ಬಿ ಫಾರ್ಮಾ ಲ್ಯಾಟರಲ್ ಪ್ರವೇಶಾತಿ: ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಿದ KEA

ಬೆಂಗಳೂರು: ಫಾರ್ಮಸಿ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ನೇ ಸಾಲಿನ ಬಿ-ಫಾರ್ಮಾ ಲ್ಯಾಟರಲ್ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕೃತ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.

ಡಿ-ಫಾರ್ಮ ಮುಗಿಸಿ, ನೇರವಾಗಿ ಬಿ-ಫಾರ್ಮ ಕೋರ್ಸ್‌ನ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳು ಈ ವೇಳಾಪಟ್ಟಿಯ ಅನುಸಾರ ಮುಂದಿನ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ತಿಳಿಸಿದ್ದಾರೆ.

KEA

ಮೆರಿಟ್ ಪಟ್ಟಿ ಪ್ರಕಟ

2025ನೇ ಸಾಲಿನ ಬಿ-ಫಾರ್ಮಾ ಲ್ಯಾಟರಲ್ ಪ್ರವೇಶಾತಿಗೆ ಸಂಬಂಧಿಸಿದಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಆಗಸ್ಟ್ 12, 2026 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಮೆರಿಟ್ ಪಟ್ಟಿಯನ್ನ ಪ್ರಕಟಿಸಿದೆ. ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮುಂದಿನ ಹಂತದ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಬೇಕು.

ಮೊದಲ ಹಂತವಾಗಿ, ಅಭ್ಯರ್ಥಿಗಳು 2026ರ ಆಗಸ್ಟ್ 19, ರಿಂದ ಆಗಸ್ಟ್ 20ರವರೆಗೆ ಕೆಇಎ ವೆಬ್‌ಸೈಟ್‌ನಿಂದ ತಮ್ಮ ವೆರಿಫಿಕೇಶನ್ ಸ್ಲಿಪ್ ಅನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಸ್ಲಿಪ್‌ನಲ್ಲಿರುವ ರಹಸ್ಯ ಕೀ ಮುಂದಿನ ಆಪ್ಷನ್ ಎಂಟ್ರಿ ಪ್ರಕ್ರಿಯೆಗೆ ಅತ್ಯಗತ್ಯವಾಗಿರುತ್ತದೆ.

ಕಾಲೇಜುಗಳ ಆಯ್ಕೆ ಪ್ರಕ್ರಿಯೆ

ವೆರಿಫಿಕೇಶನ್ ಸ್ಲಿಪ್ ಪಡೆದುಕೊಂಡ ನಂತರ ಅಭ್ಯರ್ಥಿಗಳಿಗೆ ಕಾಲೇಜುಗಳ ಆದ್ಯತೆಯನ್ನ ದಾಖಲಿಸಲು, ಅಂದರೆ ಆಪ್ಷನ್ ಎಂಟ್ರಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 20ರಿಂದ ಆಗಸ್ಟ್ 23ರವರೆಗೆ ಅಭ್ಯರ್ಥಿಗಳು ತಮ್ಮ ಇಚ್ಛೆಯ ಫಾರ್ಮಸಿ ಕಾಲೇಜುಗಳನ್ನ ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಲು ಬಯಸುವ ಕಾಲೇಜುಗಳ ಪಟ್ಟಿಯನ್ನ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡು, ಎಚ್ಚರಿಕೆಯಿಂದ ಆಪ್ಷನ್ ಎಂಟ್ರಿ ಮಾಡುವುದು ಸೂಕ್ತ.

ಅಂತಿಮ ಸೀಟು ಹಂಚಿಕೆ ಫಲಿತಾಂಶ

ವಿದ್ಯಾರ್ಥಿಗಳು ದಾಖಲಿಸಿರುವ ಆಪ್ಷನ್‌ಗಳ ಆಧಾರದ ಮೇಲೆ ಕೆಇಎ ಸೀಟುಗಳನ್ನ ಹಂಚಿಕೆ ಮಾಡಲಿದೆ. ಮೊದಲಿಗೆ ಆಗಸ್ಟ್ 24ರಂದು ಸಂಜೆ 4:00 ಗಂಟೆಯ ನಂತರ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನ ಪ್ರಕಟಿಸಲಾಗುವುದು. ಈ ತಾತ್ಕಾಲಿಕ ಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದರೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಒಂದು ದಿನದ ಕಾಲಾವಕಾಶ ನೀಡಲಾಗುತ್ತದೆ. ಆಕ್ಷೇಪಣೆಗಳನ್ನ ಪರಿಶೀಲಿಸಿದ ಬಳಿಕ, ಆಗಸ್ಟ್ 25ರಂದು ಸಂಜೆ 4:00 ಗಂಟೆಯ ನಂತರ ಅಂತಿಮ ಸೀಟು ಹಂಚಿಕೆ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಶುಲ್ಕ ಪಾವತಿ ಹಾಗೂ ಕಾಲೇಜು ಪ್ರವೇಶಾತಿ

ಅಂತಿಮ ಹಂಚಿಕೆ ಪಟ್ಟಿಯಲ್ಲಿ ಸೀಟು ಪಡೆದ ಅಭ್ಯರ್ಥಿಗಳು, ತಮಗೆ ನಿಗದಿಯಾಗಿರುವ ಶುಲ್ಕವನ್ನು ಪಾವತಿಸಿ ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಶುಲ್ಕ ಪಾವತಿಸಲು ಮತ್ತು ಅಲಾಟ್ ಆದ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 27 ಕೊನೆಯ ದಿನವಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+