KEA Updates: ಪಿಜಿ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ, ಸೆ.28 ಕೊನೆಯ ದಿನ
ಬೆಂಗಳೂರು, ಸೆಪ್ಟಂಬರ್ 25: ವಿವಿಧ ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅದಕ್ಕಾಗಿ ಆಯ್ಕೆ ದಾಖಲಿಸಲು ಅಧಿಕೃತವಾಗಿ ಲಿಂಕ್ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಗಮನಿಸಿ ನಿಗದಿತ ದಿನಾಂಕದೊಳಗೆ ಇಚ್ಛೆ ಅಥವಾ ಆಯ್ಕೆ ದಾಖಲಿಸುವಂತೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಕೋರಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) MBA, MCA, ME, M.Tech, M.Arch ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಇಂದು ಸೆಪ್ಟಂಬರ್ 25ರ ಬುಧವಾರದಂದು ಆರಂಭಿಸಿದೆ. ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಇಂದು ಲಿಂಕ್ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳಿಗೆ ಆಯ್ಕೆ ದಾಖಲಿಸಲು ಸೆಪ್ಟಂಬರ್ 28ರವರೆಗೆ ಅವಕಾಶ ಇರುತ್ತದೆ ಎಂದು ಕೊನೆಯ ದಿನಾಂಕ ತಿಳಿಸಿದರು.

ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಇದೇ ಸೆಪ್ಟಂಬರ್ 29ರಂದು ಬಿಡುಗಡೆಗೊಳಿಸಲಾಗುವುದು. ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅಕ್ಟೋಬರ್ 3ರವರೆಗೆ ಅವಕಾಶ ಇರುತ್ತದೆ. ಅಕ್ಟೋಬರ್ 3ರಂದು ಸಂಜೆ 5ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು. ನಂತರ ಅಕ್ಟೋಬರ್ 4ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದವರು ಪೋಷಕರ ಜತೆ ಚರ್ಚಿಸಿ, ಛಾಯ್ಸ್ ದಾಖಲಿಸಲು ಅಕ್ಟೋಬರ್ 7ರವರೆಗೆ ಅವಕಾಶ ಕಲ್ಪಿಸಲಾಗಿದೆ. ಛಾಯ್ಸ್-1, ಛಾಯ್ಸ್-2 ದಾಖಲಿಸಿದವರು ಶುಲ್ಕ ಕಟ್ಟಬೇಕು. ಛಾಯ್ಸ್-1 ದಾಖಲಿಸಿದವರು ಅಕ್ಟೋಬರ್ 9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕೆಂದು ಅವರು ಸೂಚನೆ ನೀಡಿದ್ದಾರೆ.
UGNEET-25 ಅಂತಿಮ ಫಲಿತಾಂಶ ಪ್ರಕಟ
ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತೆ ಪರೀಕ್ಷೆ-ಪದವಿ ಪೂರ್ವ 2025 (UGNEET-25) ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸಿದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಎರಡನೇ ಸುತ್ತು ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಿದೆ. ಫಲಿತಾಂಶ ತಿಳೀಯಲು https://cetonline.karnataka.gov.in/KEA/ugneet2025 ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
ಸೀಟು ಹಂಚಿಕೆಯಾದವರು ಮಧ್ಯಾಹ್ನ 2 ಗಂಟೆ ನಂತರ ಶುಲ್ಕ ಪಾವತಿಸಿ, ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಸೆಪ್ಟಂಬರ್ 26ರೊಳಗೆ ಶುಲ್ಕ ಪಾವತಿಸಿ, ಸೆಪ್ಟಂಬರ್ 28ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕೆಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.












Click it and Unblock the Notifications