KEA- KSET 2024: ಇದೇ ನವೆಂಬರ್‌ನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಗಮನಿಸಿ
ಬೆಂಗಳೂರು, ನವೆಂಬರ್ 27: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನ ಕೆಸೆಟ್-2024 ಮತ್ತು ಸಹಾಯಕ ಪ್ರಾಧ್ಯಾಪಕರು, ರಾಯಚೂರು ವಿಶ್ವವಿದ್ಯಾಲಯ ಇವುಗಳಿಗೆ ಸಂಬಂಧಿಸಿದಂತೆ ಇದೇ ನವೆಂಬರ್ 24ರಂದು ಪರೀಕ್ಷೆ ನಡೆಸಿತ್ತು. ಪರೀಕ್ಷೆಗಳು ಯಶಸ್ವಿಯಾಗಿ ನಡೆದ ಬೆನ್ನಲ್ಲೆ ಕೀ ಉತ್ತರಗಳನ್ನುಗಳು ತನ್ನ ವೆಬ್‌ಸೈಟ್‌ನಲ್ಲಿ ಬುಧವಾರ ನವೆಂಬರ್ 27ರಂದು ಬಿಡುಗಡೆ ಮಾಡಿದೆ.
ಕೆಸೆಟ್ ಕೀ ಉತ್ತರಗಳ ಜೊತೆಗೆ ಬಿಎಸ್‌ಸಿ ಮತ್ತ ಅಲೈಡ್ ಹೆಲ್ತ ಸೈನ್ಸ್ ಕೋರ್ಸ್‌ಗಳಿಗೆ ಸೀಟು ಹಂಚಿಕೆಯ ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಆಕ್ಷೇಪಣೆ ಸಲ್ಲಿಸುವಂತೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಕೋರಿದೆ.

ಕರ್ನಾಟಕಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ 24.11.2024 ರಂದು ಕೆಸೆಟ್-2024 ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಿಗಾಗಿ ಪರೀಕ್ಷೆ ನಡೆಸಿತು. ಆ ಪರೀಕ್ಷೆಗಳ ವಿವಿಧ ವಿಷಯಗಳ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.
ಸದರಿ ಕೀ ಉತ್ತರಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ http://kea.kar.nic.in ನೀಡಲಾಗಿರುವ ಲಿಂಕ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಪ್ರತಿ ಆಕ್ಷೇಪಣೆಗೆ ರೂ. 100/- ನ್ನು ಆನ್‌ಲೈನ್ ಮೂಲಕ ದಿನಾಂಕ 29.11.2024 ಸಂಜೆ 5.00 ರೊಳಗೆ ಶುಲ್ಕ ಪಾವತಿ ಮಾಡಿ ದಾಖಲೆಗಳ ಸಹಿತ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ವಿಷೇಷ ಸೂಚನೆ ಎಂದರೆ ಆಕ್ಷೇಪಣೆ ಜೊತೆಗೆ ಪಾವತಿಯಾದ ಶುಲ್ಕವನ್ನು ಹಿಂದಿರುಗಿಸುವುದಿಲ್ಲ ಎಂದು ಕೆಇಎ ತಿಳಿಸಿದೆ.
ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿಷಯ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್,. ಪ್ರಶ್ನೆ ಸಂಖ್ಯೆಗಳ ವಿವರಗಳನ್ನು ಹಾಗೂ ಪೂರಕ ದಾಖಲೆಗಳನ್ನು PDF ರೂಪದಲ್ಲಿ ಸಲ್ಲಿಸಬೇಕು. ಮೇಲ್ಕಂಡ ನಿಗದಿತ ಮಾಹಿತಿಗಳನ್ನು ಸಲ್ಲಿಸದ ಅಥವಾ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ತೀರ್ಮಾನಿಸುವ ಕೀ-ಉತ್ತರಗಳು ಅಂತಿಮವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
BSc ನರ್ಸಿಂಗ್ AHS ಕೋರ್ಸ್ ಸೀಟು ಹಂಚಿಕೆ
ಬಿಎಸ್‌ಸಿ ನರ್ಸಿಂಗ್ ಮತ್ತು ಎಎಚ್‌ಎಸ್ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ. ಅದರ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವ ಅವಧಿಯನ್ನು ನ.28ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಪ್ರವೇಶ ಪತ್ರದೊಂದಿಗೆ ನವೆಂಬರ್ 29ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳೂವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.
KEA: ಪಿಜಿ ಮೆಡಿಕಲ್ ಸೀಟು ಹಂಚಿಕೆ ಪಟ್ಟಿ ಪ್ರಕಟ
KEA PG Medical-2024 ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನ.27ರಿಂದ 29ರವರೆಗೆ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಆಯ್ಕೆ ಒಂದು ಅದಕ್ಕಿಂತ ಹೆಚ್ಚು ಎರಡು ದಾಖಲುಸವವರು ಮುಂದಿನ ಡಿಸೆಂಬರ್ 2ರೊಳಗೆ ಶುಲ್ಕ ಪಾವತಿಸಬೇಕು. ಸೀಟು ಹಂಚಿಕೆಯಲ್ಲಿ ಒಂದು ಆಯ್ಕೆಗೆ ಮಾತ್ರವೇ ನವೆಂಬರ್ 28ರಿಂದ ಡಿಸೆಂಬರ್ 2ವರೆಗೆ KEA ಪ್ರಾಧಿಕಾರಕ್ಕೆ ಬಂದು ದಾಖಲೆಗಳನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ: ಅಂಕಪಟ್ಟಿ ಪ್ರಕಟ
ಪ್ರಾಧಿಕಾರವು ಗ್ರಾಮ ಆಡಳಿತ ಅಧಿಕಾರಿ (Village Administraror Officer Recruitment -VAO Jobs) ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಆ ಪರೀಕ್ಷೆಯ ಪತ್ರಿಕೆ 1 ಮತ್ತು 2 ರ ಅಂತಿಮ ಕೀ ಉತ್ತರ ಹಾಗೂ ತಾತ್ಕಾಲಿಕ ಅಂಕ ಪಟ್ಟಿಯನ್ನು KEA ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಆಕ್ಷೇಪಣೆಗಳು ಇದ್ದಲ್ಲಿ ಅಭ್ಯರ್ಥಿಗಳು ನ.28ರೊಳಗೆ ಕೆಇಎ ಲಿಂಕ್ ಮೂಲಕ ಅಗತ್ಯ ದಾಖಲೆಗಳ ಸಮೇತರಾಗಿ ದಾಖಲೆಗಳ ಸಮೇತ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೇಲಿನ ಎಲ್ಲ ಅಭ್ಯರ್ಥಿಗಳು ಕೆಇಎ http://kea.kar.nic.in ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಲಾಗಿನ್ ಆಗಿ ನಿಮಗೆ ಸಂಬಂಧಿಸಿದ ಲಿಂಕ್ ಬಳಸಿ ನೀವು ಮಾಹಿತಿ ತಿಳಿಯಬೇಕು.












Click it and Unblock the Notifications