ದೊಡ್ಲ, ಹೆರಿಟೇಜ್, ತಿರುಮಲ ಸಹಕಾರಿ ಸಂಸ್ಥೆಗಳಲ್ಲ.. ತಿಳಿಯಿರಿ ಎಂದ ನೆಟ್ಟಿಗರು!
ಬೆಂಗಳೂರು: 'ನಂದಿನಿ ವಿಚಾರಕ್ಕೆ ಕೈಹಾಕುತ್ತಿದ್ದಾರೆ..' ಎಂಬ ವಿಷಯ ಕೇಳಿ ಕನ್ನಡಿಗರು ಕೆಂಡವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲದಿನದಿಂದ ನಂದಿನಿ (KMF) ವಿಚಾರ ಟ್ರೆಂಡ್ ಕ್ರಿಯೇಟ್ ಮಾಡಿದೆ. ಬಿಜೆಪಿ ನಾಯಕರು ಇದನ್ನ ನೋಡಿ ಚಿಂತಿತರಾಗಿದ್ದು, ಈ ವಿಚಾರ ತಣ್ಣಗಾಗಿಸುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಆದರೂ ನಂದಿನಿ & ಅಮುಲ್ (Amul) ಚರ್ಚೆ ದೊಡ್ಡದಾಗುತ್ತಲೇ ಇದೆ.
ನಂದಿನಿ ಮತ್ತು ಅಮುಲ್ ವಿಚಾರ ದೊಡ್ಡದಾಗುತ್ತಿದ್ದಂತೆ ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡುತ್ತಿದ್ದಂತೆ ನಂದಿನಿ & ಅಮುಲ್ ಕುರಿತು ಚರ್ಚೆ ಆರಂಭ ಮಾಡಿದ್ದವರಿಗೆ ತಿರುಗೇಟು ನೀಡುತ್ತಿದ್ದಾರೆ ಕಮಲ ಪಾಳಯದ ನಾಯಕರು. ಹೀಗೆ ತಿರುಗೇಟು ನೀಡಲು ಬಿಜೆಪಿ ಮಾಡಿದ್ದ ಟ್ವೀಟ್ ಕೂಡ ಮತ್ತೊಂದು ಹಂತದ ಚರ್ಚೆಗೆ ವೇದಿಕೆ ಒದಗಿಸಿದ್ದು, ತಿರುಗುಬಾಣ ಆಗುತ್ತಿದೆ ಅಂತಾ ನೆಟ್ಟಿಗರು ಮಾತನಾಡುತ್ತಿದ್ದಾರೆ.

ಟ್ವೀಟ್ ಬಗ್ಗೆ ಚರ್ಚೆ ಶುರು!
ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ? 2010ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದವರು ಶ್ರೀ @BSYBJP ಅವರು. @INCKarnataka ಪರಂಪರೆ ಅಂದಿನ ರಾಜ್ಯಪಾಲರು ಅದಕ್ಕೆ ಸಹಿ ಮಾಡಲಿಲ್ಲ. 2020ರಲ್ಲಿ ಮತ್ತೆ ಕಾಯ್ದೆ ಜಾರಿಗೆ ತಂದದ್ದೂ ನಾವೇ ಎಂದು ಪೋಸ್ಟ್ ಹಾಕಲಾಗಿತ್ತು. ಸರಿಣಿ ಟ್ವೀಟ್ ಮುಂದುವರಿದು, ದೊಡ್ಲ (ತೆಲಂಗಾಣ)
ಹೆರಿಟೇಜ್ (ಆಂಧ್ರ), ಆರೋಕ್ಯ (ತಮಿಳುನಾಡು), ಮಿಲ್ಕಿ ಮಿಸ್ಟ್ (ತ. ನಾಡು), ತಿರುಮಲ (ತ. ನಾಡು), ಹಟ್ಸನ್ (ತ.ನಾಡು). ಎಲ್ಲವೂ ನಂದಿನಿ ಎದುರಿಸಿದ ಬ್ರ್ಯಾಂಡ್‌ಗಳೇ. ಹಾಲಿನ ಹುಡಿ ಉತ್ಪಾದನೆ ಸಾಮರ್ಥ್ಯವನ್ನು ದಿನಕ್ಕೆ 320 ಟನ್‌ಗೆ ಹೆಚ್ಚಿಸಿದ್ದು ನಾವು... ಎಂದು ಬಿಜೆಪಿ ಟ್ವೀಟ್‌ನಲ್ಲಿ ಬರೆಯಲಾಗಿತ್ತು.
ದೊಡ್ಲ (ತೆಲಂಗಾಣ)
— BJP Karnataka (@BJP4Karnataka) April 10, 2023
ಹೆರಿಟೇಜ್ (ಆಂಧ್ರ)
ಆರೋಕ್ಯ (ತಮಿಳು ನಾಡು)
ಮಿಲ್ಕಿ ಮಿಸ್ಟ್ ( ತ. ನಾಡು)
ತಿರುಮಲ ( ತ. ನಾಡು )
ಹಟ್ಸನ್ (ತ.ನಾಡು)
ಎಲ್ಲವೂ ನಂದಿನಿ ಎದುರಿಸಿದ ಬ್ರ್ಯಾಂಡ್‌ಗಳೇ. ಹಾಲಿನ ಹುಡಿ ಉತ್ಪಾದನೆ ಸಾಮರ್ಥ್ಯವನ್ನು ದಿನಕ್ಕೆ 320 ಟನ್‌ಗೆ ಹೆಚ್ಚಿಸಿದ್ದು ನಾವು.#BJPYeBharavase
4/5
ಖಾಸಗಿ ಬೇರೆ.. ಸಹಕಾರಿ ಬೇರೆಯಂತೆ!
ರಾಜ್ಯ ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆ ಮಾಡಿದ್ದ ಟ್ವೀಟ್‌ಗೆ ಇದೀಗ ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ, 'ಇವು ಯಾವುವೂ ಸಹಕಾರಿ ಸಂಸ್ಥೆಗಳಲ್ಲ. ಪ್ರೈವೇಟ್ ಎಂಟಿಟಿಗಳು! ಇವಕ್ಕೆ ಸಮಸ್ಯೆ ಅರ್ಥನೇ ಆಗಿಲ್ಲ ಕಣ್ರೋ...' ಎನ್ನುತ್ತಾ ಒಬ್ಬ ಟ್ವಿಟ್ಟರ್ ಬಳಕೆದಾರ ಪ್ರತಿಕ್ರಿಯೆ ನೀಡಿದ್ದರೆ, ಮತ್ತಷ್ಟು ಜನ ಇದೇ ರೀತಿ ಸಹಕಾರಿ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆ ಬೇರೆ ಬೇರೆ ಅಲ್ವಾ ಎಂದು ಪ್ರತಿಕ್ರಿಯಿಸಿದ್ದಾರೆ.
ಇವು ಯಾವುವೂ ಸಹಕಾರಿ ಸಂಸ್ಥೆಗಳಲ್ಲ. ಪ್ರೈವೇಟ್ ಎಂಟಿಟಿಗಳು!
— 🌱 | #SaveNandini | Defeat BJP | 🌱 (@Manjina_Hani) April 10, 2023
ಇವಕ್ಕೆ ಸಮಸ್ಯೆ ಅರ್ಥನೇ ಆಗಿಲ್ಲ ಕಣ್ರೋ. ಒದ್ದೋಡುಸ್ರೋ ಈ ಬಡ್ಡೆತ್ತವ್ ನಾ! https://t.co/D8v3vpIUxh

'ಯಾಕೆ ಮಿಕ್ಕೆಲ್ಲಾ ಕಂಪನಿ ಬಿಟ್ಟು...'
ಅಂದಹಾಗೆ ಟ್ವಿಟ್ಟರ್ ಬಳಕೆದಾರರೊಬ್ಬರು ಅಮುಲ್ ಬಗೆಗಿನ ಸಮರ್ಥನೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, 'ಯಾಕೆ ಮಿಕ್ಕೆಲ್ಲಾ ಕಂಪನಿ ಬಿಟ್ಟು ಅಮುಲ್ ಮೇಲೆ ವಿರೋಧ ಅಂದ್ರೆ ನೋಡಿ. ಒಂದಷ್ಟು ಖಾಸಗಿ ಕಂಪನಿಗಳ ಪೋಟೋ ಹೆಸರು ಬರೆದು ಸಮರ್ಥನೆಗೆ ಇಳಿದಿರೋ ಮೂರ್ಖರೇ ಖಾಸಗಿ ಕಂಪೆನಿಗಳಿಗೂ ಸರ್ಕಾರದ ಅಧೀನದಲ್ಲಿ ನಡೆಯುವ ಸಹಕಾರಿ ಸಂಸ್ಥೆಗಳಿಗೂ ವ್ಯತ್ಯಾಸ ಅರಿಯಿರಿ. ನೀವು ಹೇಳಿದವು ಸರ್ಕಾರದ ಬೆಂಬಲದಿಂದ ಒಳಗೆ ಬರ್ತಿಲ್ಲ. ಆದ್ರೆ ಅಮುಲ್...' ಎಂದು ಟ್ವೀಟ್ ಮಾಡಿದ್ದಾರೆ.
