KEA: ವೃತ್ತಿಪರ ಕೋರ್ಸ್‌ಗಳ ಎಲ್ಲ ಪರೀಕ್ಷೆ, ನೋಂದಣಿಯಲ್ಲಿ ಮಹತ್ವ ಬದಲಾವಣೆ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( KEA) ವೃತ್ತಿಪರ ಕೋರ್ಸ್‌ಗಳ ಎಲ್ಲಾ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ವಿನೂತನ ವ್ಯವಸ್ಥೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗುವಂತೆ ಪ್ಲಾನ್ ಮಾಡಿಕೊಂಡಿದೆ. ಸೀಟು ಬ್ಲಾಕ್ ಮಾಡುವ ಭೀತಿ ತಡೆಯಲು ಇನ್ನಿತರ ಸುಧಾರಣೆಗಾಗಿ ಬದಲಾವಣೆಗೆ ಮುಂದಾಗಿರುವುದಾಗಿ ಕೆಇಎ ತಿಳಿಸಿದೆ.
ಹೌದು, ಮುಂದಿನ ವರ್ಷದಿಂದ ವೃತ್ತಿಪರ ಕೋರ್ಸ್‌ಳ ಸೀಟುಗಳನ್ನು ಬಯಸುವ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಆಧಾರ್-ಸಂಯೋಜಿತ ನೋಂದಣಿ ಮಾಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ಲಾನ್ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಆಧಾರ್ ಲಿಂಕಿಂಗ್ ನೋಂದಣಿ ನಿಯಮ ಜಾರಿ ತರಲು ಕೆಇಎ ಪ್ರಸ್ತಾವನೆ ಸಿದ್ಧಪಡಿಸಿದೆ.

ರಾಜ್ಯ ಇ-ಆಡಳಿತ ಇಲಾಖೆಗೆ ಮುಂದೆ ಪ್ರಸ್ತಾವನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿದ್ಧಪಡಿಸಿದ ಪ್ರಸ್ತಾವನೆ ಮಂಗಳವಾರ ಕರ್ನಾಟಕ ಇ-ಆಡಳಿತ ಇಲಾಖೆಗೆ ಸಲ್ಲಿಸಿದ್ದು, ಹೊಸ ವ್ಯವಸ್ಥೆ ಜಾರಿಗೆ ಅವಕಾಶ ಕಲ್ಪಿಸುವಂತೆ ಕೋರಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಸ್ತಾವನೆ ಸ್ವೀಕರಿಸಿರುವ ಇ-ಆಡಳಿತ ಇಲಾಖೆಯು ಕೆಇಎ ನಿರ್ಧಾರದ ಪರವಾಗಿದೆ. ಅದನ್ನು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಶೀಘ್ರದಲ್ಲೇ ಅನುಮೋದನೆಗೊಳ್ಳಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ವ್ಯವಸ್ಥೆಯಿಂದ ಏನು ಪ್ರಯೋಜನ?
