Power Price Hike: ಜನರಿಗೆ ಕರೆಂಟ್ ಶಾಕ್! ಇದೇ ಹಣಕಾಸು ವರ್ಷದಿಂದಲೇ ರಾಜ್ಯದಲ್ಲಿ 'ವಿದ್ಯುತ್' ದರ ಹೆಚ್ಚಳ: ಆದೇಶ

ಬೆಂಗಳೂರು, ಮಾರ್ಚ್ 20: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇವೆ. ಆರಂಭದಲ್ಲಿ ಮದ್ಯದ ಬೆಲೆ, ನಂತರ ಸಾರಿಗೆ ಬಸ್ ಪ್ರಯಾಣ, ಹಾಲಿನ ದರ, ನಮ್ಮ ಮೆಟ್ರೋ ದರ, ಇದೀಗ ವಿದ್ಯುತ್ ದರ (Power Price Hike) ಹೆಚ್ಚಳ ಮಾಡಿ ಆದೇಶಿಸಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಗುರುವಾರ ಆದೇಶಿಸಿದೆ. ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

ಇತ್ತೀಚೆಗಷ್ಟೆ ನೀರಿನ ದರ ಹೆಚ್ಚಿಸಲು ಚಿಂತನೆ ಆರಂಭಿಸಿದ್ದ ರಾಜ್ಯ ಸರ್ಕಾರ ಇದೀಗ ಬಹುದಿನಗಳಿಂದ ಪ್ರಸ್ತಾಪಿಸಲಾಗಿದ್ದ ವಿದ್ಯುತ್ ದರ ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ದರ ಏರಿಕೆಯ ಶಾಕ್ ನೀಡಿದೆ.

KERC Orderd Power Taffif Hike From April 1st Price Electricity 36 Paice Increased

ಕಳೆದ ವರ್ಷಗಳಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ. ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಮುಂದಿನ ಎರಡು ವರ್ಷ ಅಂದರೆ 2028ರವರೆಗೆ ವಿದ್ಯುತ್ ದರ ಎಷ್ಟಿರಲಿದೆ ಎಂದು ಸರ್ಕಾರ ತಿಳಿಸಿದೆ. ಈ ಪೈಕಿ ಇದೇ ವರ್ಷದಲ್ಲಿ 2025-26ರಲ್ಲಿ ಅತ್ಯಧಿಕ ಬೆಲೆ ಹೆಚ್ಚಾಗಿರುವುದು ಗೊತ್ತಾಗಿದೆ. ಈ ದರ ಏರಿಕೆಗೆ ರಾಜ್ಯದ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದರು.

2025-2028 ರವರೆಗೆ ವಿದ್ಯುತ್ ದರ ಎಷ್ಟು ಹೆಚ್ಚಾಗಿದೆ?

ಕರ್ನಾಟಕ ಸರ್ಕಾರ ತನ್ನ ಆದೇಶದಲ್ಲಿ 2025-2028 ರವರೆಗೆ ದರ ಏರಿಕೆ ಉಲ್ಲೇಕ ಇದೆ. 2025-26ರ ಆರ್ಥಿಕ ವರ್ಷದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಾಗಿದೆ. ಇದೇ ಅತೀ ಹೆಚ್ಚು ದರ ಏರಿಕೆಯಾಗಿದೆ. 2026-27ರ ವರ್ಷದಲ್ಲಿ 35 ಪೈಸೆ ಮತ್ತು
2027-28ರಲ್ಲ ಪ್ರತಿ ಯೂನಿಟ್‌ 34 ಪೈಸೆ ದರ ಏರಿಕೆ ಮಾಡಿ ಸರ್ಕಾರ ಪ್ರಕಟಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಆರ್ಥಿಕ ಹೊರೆ ಹೊರೆಸಿ, ಅಧಿಕ ಆದಾಯ ಸಂಗ್ರಹಕ್ಕೆ ಮುಂದಾಗಿದೆ ಎಂದು ಜನ ದೂರುತ್ತಿದ್ದಾರೆ.

KERC Orderd Power Tariff Hike From April 1st Price Electricity 36 Paice Increased

ಕರ್ನಾಟಕ ಸರ್ಕಾರದವು ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೌಕರರು, ಸಿಬ್ಬಂದಿಗೆ ವೇತನ, ಪಿಂಚಣಿ, ಗ್ರ್ಯಾಚುಟಿಗೆ ಹಣ ಹೊಂದಿಸಲು ದರ ಹೆಚ್ಚಿಸಿ ಜನರಿಂದ ಹಣ ವಸೂಲಿಗೆ ಮುಂದಾಗಿದೆ ಎಂದು ಸಾರ್ವಜನಿಕರು ವಿಪಕ್ಷ ನಾಯಕರು ದೂರಿದ್ದಾರೆ.

Take a Poll

ವಿದ್ಯುತ್ ದರ ಏರಿಕೆ: ಬಿವೈ ವಿಜಯೇಂದ್ರ ಕಿಡಿ

ರಾಜ್ಯ ಸರ್ಕಾರ ಒಂದು ಕಡೆ ಉಚಿತ ಕರೆಂಟ್ ಕೊಡುವುದಾಗಿ ಘೋಷಿಸಿದೆ. ಮತ್ತೊಂದು ಕಡೆ ರಾಜ್ಯ ಲೋಕೋಪಯೋಗಿ ಇಲಾಖೆ (ಪಿಡಬ್ಲುಡಿ) ಬರೋಬ್ಬರಿ 8000 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿಯೇ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೋಂದಿಸಲು ಜನರಿಗೆ ದರ ಏರಿಕೆ ಬರೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದರ ಏರಿಕೆ ಅನುಷ್ಠಾನ ಒಂದನ್ನೇ ಮಾಡುತ್ತಿದೆ. ಈಗಾಗಲೇ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಜನರ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+