KEA: DCET-25 ವಿದ್ಯಾರ್ಥಿಗಳು ಗಮನಿಸಿ! ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಜು.19 ಕೊನೆ ದಿನ..!
ಬೆಂಗಳೂರು, ಜುಲೈ 18: ಕರ್ನಾಟಕ ಡಿಸಿಇಟಿ (DCET-25) ಪರೀಕ್ಷೆಯನ್ನು ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗಿತ್ತು. ಎಲ್‌ಇ ನಿಂದ ಬಿ.ಟೆಕ್ ಮತ್ತು ಬಿ.ಆರ್ಕ್ ಕೋರ್ಸ್‌ಗಳ 1 ನೇ ವರ್ಷಕ್ಕೆ ಪ್ರವೇಶ ಪಡೆಯಲು ಇಚ್ಛಿಸುವ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷೆ ಇದಾಗಿದ್ದು, ಈಗಾಗಲೇ ಫಲಿತಾಂಶ ಹೊರ ಬಿದ್ದಿದೆ. ಇಂದು ಶುಕ್ರವಾರ (ಜುಲೈ 18) DCET-25 ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ (https://cetonline.karnataka.gov.in/kea/) ಪ್ರಕಟಿಸಿದೆ.
ಕರ್ನಾಟಕ ಡಿಸಿಇಟಿ ಪರೀಕ್ಷೆ 2025 ಇದೇ ವರ್ಷ 2025 ಮೇ 31 ರಂದು ನಡೆಸಿ ಜೂನ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತು. ಅಭ್ಯರ್ಥಿಗಳ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸಿಇಟಿ 2025ರ ಮೊದಲ ಸುತ್ತಿನ ಸೀಟು ಹಂಚಿಕೆಯಾದವರು ಎಚ್ಚರಿಕೆಯಿಂದ ಜು.19ರಂದು ಮಧ್ಯಾಹ್ನ 3ಗಂಟೆ ಒಳಗೆ ತಮಗೆ ಸೂಕ್ತ ಎನಿಸಿದ ಛಾಯ್ಸ್ ದಾಖಲಿಸಬೇಕು. ಒಂದು ವೇಳೆ ಯಾವುದೇ ಛಾಯ್ಸ್ ದಾಖಲಿಸದೇ ಸುಮ್ಮನಿದ್ದರೂ ಅಂತಹವರನ್ನು ನಂತರದ ಸುತ್ತುಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಸೀಟು ಸಿಕ್ಕಿರುವುದು ಸಮಾಧಾನವಾದರೆ ಛಾಯ್ಸ್-1 ಅನ್ನು ನಮೂದಿಸಿ, ಶುಲ್ಕ ಪಾವತಿಸಬೇಕು. ಬಳಿಕ ಜುಲೈ 21ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. 1 ಮತ್ತು 2 ಆಯ್ಕೆ ಮಾಡಿಕೊಂಡವರು ಮಾತ್ರ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್‌ಗೆ (https://cetonline.karnataka.gov.in/kea/) ಭೇಟಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಧಿ ವಿಸ್ತರಿಸಿದ್ದ ಕೆಇಎ
ಕಳೆದ ವಾರದ KEA ಡಿಸಿಇಟಿ-2025 ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಚೆ / ಆಯ್ಕೆಗಳನ್ನು ದಾಖಲಿಸುವುದಕ್ಕೆ ದಿನಾಂಕ 09-07-2025ರ ಸಂಜೆ 4 ಗಂಟೆ ವರೆಗೆ ವಿಸ್ತರಣೆ ಮಾಡಲಾಗಿತ್ತು. ಎರಡನೇ ವರ್ಷದ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕಾಗಿ, ಅಣುಕು ಸೀಟು ಹಂಚಿಕೆಯನ್ನು ಮಾಡಿ ಫಲಿತಾಂಶ ಜುಲೈ 07 ರಂದು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಅಭ್ಯರ್ಥಿಗಳ ಪ್ರಕಟಿಸಲಾಗಿದೆ. ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಇಚ್ಚೆ / ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು.
ಮೊದಲನೇ ಸುತ್ತಿನ ನಂತರ ಇಚ್ಚೆ/ಆಯ್ಕೆಗಳನ್ನು ಸೇರಿಸಲು ಅವಕಾಶ ಇರುವುದಿಲ್ಲ ಎಂಬುದು ಅಭ್ಯರ್ಥಿಗಳಿಗೆ ತಿಳಿದ ಸಂಗತಿಯಾಗಿದೆ. ಸೀಟು ಹಂಚಿಕೆ ಬಳಿಕ ಆದ್ದರಿಂದ ಇಚ್ಚೆ / ಆಯ್ಕೆಗಳನ್ನು (options) ನಮೂದಿಸುವ ವೇಳೆ ಎಚ್ಚರಿಕೆ ವಹಿಸುವಂತೆ ತಿಲಿಸಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.












Click it and Unblock the Notifications