ಭಾರತ Vs ಪಾಕ್ ಉದ್ವಿಗ್ನ ಪರಿಸ್ಥಿತಿ: ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ ಹಾಗೂ ಮುಂದೇನು ಆಗಲಿದೆ ಎನ್ನುವ ಬಗ್ಗೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. ಜಮ್ಮ ಮತ್ತು ಕಾಶ್ಮೀರದಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ ಒಟ್ಟು 26 ಜನ ಮೃತಪಟ್ಟಿದ್ದಾರೆ. ದೇಶದಾದ್ಯಂತ ಆಕ್ರೋಶದ ಅಲೆ ಇನ್ನೂ ಕಡಿಮೆಯಾಗಿಲ್ಲ. ಪ್ರತೀಕಾರ ತೆಗೆದುಕೊಳ್ಳಬೇಕು ಎನ್ನುವ ಕೂಗು ಹೆಚ್ಚಾಗಿದೆ. ಭಾರತ vs ಪಾಕ್ ಯುದ್ಧವಾಗಲಿದೆ ಎನ್ನುವ ವಿಷಯದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮೊದ ಮೊದಲು ಯುದ್ಧಕ್ಕೆ ಸನ್ನದ್ಧವಾಗಿದ್ದೇವೆ ಎಂದು ಹೇಳಿದ್ದ ಪಾಕಿಸ್ತಾನವು ಇದೀಗ ಪರೋಕ್ಷವಾಗಿ ಸಂಧಾನದ ಮಾತನಾಡುತ್ತಿದೆ. ಆದರೆ, ಯಾವ ಕ್ಷಣದಲ್ಲಾದರೂ ಭಯೋತ್ಪಾದಕರ ಮೇಲೆ ಪ್ರತೀಕಾರ ಅಥವಾ ದಾಳಿ ನಡೆಯುಬಹುದು ಅಂತಲೇ ಹೇಳಲಾಗುತ್ತಿದೆ. ಈ ರೀತಿ ಇರುವಾಗಲೇ ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ.
ಭಾರತ ಹಾಗೂ ಪಾಕ್ ಯುದ್ಧ ಭೀತಿ ಇದೆ. ಈ ವಿಷಯದಲ್ಲಿ ಕೆಲವೊಂದು ಸ್ಫೋಟಕ ವಿಷಯಗಳನ್ನು ಕೋಡಿ ಶ್ರೀ ಅವರು ಹಂಚಿಕೊಂಡಿದ್ದಾರೆ. ಉತ್ತರದ ನಾಡಿನಲ್ಲಿ ಅಗೆತನದ ಜ್ವಾಲೆ ಶುರುವಾಗಿ ಸುತ್ತುವರಿದು ಬರುವಾಗ ಜಗವೆಲ್ಲಾ ಕೂಳಾದಿತು ಅಂತ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಈ ಉದ್ವಿಗ್ನ ಸ್ಥಿತಿಯು ಕೇವಲ ಭಾರತ & ಪಾಕ್ ನಡುವೆ ಮಾತ್ರವಲ್ಲ ವಿಶ್ವಕ್ಕೆ ಸಂಕಷ್ಟವನ್ನು ತಂದೊಡ್ಡಲಿದೆ. ಇದು ಇನ್ನಷ್ಟು ವಿಷಮ ಸ್ಥಿತಿಯನ್ನು ತಲುಪಲಿದ್ದು.. ಮುಂದಿನ ದಿನಗಳಲ್ಲಿ ಭಾರೀ ಸಂಕಷ್ಟ ಎದುರಾಗಲಿದೆ ಎಂದೂ ಕೋಡಿ ಶ್ರೀ ಅವರು ಹೇಳಿದ್ದಾರೆ. ಈ ಬಗ್ಗೆ Publictv ವರದಿ ಮಾಡಿದೆ.

ಉತ್ತರ ನಾಡು ಕಾಶ್ಮೀರದಲ್ಲಿ ಈಗ ಈ ಸಂಘರ್ಷ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಪೂರ್ತಿ ದಕ್ಷಿಣ ಭಾರತ ಸೇರಿದಂತೆ ಜಗಕ್ಕೆಲ್ಲವೂ ಸಂಕಷ್ಟವನ್ನು ತಂದೊಡ್ಡಲಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮತಾಂಧ ಗಲಭೆ ಹೆಚ್ಚಾಗುತ್ತೆ. ಮರಣ ಮೃದಂಗ ಶುರುವಾಗುತ್ತದೆ. ಸಾವು ನೋವುಗಳು ಹೆಚ್ಚಾಗುತ್ತವೆ. ಹೀಗಾಗಿ ಆಳ್ವಿಕೆ ನಡೆಸುತ್ತಿರುವ ಅರಸರು ಇದರ ಬಗ್ಗೆ ವಿಚಾರ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನಾದ್ಯಂತ ಹೆಚ್ಚಾಗಬಹುದು..
ಇನ್ನು ಈ ಸಮಸ್ಯೆ ಜಗತ್ತಿನಾದ್ಯಂತ ಹೆಚ್ಚಾಗಬಹುದು. ದಕ್ಷಿಣ ಭಾರತವನ್ನೂ ಈ ಸಮಸ್ಯೆ ಆವರಿಸಿಕೊಳ್ಳಲಿದೆ. ಸಾವು - ನೋವು ಅಸಂತೋಷ, ದುಃಖ ಹಾಗೂ ಜನರ ನಡುವೆ ಮನಸ್ಸು ಕೆಡುವಂತಹದ್ದು. ಸಾವು ನೋವುಗಳ ಸಂಖ್ಯೆ ಹೆಚ್ಚಾಗುವುದು ಆಗಲಿದೆ. ಬೆಂಕಿ ಅವಘಡ ಹಾಗೂ ಸುನಾಮಿ ಮಾದರಿಯ ಅವಘಡಗಳು ಸಂಭವಿಸುವ ಸಾಧ್ಯತೆಯೂ ಇದೆ. ನಾಲ್ಕು ಸುನಾಮಿಗಳು (ನೀರು, ಬೆಂಕಿ ಅನಾಹುತಗಳು ಇವೆ) ವಿಶ್ವಕ್ಕೆ ಕಂಟಕವಾಗಲಿದೆ. ಭೂಕಂಪಗಳು ಸೇರಿದಂತೆ ಸಾವು - ನೋವುಗಳು ಹೆಚ್ಚಾಗಲಿವೆ. ಜಗತ್ತಿನ ಮೂರ್ನಾಲ್ಕು ದೊರೆಗಳಿಗೆ ಸಂಕಷ್ಟ ಇದೆ ಅಂತಲೂ ಹೇಳಿದ್ದಾರೆ.
ಮುಂದುವರಿದು, ಇದು ಆಳ್ವಿಕೆ ನಡೆಸುತ್ತಿರುವವ ಜವಾಬ್ದಾರಿ. ನಮ್ಮಲ್ಲಿ ಪ್ರಧಾನಿ, ರಾಷ್ಟ್ರಪತಿ ಇದ್ದಾರೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಇದ್ದಾರೆ. ಇವರೆಲ್ಲೂ ಸೇರಿ ವಿಚಾರ ಮಾಡಬೇಕು. ನಾವು ಎಲ್ಲರಿಗೂ ಒಳಿತಾಗಲಿ ಎಂದಷ್ಟೇ ಹೇಳಬಹುದು. ನಮ್ಮ ನಾಡಿಗೆ ಒಳ್ಳೆಯದಾಗಬೇಕು.












Click it and Unblock the Notifications