ವೃತ್ತಿ ಕೋರ್ಸ್‌ಗಳ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆಧಾರ್-ಲಿಂಕಿಂಗ್ ಸಹಿತ ನೋಂದಣಿ ಆದರೆ ಸಾಕಷ್ಟು ಪ್ರಯೋಜನ ಇವೆ. ಸೀಟ್ ಬ್ಲಾಕಿಂಗ್ ಭೀತಿ ತಡೆಬಹುದಾಗಿದೆ. ಕೆಇಎಗೆ ವಿದ್ಯಾರ್ಥಿಗಳು, ಸೀಟುಗಳ ಬಗ್ಗೆ ದೃಢೀಕರಣ, ಖಚಿತತೆ ಸಿಗಲಿದೆ. ಮುಖ್ಯವಾಗಿ ನೋಂದಣಿ ಸೇರಿದಂತೆ ಇನ್ನಿತರ ಹಂತಗಳಲ್ಲಿ ಆಗುವ ನಿಯಮ ಉಲ್ಲಂಘನೆ ಮತ್ತು ದುಷ್ಕೃತ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಅಲ್ಲದೇ ಆಧಾರ್‌ಗೆ ಲಿಂಕ್ ಇರುವ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ರವಾನಿಸಲು ಅವಕಾಶ ನೀಡುವುದನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ವೃತ್ತಿಪರ ಕೋರ್ಸ್‌ಗಳಿಗೆ ಮಾತ್ರವಲ್ಲದೇ ರಾಜ್ಯ ಪ್ರಾಧಿಕಾರವು ವಿವಿಧ ಇಲಾಖೆಗಳಿಗೆ ನಡೆಸುವ ನೇಮಕಾತಿ ಪರೀಕ್ಷೆಗಳಿಗೆ ಆಧಾರ್-ಸಂಯೋಜಿತ ನೋಂದಣಿ ವ್ಯವಸ್ಥೆ ಪರಿಚಯಿಸುವ ಉದ್ದೇಶ ಹೊಂದಿದೆ. ಇದು ಜಾರಿಯಾದರೆ ಪರಿಣಾಮಕಾರಿ, ಸುಧಾರಿತ ವ್ಯವಸ್ಥೆಯೊಂದು ಪ್ರಾಧಿಕಾರದಲ್ಲಿ ಅಳವಡಿಕೆ ಆಗಲಿದೆ.
ಕೆಇಎ ಈಗಾಗಲೇ ಇಂಜಿನಿಯರಿಂಗ್ ಸೀಟು ಹಂಚಿಕೆಯ ಎಲ್ಲಾ ಸುತ್ತುಗಳನ್ನು ಪೂರ್ಣಗೊಳಿಸಿದೆ. ಅದರ ಬಳಿಕವೂ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಕೋಟಾದಡಿ ಸೀಟು ಹಂಚಿಕೆ ವೇಳೆ ಅಕ್ರಮದ ಆರೋಪ ಕೇಳಿ ಬಂದಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ, ಆಧಾರ್ ಲಿಂಕಿಂಗ್ ನೋಂದಣಿಗೆ ಕೆಇಎ ಮನಸ್ಸು ಮಾಡಿದೆ.
ಇನ್ನೂ ಕೇಳಿ ಬಂದ ಆರೋಪದಲ್ಲಿ ಒಂದೇ ಐಪಿ ಅಡ್ರೆಸ್ ಬಳಸಿಕೊಂಡು ಅನೇಕ ವಿದ್ಯಾರ್ಥಿಗಳು ಸೀಟುಗಳನ್ನು ಬ್ಲಾಕ್ ಮಾಡಿದ್ದಾರೆ. ಅಲ್ಲದೇ ಹಲವು ವಿದ್ಯಾರ್ಥಿಗಳು ನೋಂದಣಿ ವೇಳೆ ಪ್ರಾಧಿಕಾರಕ್ಕೆ ನೀಡಿದ್ದ ಮೊಬೈಲ್ ನಂಬರ್ ಇತರ ಮಾಹಿತಿಗಳು ತಪ್ಪ ಎಂಬುದು ಗೊತ್ತಾಗಿದೆ ಎಂದು ಅವರು ವಿವರಿಸಿದ್ದಾರೆ.
ಇಂತಹ ಅಕ್ರಮಗಳಗಳಲ್ಲಿ ಕೆಲವರ ಕೈವಾಡ, ಕಾಲೇಜು ಆಡಳಿತ ಮಂಡಳಿ ಶಾಮೀಲು ಇರಬಹುದೆಂದು ಊಹಿಸಲಾಗಿದೆ. ಅಲ್ಲದೇ ಇಂತಹ ಕೃತ್ಯಗಳು ಭವಿಷ್ಯದಲ್ಲಿ ನಡೆಯದಂತೆ ತಡೆಯಲು ಈ ಆಧಾರ್ ಲಿಂಕಿಂಗ್ ನೋಂದಣಿಗೆ ಅವಕಾಶ ನೀಡಬೇಕಿದೆ ಎಂದು ಅವರು ಮನವಿ ಮಾಡಿದರು.












Click it and Unblock the Notifications