Kodi Mutt Seer Prediction: ಕೇಂದ್ರ, ರಾಜ್ಯ ರಾಜಕೀಯ, ಮಳೆ ಬಗ್ಗೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ
Kodi Mutt Swamiji Prediction: ಕೋಡಿಮಠ ಶ್ರೀಗಳು ಹಾಗಾಗ ಭಯಾನಕ ಭವಿಷ್ಯಗಳನ್ನು ನುಡಿಯುತ್ತಲಿರುತ್ತಾರೆ. ಹಾಗೆಯೇ ಇದೀಗ ಕೇಂದ್ರ ಹಾಗೂ ರಾಜ್ಯ ರಾಜಕೀಯ, ಮಳೆ, ಬೆಳೆ ಸೇರಿದಂತೆ ಇನ್ನಿತ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮೊದಲಿನಿಂದಲೂ ಭವಿಷ್ಯ ನುಡಿಯುವುದರಲ್ಲಿ ಕೋಡಿಮಠ ಶ್ರೀಗಳು ಪ್ರಸಿದ್ಧಿಯಾಗಿದ್ದಾರೆ. ಅದರಲ್ಲೂ ರಾಜ್ಯ ರಾಜಕೀಯ, ಮಳೆ ಬಗ್ಗೆ ಭವಿಷ್ಯ ನುಡಿಯುತ್ತಲಿದ್ದು, ಇವುಗಳು ನಿಜವಾಗುತ್ತವೆ ಎನ್ನುವುದು ತುಂಬಾ ಜನರ ನಂಬಿಕೆಯಾಗಿದೆ. ಹಾಗೆಯೇ ಇದೀಗ ಅಚ್ಚರಿಯ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ಭಾರತಕ್ಕೆ ಬಹುದೊಡ್ಡ ಗಂಡಾಂತರ ಕಾದಿದ್ದು, ವಿಶ್ವವೇ ತಿರುಗಿ ನೋಡುವ ಮಟ್ಟಿಗೆ ಆಘಾತ ಎದುರಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ನಮನ್ ಫೌಂಡೇಶನ್‌ನಿಂದ ನೂತನವಾಗಿ ನಿರ್ಮಾಣ ಆಗಲಿರುವ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಈ ಸ್ಫೋಟಕ ಭವಿಷ್ಯ ನುಡಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವವರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆ. ಮುಂದೆ ಸಂಭವಿಸುವ ಆಘಾತಗಳನ್ನು ಅರಿತುಕೊಂಡು ಈಗಲೇ ಪರಿಹಾರಿಸಿಕೊಂಡರೆ ಉತ್ತಮ. ಇಲ್ಲದಿದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಸಾಮಾನ್ಯವಾಗಿ ಯುಗಾದಿ ಹಾಗೂ ಸಂಕ್ರಾಂತಿ ಸಮಯದಲ್ಲಿ ಮುನ್ಸೂಚನೆ ಫಲಗಳನ್ನು ತಿಳಿಸಲಾಗುತ್ತದೆ. ಯುಗಾದಿ ವೇಳೆ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ಸಂಕ್ರಾಂತಿ ವೇಳೆ ಆಡಳಿತ, ರಾಜಕಾರಣ ಇತ್ಯಾದಿಗಳ ಫಲ ನೋಡಿಕೊಂಡು ಹೇಳುತ್ತೇವೆ. ಸಂಕ್ರಾಂತಿವರೆಗೆ ಏನು ತೊಂದರೆಯಿಲ್ಲ. ಅದಾದ ಬಳಿಕ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೊಡಿಮಠ ಶ್ರೀಗಳು ಭವಿಷ್ಯ ನುಡಿದರು.
ಇನ್ನು ಯುದ್ಧಗಳು ಮುಂದುವರೆಯುತ್ತವೆ. ಮನಸುಗಳು ನಿಂತಾಗ ಮಾತ್ರ ಯುದ್ಧ ನಿಲ್ಲುತ್ತದೆ. ಮನುಷ್ಯ ಮೌನ ಆಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು. 84,OO,OOO ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದ್ದು, ಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ. ಇದನ್ನು ಸನ್ಮಾರ್ಗದಲ್ಲಿ ಬಳಕೆ ಮಾಡಿಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಧ್ಯಾನ ಕೇಂದ್ರಗಳು ಅಧ್ಯಾತ್ಮಿಕ ಹಾಗೂ ಧಾರ್ಮಿಕ ಬೆಳವಣಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಘಾದ ಶಕ್ತಿ ಇದೆ. ಪಂಚತಂತ್ರ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆ ಆಗುತ್ತದೆ. ಅವು ದೈವ ವೃಕ್ಷಗಳಾಗಿವೆ ಎಂದು ಹೇಳಿದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅವರು ಇದೇ ರೀತಿಯ ಭವಿಷ್ಯವನ್ನು ಹಾಸನದಲ್ಲಿ ನುಡಿಸಿದ್ದರು.
ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುತ್ತದೆ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಜನ ಜೀವನ ಅಸ್ಥಿರಗೊಳ್ಳಲಿದೆ ಅಂತಾ ಸ್ಫೋಟಕ ಭವಿಷ್ಯ ನುಡಿದಿದ್ದರು. ಇನ್ನು ಇದಕ್ಕೂ ಮುಂಚೆ ಬೆಳಗಾವಿಯಲ್ಲಿ ಮಾತನಾಡಿದ್ದ ಅವರು, ಲೋಕಕ್ಕೆ ಜಲ, ವಾಯು ಗಂಡಾಂತರ ಎದುರಾಗಲಿದೆ. ಹಿಮಾಲಯ ಕರಗಿಹೋಗಲಿದೆ. ಮೇಘಸ್ಫೋಟವಾಗುವ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ. ರಾಜಕೀಯ ಮುಖಂಡರಿಗೆ ಸಾವಿನ ಭಯವಿದೆ ಅಂತಲೂ ಭವಿಷ್ಯ ನುಡಿದಿದ್ದರು. ಇದೀಗ ಮತ್ತೆ ಕೇಂದ್ರ ಹಾಗೂ ರಾಜ್ಯ ರಾಜಕೀಯದ ಬಗ್ಗೆ ಗಮನ ಸೆಳೆದಿದ್ದಾರೆ.
ಒಟ್ಟಿನಲ್ಲಿ ಹೇಳೋದಾದ್ರೆ, ಕೋಡಿಮಠ ಶ್ರೀಗಳು ನುಡಿಯುವ ಭವಿಷ್ಯಕ್ಕಾಗಿ ಜನರು, ರಾಜಕಾರಣಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಯಾಕಂದ್ರೆ ಅವರು ನುಡಿಯುವ ಭವಿಷ್ಯಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಲ್ಲಿ ಜನರಿದ್ದಾರೆ. ಈಗಾಗಲೇ ಅವರು ಹೇಳಿದಂತೆ ಕೆಲ ಘಟನೆಗಳು ಸಂಭವಿಸಿರುವ ಉದಾಹರಣೆಗಳು ಇವೆ.












Click it and Unblock the Notifications