ಸಿಎಂ ಬದಲಾವಣೆ, ಯುದ್ಧದ ಬಗ್ಗೆ ಕೋಡಿಮಠದ ಸ್ವಾಮೀಜಿ ಶಾಕಿಂಗ್ ಭವಿಷ್ಯ!

ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿಶ್ರೀ) ಮತ್ತೆ ರಾಜಕಾರಣದ ಕುರಿತು ಭವಿಷ್ಯ ನುಡಿದಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಇದೇ ವರ್ಷದೊಳಗೆ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ಭವಿಷ್ಯವಾಣಿಗಳು ಈಗಾಗಲೇ ಕೇಳಿಬಂದಿದೆ. ಇದೇ ಹೊತ್ತಿನಲ್ಲಿ ಕೋಡಿಶ್ರೀಗಳು ಕೂಡ ರಾಜಕಾರಣದ ಬಗ್ಗೆ ಹಾಗೂ ಸಿಎಂ ಬದಲಾಗುವ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಕೋಡಿಶ್ರೀಗಳು ಈ ಹಿಂದೆಯೂ ಹಲವು ಸ್ಫೋಟಕ ಭವಿಷ್ಯ ನುಡಿದಿದ್ದರು. ಕಳೆದ ಬಾರಿ ಭವಿಷ್ಯ ಹೇಳಿದಾಗ ರಾಜ್ಯ ರಾಜಕಾರಣದಲ್ಲಿ ಅಧಿಕಾರ ಬದಲಾಗಲ್ಲ ಎಂದಿದ್ದರು. ಆದರೆ ಈಗ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಮುಂದಿನ ಸಂಕ್ರಾಂತಿವರೆಗೆ ಯಾವ ಬದಲಾವಣೆ ದೋಷವೂ ಕಾಡುತ್ತಿಲ್ಲ. ಅಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಬದಲಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Kodi Mutt Swamiji Predicts CM Change In Karnataka War Like Situation

ಸಂಗಮೇಶ ನಲಿವನೆ‌, ಆದರೆ ‌ಒಳ‌ ಅಡ್ಡ ಬಂದಿದೆ. ಅಂದರೆ ಬದಲಾವಣೆಯೂ ಆಗಬಹುದು ಎಂದಿದ್ದಾರೆ. ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು ಎಂಬ ಸೂಚನೆಯನ್ನೂ ಕೋಡಿಶ್ರೀ ನೀಡಿದ್ದಾರೆ. ಹಾಲುಮತದವರಿಗೆ ಅಧಿಕಾರ‌ ಬಂದರೆ, ಅವರಿಂದ ಅದನ್ನು ಬಿಡಿಸಿಕೊಳ್ಳೋದು ತುಂಬಾ ಕಷ್ಟ, ಅವರಾಗಿಯೇ ಅದನ್ನು ಬಿಡಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ ಎಂದಿದ್ದಾರೆ.

ವಿಜಯನಗರ ಸಾಮ್ರಾಜ್ಯ ಕಟ್ಟಿದ್ದು ಹಕ್ಕಬುಕ್ಕರು. ಇವತ್ತು ಅದೇ ಚಿಹ್ನೆ ಇದೆ. ಮೈಸೂರು ದಸರಾ ನಡೆಯುತ್ತಿರುವುದು ಕೂಡ ಅದೇ ಚಿಹ್ನೆಯಲ್ಲಿ‌. ಹಾಗಾಗಿ ಹಾಲು ಕೆಟ್ಟರೂ ಹಾಲು‌ಮತ‌ ಕೆಡುವುದಿಲ್ಲ. ಅಂತಹವರ ಕೈಯಲ್ಲಿ ಅಧಿಕಾರ ಇರುವುದರಿಂದ ಅವರಿಂದ ಪಡೆಯುವುದು ಕಷ್ಟ. ಒಂದು ವೇಳೆ ಅವರಾಗಿಯೇ ಬಿಟ್ಟರೆ ಅಧಿಕಾರ ಬೇರೆಯವರಿಗೆ ಸಿಗುತ್ತೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಕೊರೋನಾ ಬಳಿಕ ಮತ್ತೊಂದು ರೋಗ ಬರಲಿದೆ. ಈ ವರ್ಷದಲ್ಲಿ ಪ್ರಾಕೃತಿಕವಾಗಿ ಬಹಳ ಅಪಾಯವಿದೆ. ಜಗತ್ತಿನಾದ್ಯಂತ ದೊಡ್ಡ ಅಪಾಯವಿದೆ. ರಾಜ್ಯ ಹಾಗೂ ಕೇಂದ್ರ ರಾಜಕಾರಣಕ್ಕೂ ಅಪಾಯವಿದೆ. ಮುಂದೆ ಏನಾಗುತ್ತೆ ಎಂದು ನೀವೇ ಕಾದು ನೋಡಿ. ಯುದ್ಧ ಭೀತಿ, ಸಾವು ನೋವು ಕೂಡ ಇರುತ್ತೆ. ದೊಡ್ಡ ರೋಗ ಬಂದು ಸುಮಾರು ಐದು ವರ್ಷಗಳ ಕಾಲ ಇರುತ್ತದೆ ಎಂದೂ ಭವಿಷ್ಯ ಹೇಳಿದ್ದಾರೆ.

Kodi Mutt Swamiji Predicts CM Change In Karnataka War Like Situation

ನಾನು‌ ಭವಿಷ್ಯ ಹೇಳುವುದಿಲ್ಲ, ರೂಪಿಸುತ್ತೀನಿ. ಇಲ್ಲಿಯವರೆಗೆ ಹೇಳಿದ ಭವಿಷ್ಯವೆಲ್ಲ ಆಗೆ ಆಗಬಾರದು ಎಂದು ಹೇಳ್ತೀನಿ. ಕೊರೋನಾ ಬಗ್ಗೆ ನಾನು ಮೊದಲೇ ಹೇಳಿದ್ದೆ, ರೋಗ ಬರುತ್ತೆ ಜನ ಸಾಯ್ತಾರೆ ಎಂದಿದ್ದೆ. ಮದ್ದಿಲ್ಲದ ರೋಗ ಬರುತ್ತೆ ಎಚ್ಚೆತ್ತುಕೊಳ್ಳಬೇಕು ಎಂದಿದ್ದೆ, ಎಷ್ಟು ಜನರ ಪ್ರಾಣ ಬಿಟ್ಟರು ಅಲ್ಲವೇ? ಈಗಲೂ ಹೇಳ್ತಿದ್ದೀನಿ ಅಂತಹ ಒಂದು ರೋಗ ಬರುವ ಸಾಧ್ಯತೆ ಇದೆ. ಅದು ಐದು ವರ್ಷ ಜನರನ್ನು ಕಾಡುತ್ತೆ. ಸರ್ಕಾರಗಳು ಹುಷಾರಾದರೆ ಅದು ಹೋಗಬಹುದು, ಎಚ್ಚರ ವಹಿಸಬೇಕು ಎಂದೂ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+