗೊತ್ತಾಯ್ತು. ಹೀಗಾಗಿ ಇಂತಹ ಪ್ರಶ್ನೆಗಳಿಗೆ ಸುಮ್ಮನೆ ಉತ್ತರ ನೀಡಲು ಸಾಧ್ಯವಿಲ್ಲ. ಸಮಯ ಬಂದಾಗ ನಾನೇ ಹೇಳುತ್ತೇನೆ ಎಂದು ಇದೇ ವೇಳೆ ಶ್ರೀಗಳು ಸ್ಪಷ್ಟನೆ ನೀಡಿದರು.
ಜುಲೈ ತಿಂಗಳಲ್ಲಿ ಜಲಪ್ರಳಯದ ಭವಿಷ್ಯ
ಈ ಮಧ್ಯೆ ಕಳೆದ ತಿಂಗಳು ಅಂದರೆ ಜುಲೈನಲ್ಲೂ ಕೋಡಿಮಠ ಶ್ರೀ ಭವಿಷ್ಯ ನುಡಿದಿದ್ದರು. ರಾಜ್ಯದಲ್ಲಿ ಭಾರಿ ಮಳೆ ಬರುತ್ತದೆ. ಜೊತೆಗೆ ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕವಾಗಿ ಒಟ್ಟಾರೆ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ ಮೃತ್ಯುವಿಗೆ ಸಿಲುಕುವ ಸೂಚನೆ ಇದೆ. ವಿಜಯ ದಶಮಿಯಿಂದ ಸಂಕ್ರಾಂತಿಯವರೆಗೆ ಈ ದುರ್ಘಟನೆಗಳು ನಡೆಯುತ್ತವೆ ಎಂದು ಶ್ರೀಗಳು ಈ ಮೊದಲು ಭವಿಷ್ಯ ನುಡಿದಿದ್ದರು. ಈಗ ಮತ್ತೊಂದು ಭವಿಷ್ಯ ನುಡಿದಿದ್ದು, ದೇಶದ ಮಹಾನ್ ವ್ಯಕ್ತಿಗಳಿಗೆ ಕಂಟಕವಿದೆ ಎಂದು ಹೇಳಿದ್ದಾರೆ.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications