Kodava Hockey Festival 2023: ಈ ವರ್ಷ ಅದ್ಧೂರಿಯಾಗಿ ನಡೆಯಲಿದೆ ಹಾಕಿ ಉತ್ಸವ, ದಿನಾಂಕ, ಸ್ಥಳದ ಮಾಹಿತಿ ತಿಳಿಯಿರಿ
ಕೋಲು ಮತ್ತು ಚೆಂಡನ್ನು ಬಳಸಿ ಆಡುವ ಭಾರತದ ರಾಷ್ಟ್ರೀಯ ಕ್ರೀಡೆ 'ಹಾಕಿ'ಯ ಇತಿಹಾಸ ದೊಡ್ಡದಿದೆ. ಇಂತಹ ಹಾಕಿ ಕ್ರೀಡೆಯ ಉತ್ಸವವು ಕರ್ನಾಟಕ ರಾಜ್ಯ ಕೊಡಗು ಜಿಲ್ಲೆಯಲ್ಲಿ ನಡೆಯಲಿದೆ.
ಬೆಂಗಳೂರು, ಮಾರ್ಚ್ 13: ಕೋಲು ಮತ್ತು ಚೆಂಡನ್ನು ಬಳಸಿ ಆಡುವ ಭಾರತದ ರಾಷ್ಟ್ರೀಯ ಕ್ರೀಡೆ 'ಹಾಕಿ'ಯ ಇತಿಹಾಸ ದೊಡ್ಡದಿದೆ. ಇಂತಹ ಹಾಕಿ ಕ್ರೀಡೆಯ ಉತ್ಸವವು ಕರ್ನಾಟಕ ರಾಜ್ಯ ಕೊಡಗು ಜಿಲ್ಲೆಯಲ್ಲಿ ನಡೆಯಲಿದೆ.
ಹೌದು, ರಾಜ್ಯದ ಕೊಡವ ಭಾಷಿಗರ ನೆಲೆಯಾದ ಜಿಲ್ಲೆ ಕೊಡಗಿನಲ್ಲಿ ಇದೇ ಮಾರ್ಚ್ 18ರಿಂದ '23ನೇ ಕೊಡವ ಹಾಕಿ ಉತ್ಸವ' ಜರುಗಲಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕೊಡವರಿಗೆ ಶುಭಾಷಯ ತಿಳಿಸಿ ಟ್ವೀಟ್ ಮಾಡಿದ್ದಾರೆ.

ಸಚಿವರು ತಮ್ಮ ಟ್ವೀಟ್ ನಲ್ಲಿ ವಿಶ್ವದ ಅತೀ ದೊಡ್ಡ ಫೀಲ್ಡ್ ಹಾಕಿ ಈವೆಂಟ್ ಹಿಂತಿರುಗುತ್ತದೆ ಎಂದು ಬರೆದುಕೊಂಡಿದ್ದಾರೆ. ಬಹು ಅದ್ಧೂರಿಯಾಗಿ ಮಾರ್ಚ್ 18 ರಿಂದ ಆರಂಭವಾಗಲಿರುವ 'ಕೊಡವ ಹಾಕಿ ಉತ್ಸವದಲ್ಲಿ ಸುಮಾರು 300 ಕ್ಕೂ ಹೆಚ್ಚು ತಂಡಗಳು ಹಾಗೂ 5,000 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದೊಂದು ಮೆಗಾ ಹಾಕಿ ಹಬ್ಬವು ನಮ್ಮ ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಹಾಕಿ ತಾರೆಗಳನ್ನು ಹೊರತರಲು ಸಿದ್ಧವಾಗಿದೆ.
ಹಾಕಿ ಕ್ರೀಡಾ ಉತ್ಸವವು ಪ್ರತಿ ವರ್ಷ ಏಪ್ರೀಲ್ ಮೇ ತಿಂಗಳಲ್ಲಿ ಆರಂಭವಾಗುವ ಈ ಉತ್ಸವವು ಈ ವರ್ಷ ಮಾರ್ಚ್ ನಲ್ಲಿ ಆರಂಭವಾಗಿ ಒಂದು ತಿಂಗಳು ಕಾಲ ನಡೆಯಲಿದೆ. 2018 ರಲ್ಲಿ ಕೊಡಗಿನ ನಾಪೋಕ್ಲುವಿನಲ್ಲಿ 22ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ ಕುಲ್ಲೇಟಿರ ಕಪ್ ನಡೆದಿತ್ತು. 2018ರಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದ ಕಾರಣ 2019ರಲ್ಲಿ ಬಾಳುಗೋಡುವಿನಲ್ಲಿ ನಡೆಯಬೇಕಿದ್ದ ಮುಕ್ಕಾಟಿರ (ಹರಿಹರ) ಕಪ್ ಅನ್ನು ಒಂದು ವರ್ಷ ಮುಂದೂಡುವ ನಿರ್ಧಾರ ಮಾಡಲಾಯಿತು.ಬಳಿಕ 2020ರಲ್ಲೂ ಭಾರೀ ಮಳೆಯಿಂದ ಆವಾಂತರದಿಂದ ಸೃಷ್ಟಿಯಾದ ಅನಾಹುತಗಳ ಕಾರಣದಿಂದ ಹಾಕಿ ಪಂದ್ಯಾವಳಿ ಸ್ಥಗಿತಗೊಂಡಿತ್ತು.

ಅಲ್ಲದ ಕಳೆದ ವರ್ಷವು ಸಹ ಇದೇ ಹಾಕಿ ಉತ್ಸವ ನಡೆಸಲು ನೀರ್ಧರಿಸಲಾಗಿತ್ತು. ಆದರೆ ಕೊರೊನಾ ಅಲೆ ಉಲ್ಬಣಿಸುವ ಮುನ್ಸೂಚನೆ ದೊರೆತ ಕಾರಣ ನಡೆಯಲಿಲ್ಲ. ಹೀಗಾಗಿ ಈ ವರ್ಷ ಅದ್ಧೂರಿಯಾಗಿ, ಸಂಭ್ರಮ ಸಡಗರಿಂದ ಜರುಗಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications