KCET 2025 Update: ಕೆಸಿಇಟಿ ನೋಂದಣಿ ಆರಂಭ, ಅರ್ಜಿ ಸಲ್ಲಿಕೆ ವಿಧಾನ, ಪರೀಕ್ಷಾ ವೇಳಾಪಟ್ಟಿ, ಆನ್‌ಲೈನ್ ಲಿಂಕ್

ಬೆಂಗಳೂರು, ಜನವರಿ 18: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025) ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಇತ್ತೀಚೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿತ್ತು. ಅದರ ಬೆನ್ನಲ್ಲೆ ರಾಜ್ಯ ಪ್ರಾಧಿಕಾರ ಕೆಸಿಇಟಿ 2025 ನೋಂದಣಿ ಮತ್ತು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಯಾರೆಲ್ಲ ಈ ಬಾರಿ ಕೆಸಿಇಟಿ ಬರೆಯಲು ಇಚ್ಛಿಸುತ್ತೀರೋ ಅವರೆಲ್ಲ ಕೂಡಲೇ ನೋಂದಣಿ ಮಾಡಿಕೊಂಡು ಮುಂದಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025)ಗೆ ನೋಂದಣಿಯನ್ನು ಇದೇ ಜನವರಿ 23ರಿಂದ ಆರಂಭಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿರ್ಮಾನಿಸಿ ವೇಳಾಪಟ್ಟಿ ಪ್ರಕಟಿಸಿದೆ. ಈ ಕುರಿತು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

KCET 2025 Exam Date Announced By KEA Registration Start From Jan 23rd How to Apply KCET

ಕೆಸಿಇಟಿ 2025 ನೋಂದಣಿ ಜನವರಿ 23ರಿಂದ ಆರಂಭವಾಗಿದೆ ಫೆಬ್ರವರಿ 21ಕ್ಕೆ ಅಂತ್ಯಗೊಳ್ಳಲಿದೆ. ಅದು ನೋಂದಣಿಯ ಕೊನೆಯ ದಿನವಾಗಿದೆ. ಕೆಸಿಇಟಿ ಆಸಕ್ತ ಅಭ್ಯರ್ಥಿಗಳು KEA ಅಧಿಕೃತ ಜಾಲತಾಣಕ್ಕೆ kea.kar.nic.in ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಬಹುದು. ಹೇಗೆ? ಅದರ ವಿಧಾನಗಳು ಇಲ್ಲಿವೆ.

ಕರ್ನಾಟಕ ಸಿಇಟಿ ಪರೀಕ್ಷೆ ವೇಳಾಪಟ್ಟಿ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಕೆಸಿಇಟಿ ಪರೀಕ್ಷೆಯು 2025ರ ಏಪ್ರಿಲ್ 16, 17 ಮತ್ತು 18 ರಂದು ಘೋಷಣೆ ಆಗಲಿದೆ.

* ಏಪ್ರಿಲ್ 16: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ

* ಏಪ್ರಿಲ್ 17: ಗಣಿತ ಮತ್ತು ಜೀವಶಾಸ್ತ್ರ ವಿಷಯ

* ಏಪ್ರಿಲ್ 18: ಕನ್ನಡ ಪರೀಕ್ಷೆ

ನೋಂದಣಿ ಮತ್ತು ಪರೀಕ್ಷಾ ದಿನಾಂಕ ಪ್ರಕಟಿಸಿದ ಸಚಿವ ಎಂ.ಸಿ.ಸುಧಾಕರ್ ಅವರು, ಕೆಇಎ ನಡೆಸುವ ಸಿಇಟಿ ಪರೀಕ್ಷೆ ವೇಳಾಪಟ್ಟಿ ಘೋಷಿಸಲಾಗಿದೆ. ಇದೇ ಮೊದಲ ಬಾರಿಗೆ ವರ್ಷದಲ್ಲಿ ನಡೆಯುವ ಎಲ್ಲಾ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಒಮ್ಮೆಲೇ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲವಾಗುವಂತೆ ಆಯಾ ಕಾಲೇಜುಗಳಲ್ಲಿಯೇ ದಾಖಲೆ ಪರಿಶೀಲನೆ ನಡೆಸಲು ತಂತ್ರಾಂಶ ಸಿದ್ಧಪಡಿಸಲಾಗಿದೆ ಎಂದರು.

KCET 2025 Exam Date Announced By KEA Registration Start From Jan 23rd How to Apply KCET

KCET 2025 ಗೆ ಅರ್ಜಿ ಸಲ್ಲಿಕೆ ಹೇಗೆ?

* ಕೆಸಿಟಿ ಅಭ್ಯರ್ಥಿಗಳು ಮೊದಲು ಕೆಇಎಯ ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡಿ.

* ಕೆಇಎ ಮುಖಪುಟದಲ್ಲಿ ಕಾಣುವ ಕರ್ನಾಟಕ ಸಿಇಟಿ ಲಿಂಕ್ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು.

* ಆಗ ಹೊಸ ಪುಟ ತೆರೆಯುತ್ತದೆ. ಅಲ್ಲಿ ಎಲ್ಲ ಮಾಹಿತಿ ನೀಡಿ ಲಾಗಿನ್ ಆಗಬೇಕು.

* ಲಾಗಿನ್ ಬಳಿಕ ಅರ್ಜಿ ನಮೂನೆ ಭರ್ತಿ ಮಾಡಬೇಕು.

* ಅರ್ಜಿ ಶುಲ್ಕ ಪಾವತಿಸಿ ಸಬ್ಮಿಟ್ ಆಯ್ಕೆ ಮಾಡಿಕೊಳ್ಳಬೇಕು

* ಈ ಮೇಲಿನ ಎಲ್ಲ ಪ್ರಕ್ರಿಯೆ ಆದ ಬಳಿಕ ದೃಢೀಕರಣಗೊಂಡ ಫೈಲ್ ಡೌನ್‌ಲೋಡ್ ಮಾಡಿಕೊಳ್ಳಿ.

* ಭವಿಷ್ಯದ ಅಗತ್ಯತೆಗಾಗಿ ಫೈಲ್ ಪ್ರತಿ ಪಡೆದುಕೊಳ್ಳಿ.

* ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್ ಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+