KEA: ವಿವಿಧ ಕಾಲೇಜುಗಳಿಂದ ಕೋರ್ಸ್ ತೆಗೆದು ಹಾಕಿ ಪಟ್ಟಿ ಪ್ರಕಟ: ಯುಜಿಸಿಇಟಿ-2025 ಅಭ್ಯರ್ಥಿಗಳ ಗಮನಕ್ಕೆ..
ಯುಜಿಸಿಇಟಿ-2025 ಅಭ್ಯರ್ಥಿಗಳಿಗೆ ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸರ್ಕಾರವು ನೀಡಿದ ಸೀಟು ಮ್ಯಾಟ್ರಿಕ್ಸ್ ಅನ್ವಯ ಅಭ್ಯರ್ಥಿಗಳ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಿದೆ. ಇದೀಗ ಕಾಲೇಜುಗಳಿಂದ ಕೋರ್ಸ್ ತೆಗೆದು ಹಾಕಿದ್ದರ ಕುರಿತು ಮಾಹಿತಿ ತಿಳಿಸಿದೆ. ಅಭ್ಯರ್ಥಿಗಳು ಈ ವಿಷಯವನ್ನು ಗಮನಿಸಬೇಕಿದೆ.
ಸೀಟ್ ಮ್ಯಾಟ್ರಿಕ್ಸ್ ಅನ್ವಯ ಕರ್ನಾಟಕ ಪರೀಕ್ಷೆ 2025 ನೇ ಸಾಲಿನಲ್ಲಿ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ನೀಡಿದೆ. ಈ ಮಧ್ಯೆ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಪತ್ರದಲ್ಲಿ ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಈ ಮೊದಲು ನೀಡಿದ್ದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಷ್ಕರಿಸಿದೆ. ಈ ಕೆಳಕಂಡ ಕಾಲೇಜುಗಳ ಕೋರ್ಸುಗಳನ್ನು ಆರ್ಜಿಯುಹೆಚ್ಎಸ್ ಅವರು ಸೀಟ್ ಮ್ಯಾಟ್ರಿಕ್ಸ್ ನಿಂದ ತೆಗೆದು ಹಾಕಿರುವ ವಿವರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ನೀಡಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಬುಧವಾರ ಮಾಹಿತಿ ನೀಡಿದ್ದಾರೆ.

ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಷ್ಕರಣೆ ಮಾಡಿ ಇಲ್ಲಿ ನೀಡಲಾಗಿರುವ ಪಟ್ಟಿಯಲ್ಲಿರುವ ಕಾಲೇಜುಗಳಲ್ಲಿನ ಕೋರ್ಸ್ ಗಳನ್ನು ತೆಗೆದು ಹಾಕಲಾಗಿದೆ. ಕೆಲವು ಕಾಲೇಜುಗಳಲ್ಲಿನ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಈ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿರುವವರು ಛಾಯ್ಸ್-3 ಅನ್ನು ಆಯ್ಕೆ ಮಾಡಿಕೊಂಡು ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ. ಹಾಗಾದ್ರೆ ಯಾವೆಲ್ಲ ಕಾಲೇಜುಗಳಲ್ಲಿ ಕೋರ್ಸ್ ತೆಗೆದು ಹಾಕಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕಾಲೇಜು-ಕೋರ್ಸ್‌ಗಳ ವಿವರ ಇಲ್ಲಿದೆ
* ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಕ್ಯುರಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, : ತೆಗೆದು ಹಾಕಿದ ಕೋರ್ಸ್ - BA B.Sc Anaest, Oper.Theate
* ರಾಮನಗರದಲ್ಲಿರುವ ಐಕಾನ್ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು: ಕೋರ್ಸ್- BL B.Sc ವೈದ್ಯಕೀಯ ಪ್ರಯೋಗಾಲಯ, ಟೆಕ್. ಮತ್ತು ಬಿಐ ಬಿ.ಎಸ್ಸಿ ಇಮೇಜಿಂಗ್ ಟೆಕ್.
* ಬೆಂಗಳೂರಿನಲ್ಲಿರುವ ಮಲ್ಲಿಗೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್: ಕೋರ್ಸ್- ಬಿಐ ಬಿ.ಎಸ್ಸಿ ಇಮೇಜಿಂಗ್ ಟೆಕ್., ಬಿಎಲ್ ಬಿ.ಎಸ್ಸಿ ಮೆಡಿಕಲ್ ಲ್ಯಾಬ್. ಟೆಕ್., ಮತ್ತು ಬಿಎ ಬಿ.ಎಸ್ಸಿ ಅನೆಸ್ಟ್, ಆಪರೇಟರ್. ಥಿಯೇಟ್..
* ರಾಮನಗರ ಜಿಲ್ಲೆಯ ಶ್ರೀಮತಿ ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು: ಕೋರ್ಸ್- ಬಿಐ ಬಿ.ಎಸ್ಸಿ ಇಮೇಜಿಂಗ್ ಟೆಕ್., ಬಿಎ ಬಿ.ಎಸ್ಸಿ ಅನೆಸ್ಟ್, ಆಪರೇಟರ್. ಥಿಯೇಟ್, ಬಿಎಲ್ ಬಿ.ಎಸ್ಸಿ ಮೆಡಿಕಲ್ ಲ್ಯಾಬ್. ಟೆಕ್., ಬಿಪಿ ಬಿ.ಎಸ್ಸಿ ಪರ್ಫ್ಯೂಷನ್ ಟೆಕ್., ಮತ್ತು ಬಿಡಿ ಬಿ.ಎಸ್ಸಿ ರೀನಲ್ ಡಯಾಲಿಸಿಸ್ ಟೆಕ್
* ತಿಪಟೂರಿನ ಮುದ್ರಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್: ಕೋರ್ಸ್ ಬಿಐ ಬಿ.ಎಸ್ಸಿ ಇಮೇಜಿಂಗ್ ಟೆಕ್. ಮತ್ತು ಬಿಎಲ್ ಬಿ.ಎಸ್ಸಿ ಮೆಡಿಕಲ್ ಲ್ಯಾಬ್. ಟೆಕ್ ಅನ್ನು ತೆಗೆದು ಹಾಕಲಾಗಿದೆ. ಇತರ ಕಾಲೇಜುಗಳಲ್ಲಿ ತೆಗೆದು ಹಾಕಿ ಕೋರ್ಸ್ ವಿವರವಾದ ಪಟ್ಟಿಯನ್ನು ನೀವು ಈ ಲಿಂಕ್ https://cetonline.karnataka.gov.in/keawebentry456/ugcet2025/20250806164629kannada.pdf ಕಾಪಿ ಪೇಸ್ಟ್ ಮಾಡಿ ಪರಿಶೀಲಿಸಬಹುದೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications