KEA-PGCET 2024: ಕರ್ನಾಟಕ ಪಿಜಿಸಿಇಟಿ ಅಣಕು ಹಂಚಿಕೆ ಫಲಿತಾಂಶ ಬಿಡುಗಡೆ, ಇಲ್ಲಿ ಪರಿಶೀಲಿಸಿ
ಬೆಂಗಳೂರು, ನವೆಂಬರ್ 09: ಕರ್ನಾಟಕದಲ್ಲಿ ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆ (PGCET) ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಇಂದು ನವೆಂಬರ್ 9 ರಂದು ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೊದಲ ಸುತ್ತಿನ ಕಾಲೇಜು ಹಂಚಿಕೆಗಳ ಅಣಕು ಫಲಿತಾಂಶ ಬಿಡುಗಡೆ ಮಾಡಲಿದೆ. ಇದರಿಂದ ಅಭ್ಯರ್ಥಿಗಳಿಗೆ ಏನೆಲ್ಲ ಅನುಕೂಲ ಆಗಲಿದೆ. ಫಲಿತಾಂಶ ಪರಿಶೀಲನೆಯ ಅಪ್ಡೇಟ್ ಮಾಹಿತಿ ಇಲ್ಲಿದೆ.
ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆ (ಎಂಬಿಎ) ಬರೆದ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ಸಿಗಲಿರುವ ಈ ಫಲಿತಾಂಶವ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಗಮನಿಸಿಬಹುದು. ನಿಮ್ಮ ಕಾಲೇಜುಗಳು ಹಂಚಿಕೆ ಮಾಹಿತಿಯ ಅಣಕು ಪಟ್ಟಿ/ವಿವರ ಇಲ್ಲಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆ (PGCET) ಅಣಕು ಹಂಚಿಕೆ 2024 ಬಿಡುಗಡೆಯ ಮಾಹಿತಿಯು ಅಭ್ಯರ್ಥಿಗಳಿಗೆ ತಮೆಗೆ ಯಾವ ಕಾಲೇಜು ಸಿಗಬಹುದು. ಅದರ ಹಂಚಿಕೆಯ ಕುರಿತು ಕಲ್ಪನೆ ಸಿಗಲಿದೆ. ಆದ್ದರಿಂದ ಎಂಬಿಎ, ಇತರ ಸ್ನಾತಕೋತ್ತರ ಪರೀಕ್ಷೆ ಬರೆದವರಲ್ಲಿ ಇಂದಿನ ಫಲಿತಾಂಶವು ಕಾತರ ಹೆಚ್ಚಾಗುವಂತೆ ಮಾಡಿದೆ.
PGCET ಅಣಕು ಹಂಚಿಕೆ ಫಲಿತಾಂಶ ಪರಿಶೀಲನೆ ಹೇಗೆ?
ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಅಣಕು ಕಾಲೇಜು ಹಂಚಿಕೆ ಫಲಿತಾಂಶ ನೋಡಲು ಇಲ್ಲವೇ ಡೌನ್‌ಲೋಡ್ ಮಾಡಲು ಮೊದಲು ತಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA Website) ಅಧಿಕೃತ ಜಾಲತಾಣಕ್ಕೆ https://cetonline.karnataka.gov.in/kea/ ಭೇಟಿ ನೀಡಬೇಕು. ಅಲ್ಲಿ ಕೇಳಲಾಗುವ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಬೇಕು. ಬಳಿಕ ಪರದೆ ಮೇಲೆ ಕಾಣುವ KEA PGCET-2024 ವೆಬ್‌ಸೈಟ್-cetonline.karnataka.gov.in ನಲ್ಲಿ ನಮೂದಿಸಿ. ನಂತರ ಕೆಳಗೆ ಸ್ಕ್ರಾಲ್ ಮಾಡಿ.
PGCET ಅಣಕು ಹಂಚಿಕೆ ಫಲಿತಾಂಶ ಪ್ರಮುಖ ದಿನಗಳು, ಪಟ್ಟಿ
* ನವೆಂಬರ್ 9: ಅಣಕು ಹಂಚಿಕೆ ಫಲಿತಾಂಶ ಬಿಡುಗಡೆ
* ನವೆಂಬರ್ 9 ರಿಂದ 12: ಅಭ್ಯರ್ಥಿಗಳಿಗೆ ಆಯ್ಕೆಗಳ ಬದಲಾವಣೆಗೆ ಅವಕಾಶ
* ನವೆಂಬರ್ 12: ಅಂತಿಮ ಕರ್ನಾಟಕ PGCET ಹಂತ 1 ಸೀಟು ಹಂಚಿಕೆ ಬಿಡುಗಡೆ
* ನವೆಂಬರ್ 13 ರಿಂದ 14: ಹಂಚಿಕೆಯಾದ ಅಭ್ಯರ್ಥಿಗಳಿಂದ ಆಯ್ಕೆಯ ಅವಕಾಶ
ಇನ್ನೂ ಅಭ್ಯರ್ಥಿಗಳು ಕರ್ನಾಟಕ PGCET ಮೊದಲ ಸುತ್ತಿನ ಹಂಚಿಕೆ 2024ರ ಸ್ಥಿತಿಗತಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ KEA PGCET-2024 ವೆಬ್‌ಸೈಟ್-cetonline.karnataka.gov.in ನಲ್ಲಿ ಪರಿಶೀಲಿಸಬೇಕು. ಈ ಹಂಚಿಕೆಗಳಲ್ಲಿ ಬದಲಾವಣೆ ಅವಕಾಶವನ್ನು ಪ್ರಾಧಿಕಾರ ನೀಡಲಿದೆ.
ಆಯ್ಕೆಗಳ ಹಂಚಿಕೆ ಮರು ಹೊಂದಿಕೆ, ಮರು ಪರಿಗಣೆನೆ ಜೊತೆಗೆ ಸಂಪಾದಿಸಿದ ಆಯ್ಕೆಗಳ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನವೆಂಬರ್ 12 ರಂದು ಕರ್ನಾಟಕ PGCET ಅಣಕು ಹಂಚಿಕೆ 2024 ಫಲಿತಾಂಶ ಬಿಡುಗಡೆ ಮಾಡಲಿದೆ. ನವೆಂಬರ್ 13 ರಿಂದ 15ರೊಳಗೆ ಸಿಟು ಸ್ವೀಕಾರ ಶುಲ್ಕ ಪಾವತಿಸುವಂತೆ ತಿಳಿಸಲಾಗಿದೆ.












Click it and Unblock the Notifications