ಯಾಕೆ ಮಿಕ್ಕೆಲ್ಲಾ ಕಂಪನಿ ಬಿಟ್ಟು ಅಮುಲ್ ಮೇಲೆ ವಿರೋಧ ಅಂದ್ರೆ ನೋಡಿ👇
— ಜಗದೀಶ್ ಬಿರಾದಾರ್ (@jagdish109) April 10, 2023
ಒಂದಷ್ಟು ಖಾಸಗಿ ಕಂಪನಿಗಳ ಪೋಟೋಹೆಸರು ಬರೆದು ಸಮರ್ಥನೆಗೆ ಇಳಿದಿರೋ ಮೂರ್ಖರೇ
ಖಾಸಗಿ ಕಂಪೆನಿಗಳಿಗೂ
ಸರ್ಕಾರದ ಅಧೀನದಲ್ಲಿ ನಡೆಯುವ ಸಹಕಾರಿ ಸಂಸ್ಥೆಗಳಿಗೂ ವ್ಯತ್ಯಾಸ ಅರಿಯಿರಿ.
ನೀವು ಹೇಳಿದವು ಸರ್ಕಾರದ ಬೆಂಬಲದಿಂದ ಒಳಗೆ ಬರ್ತಿಲ್ಲ
ಆದ್ರೆ ಅಮುಲ್ .#SaveNandini
'ನಂದಿನಿ ಮಟ್ಟ ಹಾಕಲು ಬಳಸುವುದಿಲ್ಲವೇ?'
ಹಾಗೇ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ, 'ಅಮೂಲ್ ಖಾಸಗಿ ಸಂಸ್ಥೆ(ಆರೋಕ್ಯ. ಡೋಡ್ಲ.etc..) ಆಗಿದ್ರೆ ಯಾರು ವಿರೋಧ ಮಾಡ್ತಾ ಇರ್ಲಿಲ್ಲ ಆದ್ರೆ ಎರಡು ಸಹಕಾರಿ ಸಂಸ್ಥೆಗಳು ಪೈಪೋಟಿ ಬಿದ್ದು ಯಾವುದೇ ಸಂಸ್ಥೆ ನಷ್ಟ ಉಂಟಾದರೆ ನೇರ ತೊಂದರೆ ಅದನ್ನು ಅವಲಂಬಿತ ಜನರಿಗೆ. ಅಮೂಲ್ ತನ್ನ ಅಗಾದ ಸಂಪತ್ತಲ್ಲಿ ಒಂದುಚೂರನ್ನು ನಂದಿನಿ ಮಟ್ಟ ಹಾಕಲು ಬಳಸುವುದಿಲ್ಲವೇ.' ಎಂದು ಪ್ರಶ್ನಿಸಿದ್ದಾರೆ.
@mepratap
— Chandu gowda Deverahatti/ಚಂದು ದೇವರಹಟ್ಟಿ. (@deverahatti) April 10, 2023
ಅಮೂಲ್ ಖಾಸಗಿ ಸಂಸ್ಥೆ(ಆರೋಕ್ಯ. ಡೋಡ್ಲ.etc..) ಆಗಿದ್ರೆ ಯಾರು ವಿರೋಧ ಮಾಡ್ತಾ ಇರ್ಲಿಲ್ಲ ಆದ್ರೆ ಎರಡು ಸಹಕಾರಿ ಸಂಸ್ಥೆಗಳು ಪೈಪೋಟಿ ಬಿದ್ದು ಯಾವುದೇ ಸಂಸ್ಥೆ ನಷ್ಟ ಉಂಟಾದರೆ ನೇರ ತೊಂದರೆ ಅದನ್ನು ಅವಲಂಬಿತ ಜನರಿಗೆ.
ಅಮೂಲ್ ತನ್ನ ಅಗಾದ ಸಂಪತ್ತಲ್ಲಿ ಒಂದುಚೂರನ್ನು ನಂದಿನಿ ಮಟ್ಟ ಹಾಕಲು
ಬಳಸುವುದಿಲ್ಲವೇ.#SaveNandini
ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಈಗಿನ ಪರಿಸ್ಥಿತಿಯಲ್ಲಿ ನಂದಿನಿ ಮತ್ತು ಅಮುಲ್ ವಿಚಾರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಇನ್ನಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಚರ್ಚೆಗೆ ಆಹಾರ ಆದರೂ ಆಗಬಹುದು. ಮತ್ತೊಂದು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಈ ವಿಚಾರದಲ್ಲಿ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿರುವುದು ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications